ಶಿಕ್ಷಣ, ನಾಯಕತ್ವ, ವ್ಯಕ್ತಿತ್ವ ವಿಕಸನ, ಜೀವನ ಮೌಲ್ಯಗಳು, ಸಾರ್ವಜನಿಕ ಸಭಾ ಕಾರ್ಯಕ್ರಮ ಶಿಷ್ಟಾಚಾರಗಳ ವಿಷಯದ ಬಗ್ಗೆ ಶೈಕ್ಷಣಿಕ ಕಾರ್ಯಾಗಾರವು ಫೆ. ೧ ರಂದು ಮೂಡಬಿದ್ರೆಯ ಆಳ್ವಾಸ್ ಕಾಲೇಜು ಆವರಣದಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ (ರಿ.), ಮಂಗಳೂರು, ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ, ಕೆನರಾ ಬ್ಯಾಂಕ್, ಕೇಂದ್ರ ಕಛೇರಿ, ಬೆಂಗಳೂರು ಮತ್ತು ಮರಾಟಿ ಸಮಾಜ ಸೇವಾ ಸಂಘ (ರಿ.), ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಾಗಾರದ ಉದ್ಘಾಟನೆಯನ್ನು ಚಂಡೀಘಡ ಸರ್ಕಾರದ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿ ಎಚ್. ರಾಜೇಶ್ ಪ್ರಸಾದ್ ನೆರವೇರಿಸಲಿದ್ದಾರೆ.
ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ(ರಿ) ನ ಅಧ್ಯಕ್ಷರು ಹಾಗೂ ನಿವೃತ್ತ ಅರಣ್ಯ ಅಧಿಕಾರಿ ಡಾ. ಕೆ. ಸುಂದರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ)ದ ಅಧ್ಯಕ್ಷ ಮೋಹನ್ ಆಳ್ವ ಹಾಗೂ ಕೆನೆರಾ ಬ್ಯಾಂಕ್ ನ ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ಕೆ. ರಾಮ ನಾಯ್ಕ ಆಗಮಿಸಲಿದ್ದಾರೆ.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು, ರಾಷ್ಟ್ರೀಯ ತರಬೇತುದಾರರು, ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ ವೇದಿಕೆ ಅಲಂಕರಿಸಲಿರುವರು.
ಕಾರ್ಯಗಾರದಲ್ಲಿ ಮೂಡಬಿದ್ರೆಯ ಮರಾಟಿ ಸಮಾಜ ಸೇವಾ ಸಂಘ (ರಿ) ನ ಅಧ್ಯಕ್ಷರಾದ ಶಂಕರ ನಾಯ್ಕರವರು ಉಪಸ್ಥಿತರಿರಲಿದ್ದಾರೆ.
















