ಸ್ವಚ್ಛ ಕಾರ್ಕಳ ಬ್ರಿಗೇಡ್ ಮುಂದಾಳುತ್ವದಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಸಹಭಾಗಿತ್ವದಲ್ಲಿ ದಿನಾಂಕ 08, ಮಾರ್ಚ್, 2026ರ ಭಾನುವಾರ ಬೆಳಗ್ಗೆ 6:30 ಇಂದ 8:30 ಘಂಟೆಯ ವರೆಗೆ ಎಸ್ ವಿ ಟಿ ವೃತ್ತದಿಂದ – ಪೆರ್ವಾಜೆಯ ದ್ವಾರದ ವರೆಗೆ ಸ್ವಚ್ಛತಾ ಅಭಿಯಾನ ಮಾಡಲಾಯಿತು.
ಸುಮಾರು 50 ಜನಕ್ಕೂ ಮಿಕ್ಕಿ ಸ್ವಯಂಸೇವಕರ ಸಹಯೋಗದೊಂದಿಗೆ
25 ಗೋಣಿಚೀಲ ಪ್ಲಾಸ್ಟಿಕ್ ಕಸಗಳು,
3 ಗೋಣಿಚೀಲ ಬಿಯರ್ ಹಾಗೂ ಇನ್ನಿತರ ಗಾಜಿನ ಬಾಟಲಿಗಳು,
2 ಗೋಣಿಚೀಲ ಹಳೇ ಚಪ್ಪಲಿಗಳು ಹಾಗೂ
ಇನ್ನಿತರ ಕಸಗಳ ಒಟ್ಟು 30 ಗೋಣಿಚೀಲಗಳಾಗುವಷ್ಟು ಕಸಗಳನ್ನು ವಿಲೇವಾರಿ ಮಾಡಲಾಯಿತು.
ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದೊಂದಿಗೆ, ವಿಶ್ವಕರ್ಮ ಸಹಕಾರ ಸೇವಾ ಬ್ಯಾಂಕ್ ಸ್ವಯಂಪ್ರೇರಿತವಾಗಿ ಹಲವು ಬಾರಿ
ನಡೆಸುತ್ತಾ ಬಂದಿದೆ.













