ಪಡುಬಿದ್ರಿ, ಹೆಜಮಾಡಿ ಗುಂಡಿ ನಿವಾಸಿ ಧೀರಜ್ ಎಂಬವರು ಸಾಲದ ಹಣವನ್ನು ವಾಪಸ್ ಕೇಳಿದ್ದಕ್ಕಾಗಿ ಬಜಗೋಳಿಯ ಸುಮಿತ್. ಎಸ್. ಸುವರ್ಣ(29) ಎಂಬವರಿಗೆ ಹೆಜಮಾಡಿಯ ಬಬ್ಬುಸ್ವಾಮಿ ದೈವ ಸ್ಥಾನದ ಬಳಿ ಹೊಟ್ಟೆಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ಸುಮಿತ್ ಅವರು ವೆನ್ಸಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧೀರಜ್ ರನ್ನು ಪಡುಬಿದ್ರಿ ಪೊಲೀಸರು ಮಣಿಪಾಲದಲ್ಲಿ ವಶಕ್ಕೆ ಪಡೆದಿದ್ದಾರೆ.


















