Wednesday, February 11, 2026
Google search engine
Homeಕಾರ್ಕಳಫೆ. 13, 14 ರಂದು ಕಾರ್ಕಳ ಕಾಳಿಕಾಂಬಾದ ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲದ 65ನೇ...

ಫೆ. 13, 14 ರಂದು ಕಾರ್ಕಳ ಕಾಳಿಕಾಂಬಾದ ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲದ 65ನೇ ವಾರ್ಷಿಕೋತ್ಸವ

ಫೆ. 13, 14 ರಂದು ಕಾರ್ಕಳ ಕಾಳಿಕಾಂಬಾದ ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲದ 65ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ.

ಫೆ. 13ರಂದು ಸಂಜೆ ಸತ್ಯನಾರಾಯಣ ಪೂಜೆಯೊಂದಿಗೆ ಕಾರ್ಯಕ್ರಮ ಶುರುವಾಗಲಿದ್ದು, ಮರುದಿನ ಬೆಳಗ್ಗೆ ಕಾರ್ಯಕ್ರಮದ ಧ್ವಜಾರೋಹಣವನ್ನು ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ನ ವಲಯ ಅಧ್ಯಕ್ಷರು ಹಾಗೂ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೊಕ್ತಸರಾದ ದಯಾನಂದ ರಾವ್ ಶಿಂಧೆ ನಡೆಸಿಕೊಡಲಿದ್ದಾರೆ. ಈ ವೇಳೆ ಜ್ಯೋತಿ ಯುವಕ ಮಂಡಲದ ಅಧ್ಯಕ್ಷರಾದ ಪ್ರಶಾಂತ್ ರಾವ್ ಅಧ್ಯಕ್ಷತೆ ವಹಿಸಲಿದ್ದು, ಜ್ಯೋತಿ ಮಹಿಳಾ ಮಂಡಲ ಅಧ್ಯಕ್ಷೆ ವೀಣಾ ಸುರೇಶ್ ಉಪಸ್ಥಿತರಿರಲಿದ್ದಾರೆ. ತದನಂತರ ಛದ್ಮವೇಷ ಸ್ಪರ್ಧೆ ನಡೆಯಲಿದೆ.

ಸಾಯಂಕಾಲ ನಡೆಯಲಿರುವ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ NRAM ಪೊಲಿಟೆಕ್ನಿಕ್ ನ ನಿವೃತ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್ ಹೊಳ್ಳ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರೈಟ್ ಟ್ಯಾಕ್ಸ್ ಮೇಟ್ ಇಂಡಿಯಾ, ಕಾರ್ಕಳ ಇದರ ಲೆಕ್ಕ ಪರಿಶೋಧಕರಾದ CA ಹರೀಶ್ ರಾವ್ ಹಾಗೂ ಮುಂಡ್ಕೂರು ಜಾರಿಗೆಕಟ್ಟೆ ಕೊರಗಜ್ಜ ಕೊರಗರ ಪಂಜುರ್ಲಿ ಕ್ಷೇತ್ರದ ಧೀರಜ್ ದಿವಾಕರ ಪೂಜಾರಿ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್.ಎನ್.ವಿ. ಪ್ರೌಢಶಾಲೆ, ಹಿರಿಯಂಗಡಿ, ಕಾರ್ಕಳ ಇದರ ಮುಖ್ಯೋಪಾಧ್ಯಾಯರಾದ ಉಷಾ ಪಡಿವಾಳ್ ಎಚ್. ಅವರು ಸನ್ಮಾನ ಸ್ವೀಕರಿಸಲಿದ್ದಾರೆ. ಪಲ್ಲವಿ ಡೆಕೋರೇಟರ್ಸ್ ನ ಮಾಲಕರಾದ ಸುರೇಶ್ ಕೋಟ್ಯಾನ್ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಿರುವರು.

ಸಭಾ ಕಾರ್ಯಕ್ರಮದ ಬಳಿಕ ಯುವಕ ಮತ್ತು ಮಹಿಳಾ ಮಂಡಲದ ಸದಸ್ಯರಿಂದ ನೃತ್ಯ ಕಾರ್ಯಕ್ರಮ ನೆರವೇರಲಿದೆ. ಕೊನೆಗೆ ಅಮ್ಮ ಕಲಾವಿದೆರ್ ಕುಡ್ಲ ತಂಡದಿಂದ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments