Wednesday, March 11, 2026
Google search engine
Homeಕಾರ್ಕಳರೋಟರಿ ಆನ್ಸ್ ಕ್ಲಬ್ ಕಾರ್ಕಳ ಮಹಿಳಾ ದಿನಾಚರಣೆ

ರೋಟರಿ ಆನ್ಸ್ ಕ್ಲಬ್ ಕಾರ್ಕಳ ಮಹಿಳಾ ದಿನಾಚರಣೆ

ರೋಟರಿ ಆನ್ಸ್ ಕ್ಲಬ್ ಕಾರ್ಕಳ ವತಿಯಿಂದ ಮಹಿಳಾ ದಿನಾಚರಣೆಯು ಕಾರ್ಕಳ ರೋಟರಿ ಬಾಲ ಭವನದಲ್ಲಿ ನಡೆಯಿತು. ಇದರ ಅಂಗವಾಗಿ ಮಹಿಳೆಯರ ಶಕ್ತಿ, ಸಾಧನೆ, ಸ್ನೇಹ, ಸೌಹಾರ್ದತೆ ಯನ್ನು ಸಂಭ್ರಮಿಸುವ ವಿಶೇಷ ದಿನದ ಅಂಗವಾಗಿ “ಮಹಿಳಾ ಶಕ್ತಿ ಸಮಾಜದ ಭವಿಷ್ಯ” ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಹಕರಿಸಿದ ಡಾ. ಆಶಾ ಪಿ ಹೆಗ್ಡೆಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷೆ ಜಯಂತಿ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಲಬ್ಬಿನ ಸಭಾಪತಿ ವೃಂದಾ ಹರಿಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಮಹಿಳಾ ದಿನಾಚರಣೆ ಪ್ರಯುಕ್ತ ಕ್ಲಬ್ಬಿನ ಸದಸ್ಯ ಮಹಿಳೆಯರಿಗಾಗಿ ಸ್ಪರ್ಧೆಗಳು ಮತ್ತು ಮನರಂಜನ ಕಾರ್ಯಕ್ರಮಗಳನ್ನು ನಡೆಸಲಾಯಿತು. ತುರುಬಿನ ಅಲಂಕಾರ ಸ್ಪರ್ಧೆಯಲ್ಲಿ ಕಸ್ತೂರಿ ವಸಂತ ಹಾಗೂ ವಿಜಯಶ್ರೀರಾವ್ . ಅದೇ ರೀತಿ ಜಡೆಯ ಅಲಂಕಾರ ಸ್ಪರ್ಧೆಯಲ್ಲಿ ರೇಖಾ ಜಿ ಹಾಗೂ ಅರ್ಚನಾ ಪ್ರಭಾತ್ ಪ್ರಥಮ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಸುಮಾ ನಾಯಕ್ ಪ್ರಾರ್ಥಿಸಿದರು ಗಾಯತ್ರಿ ವಿಜೇಂದ್ರ ಸ್ವಾಗತಿಸಿದರು ಕಾರ್ಯಕ್ರಮ ನಿರೂಪಿಸಿದ ಕಾರ್ಯದರ್ಶಿ ಆಶಾ ಡಿ ಮೆಲ್ಲೊ ವಂದಿಸಿದರು

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments