ಕಾರ್ಕಳದ ನೂರಾಳ್ ಬೆಟ್ಟು ವಿನ ಮನೆಯೊಂದರಲ್ಲಿ ಗಂಡ ಹೆಂಡತಿ ನಡುವೆ ಜಗಳ ನಡೆದಿದ್ದು, ಜಗಳ ತಾರಕಕ್ಕೇರಿ ಗಂಡ ಹಲ್ಲೆ ಮಾರಾಕಾಸ್ತ್ರದಿಂದ ನಡೆಸಿದ ಘಟನೆ ಜ.27 ರಂದು ನಡೆದಿದೆ.
ಗಂಡ ಹೆಂಡತಿ ನಡುವೆ ನಡೆದ ಜಗಳದಲ್ಲಿ ಕೋಪಿತಗೊಂಡ ಗಂಡ ಸುನಿಲ್ ಕುಮಾರ್ ಎಂಬಾತ ಮಾರಾಕಾಸ್ತ್ರದಿಂದ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಗಾಯಾಳು ಹೆಂಡತಿ ಗೀತಾರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಗಾಯಾಳುವಿನ ಸಹೋದರ ನೀಡಿದ ದೂರಿನ ಅನ್ವಯ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















