ನವಚೇತನ ಸೇವಾಬಳಗ(ರಿ) ತೋಡಾರು ಹಾಗೂ ಬಾರಾಡಿ ಫ್ರೆಂಡ್ಸ್ ಇವರ ಸಹಕಾರದಲ್ಲಿ ನವಚೇತನ ಪಂಚವಾರ್ಷಿಕ ಸಮ್ಮಿಲನ ಮಾ.೭ ರಂದು ಸಂಜೆ ಬಾರಾಡಿ ಶಾಲೆಯಲ್ಲಿ ನಡೆಯಲಿದೆ.
ಶ್ರೀ ಸಾಯಿ ಈಶ್ವರ್ ಗುರೂಜಿ ಏಕಜಾತಿ ಧರ್ಮಪೀಠ ದ್ವಾರಕಾಮಾಯಿ ಮಠ ಶಂಕರಪುರ ಉಡುಪಿ ಜಿಲ್ಲೆ ಇವರಿಂದ ಆಶೀರ್ವಾದವಾಚನ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕಾಂತಾವರ ಬಾರಾಡಿ ಬೀಡು ದರ್ಮದರ್ಶಿಗಳಾದ ಡಾ. ಜೀವಂದರ್ ಬಲ್ಲಾಳ್, ಹಾಗೂ ಇರ್ವತ್ತೂರು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಭಾಸ್ಕರ್ ಕೋಟ್ಯಾನ್ ನಡೆಸಿಕೊಡಲಿದ್ದಾರೆ.
ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ತುಳುವ ಬೊಳ್ಳಿ ದಯಾನಂದ ಕತ್ತಲ್ ಇವರಿಂದ ಪ್ರದಾನ ಭಾಷಣ ನಡೆಯಲಿದೆ. ಪ್ರಮೋದ್ ಮಧ್ವರಾಜ್, ಉದಯ ಕುಮಾರ್ ಶೆಟ್ಟಿ ಮುನಿಯಲ್, ಆನಂದ ಶೆಟ್ಟಿ, ಮಹೇಶ್ ಶೆಟ್ಟಿ ಕುಡುಪುಲಾಜೆ, ಅರುಣ್ ನಿಟ್ಟಿ, ಸುಕೇಶ್ ಜಿ. ಅಂಚನ್, ಅರುಣ್ ರೈ ತೋಡಾರು, ಅಶ್ವಥ್, ಅವಿನಾಶ್ ಜಿ. ಶೆಟ್ಟಿ, ಜಯರಾಮ್ ಸಾಲಿಯಾನ್ ಬೋಳ, ವಿಜಯ್ ಕುಮಾರ್ ಕೋಡಿಯಾಲಬೈಲ್, ಜಯೇಶ್ ಬಲ್ಲಾಳ್, ಸಂಜಯ್ ಬಲ್ಲಾಳ್, ರಾಜೇಶ್ ಕೋಟಿಯನ್, ಪ್ರಕಾಶ್ ಪೂಜಾರಿ ಬಾರಾಡಿ, ಧರ್ಮರಾಜ್ ಕಂಬಳಿ, ಕರುಣಾಕರ್ ಶೆಟ್ಟಿ, ನವೀನ ಪೂಜಾರಿ, ದಾಮೋದರ್, ಸಂತೋಷ್ ಕೋಟ್ಯಾನ್, ಸನತ್ ಕುಮಾರ್, ಮೊದಲಾದವರು ಮುಖ್ಯ ಅಥಿತಿಗಳಾಗಿ ವೇದಿಕೆ ಅಲಂಕರಿಸಲಿದ್ದಾರೆ.
ಕಾರ್ಯಕ್ರಮದ ಪೂರ್ಣ ಚಿತ್ರಣ ಟೈಮ್ಸ್ ಆಫ್ ಕಾರ್ಕಳ ಯುಟ್ಯೂಬ್ ವಾಹಿನಿಯಲ್ಲಿ ನೇರಪ್ರಸಾರಗೊಳ್ಳಲಿದೆ.
ಈ ಕಾರ್ಯಕ್ರಮವನ್ನು ವೀಕ್ಷಿಸಲು ಕೆಳಗಿನ ಲಿಂಕ್ ತೆರೆಯಿರಿ.












