Wednesday, February 25, 2026
Google search engine
Homeಕಾರ್ಕಳಕಾರ್ಕಳದ ಮಹಾಮಸ್ತಕಾಭಿಷೇಕ ಮತ್ತು ಪ್ರಮುಖ ಯೋಜನೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳಿಗೆ ವಿ ಸುನಿಲ್‌ ಕುಮಾರ್ ಮನವಿ

ಕಾರ್ಕಳದ ಮಹಾಮಸ್ತಕಾಭಿಷೇಕ ಮತ್ತು ಪ್ರಮುಖ ಯೋಜನೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳಿಗೆ ವಿ ಸುನಿಲ್‌ ಕುಮಾರ್ ಮನವಿ

ನೂತನವಾಗಿ ನಿರ್ಮಾಣವಾಗಿರುವ ಡಾ| ಬಿ. ಆರ್‌ ಅಂಬೇಡ್ಕರ್‌ ಭವನ ಲೋಕಾರ್ಪಣೆ ಮತ್ತು ಕಿಸಾನ್‌ ಸಭಾಭವನದ ಉದ್ಘಾಟನೆ ಹಾಗೂ ಇತರ ಕಾರ್ಯಕ್ರಮಗಳಿಗಾಗಿ ಕಾರ್ಕಳಕ್ಕೆ ಆಗಮಿಸಿದ ಕರ್ನಾಟಕ ಸರ್ಕಾರದ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾರ್ಕಳ ಮಹಾ ಮಸ್ತಕಾಭಿಷೇಕ ಸೇರಿದಂತೆ ಕಾರ್ಕಳ ಕ್ಷೇತ್ರದ ವಿವಿಧ ಅಭಿವೃದ್ದಿ ಪ್ರಮುಖ ಯೋಜನೆಗಳಿಗೆ ಅನುದಾನ ಒದಗಿಸುವಂತೆ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್‌ ರವರು ಮನವಿ ಸಲ್ಲಿಸಿದರು.

ಮುಖ್ಯವಾಗಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಕಾರ್ಕಳಕ್ಕೆ ಆಗಮಿಸುವ ಅಸಂಖ್ಯಾತ ಯಾತ್ರಿಕರು ಹಾಗೂ ಪ್ರವಾಸಿಗರಿಗೆ ಕಾರ್ಕಳ ಹಾಗೂ ಸುತ್ತಲಿನ ಪರಿಸರದಲ್ಲಿ ರಸ್ತೆ, ಕುಡಿಯುವ ನೀರು, ಶೌಚಾಲಯ
ಮತ್ತು ಅಲಂಕಾರಿಕ ವಿದ್ಯುತ್‌ ದೀಪ ಒಳಗೊಂಡಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಾರ್ಕಳ ಮಹಾಮಸ್ತಕಾಭಿಷೇಕ ಮಹೋತ್ಸವ ಕಾರ್ಯಕ್ರಮಕ್ಕೆ ರೂ.75.00 ಕೋಟಿ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು.

ಪ್ರಸ್ತುತ ಕಾರ್ಕಳದ ಕೆಜಿಟಿಟಿಐ ತರಬೇತಿ ಕೇಂದ್ರ ಹಾಗೂ ಸರಕಾರಿ ಬಿ.ಎಸ್ಸ್‌.ಸಿ ನರ್ಸಿಂಗ್‌ ಕಾಲೇಜುಗಳು ಸ್ವಂತ ಕಟ್ಟಡ ಇಲ್ಲದೆ ಹಲವು ವರ್ಷಗಳಿಂದ ತಾತ್ಕಾಲಿಕ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಎರಡೂ ಕಾಲೇಜುಗಳಿಗೆ ಈಗಾಗಲೇ ಜಾಗ ಕಾಯ್ದಿರಿಸಲಾಗಿದ್ದು, ಹೊಸ ಸ್ವಂತ ಕಟ್ಟಡದ ತುರ್ತು ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ತಕ್ಷಣವೇ ಈ ಎರಡು ಸರಕಾರಿ ವಿದ್ಯಾ ಸಂಸ್ಥೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡುವಂತೆ ಕೋರಿ ಮನವಿ ನೀಡಲಾಯಿತು.

ಹೆಬ್ರಿ ತಾಲೂಕು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಅತ್ಯಂತ ಗ್ರಾಮೀಣ ಪ್ರದೇಶವಾಗಿದ್ದು, ಈ ಭಾಗದ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ಚಿಕಿತ್ಸೆಗಾಗಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿರುತ್ತಾರೆ. ಹೆಬ್ರಿ ತಾಲೂಕು ಕೇಂದ್ರವಾಗಿ ಹಲವು ವರ್ಷಗಳಾದರೂ ಸಾಕಷ್ಟು ಜನಸಂಖ್ಯೆ, ಹಿಂದುಳಿದ ಬುಡಕಟ್ಟು ಸಮುದಾಯದವರು ಹೆಚ್ಚಾಗಿ ವಾಸವಾಗಿದ್ದು, ಆ ಭಾಗದ ಜನರ ಆರೋಗ್ಯದ ಹಿತದೃಷ್ಠಿಯಿಂದ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸುವ ಕುರಿತು ಮನವಿ ಮಾಡಲಾಯಿತು.

ಇಂದು ಲೋಕಾರ್ಪಣೆಗೊಂಡ ಕಾರ್ಕಳದ ಡಾ| ಬಿ ಆರ್‌ ಅಂಬೇಡ್ಕರ್‌ ಭವನವು ರೂ.06.00 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಸಾರ್ವಜನಿಕ ಬಳಕೆ ಹಾಗೂ ಸಮುದಾಯದ ಜನರ ಕಾರ್ಯಕ್ರಮಗಳಿಗಾಗಿ ಅಗತ್ಯ ಇರುವ ಕೆಲವು ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಪೀಠೋಪಕರಣಗಳು, ಹಾಗೂ ಅಡುಗೆ ಪರಿಕರಗಳು ಸೇರಿದಂತೆ ಇನ್ನಿತರ ಅಭಿವೃದ್ದಿ ಕಾಮಗಾರಿಗಳಿಗೆ ಕನಿಷ್ಟ ರೂ.03.00 ಕೋಟಿ ಅನುದಾನವನ್ನು ಹಾಗೂ ಹೆಬ್ರಿ ತಾಲೂಕಿನ ತಾಲೂಕು ಮಟ್ಟದ ಡಾ| ಬಿ.ಆರ್‌ ಅಂಬೇಡ್ಕರ್‌ ಭವನ ನಿರ್ಮಾಣಕ್ಕಾಗಿ ಸರಕಾರದಿಂದ ರೂ. 01.00 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ತಾಲೂಕು ಮಟ್ಟದ ಸುಸ್ಸಜ್ಜಿತ ಡಾ| ಬಿ.ಆರ್‌ ಅಂಬೇಡ್ಕರ್‌ ಭವನ ನಿರ್ಮಾಣವು ಕಷ್ಟಸಾಧ್ಯವಾಗಿರುತ್ತದೆ. ಹಾಗಾಗಿ ಹೆಬ್ರಿ ಭಾಗದ ವಿವಿಧ ದಲಿತ ಸಂಘಟನೆಗಳ ಪ್ರಮುಖರು ಹಾಗೂ ಸಮುದಾಯದ ಜನರ ಬೇಡಿಕೆಯಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಭವನ ನಿರ್ಮಾಣಕ್ಕೆ ಕನಿಷ್ಠ ರೂ 02.00 ಕೋಟಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖಾ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಮನವಿ ನೀಡಲಾಯಿತು.

ಗ್ರಾಮೀಣ ಪ್ರದೇಶದ ಯುವ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರ್ಕಾರದ ತೀರ್ಮಾನದಂತೆ ಶಿಗ್ಗಾವಿ ಜವಳಿ ಪಾರ್ಕ್‌ ಮಾದರಿಯಲ್ಲಿ ನೇರವಾಗಿ ಸಂಪೂರ್ಣ ಸರಕಾರದ ಅನುದಾನದಲ್ಲಿಯೇ ಕಾರ್ಕಳದ ನಿಟ್ಟೆ ಜವಳಿ ಪಾರ್ಕ್ ಅನ್ನು ಸರಕಾರದಿಂದಲೇ ಅಭಿವೃದ್ಧಿಪಡಿಸಿ, ಆದಷ್ಟೂ ಶೀಘ್ರವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜೊತೆಗೆ ಕರಾವಳಿ ಭಾಗದ ಬಹುಮುಖ್ಯ ಸಮಸ್ಯೆ ಕೆಂಪು ಕಲ್ಲು, ಮರಳು ಸಾಗಾಟ ಹಾಗೂ 9&11ಎ ಖಾತಾ ಸಮಸ್ಯೆ, ಪ್ರಾಧಿಕಾರದ ಅನುಮೋದನೆ ಸಮಸ್ಯೆ ಸೇರಿದಂತೆ ಸರಕಾರಿ ನಿಯಮಗಳನ್ನು ಸರಳೀಕರಣಗೊಳಿಸಿ ಜನಸಾಮಾನ್ಯರು ಹಾಗೂ ದುಡಿಯುವ ವರ್ಗದ ಜನರ ಹಿತ ಕಾಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments