ಶೈಕ್ಷಣಿಕ ಬದುಕಿನಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಸಹಪಠ್ಯಗಳು ಅತೀ ಅಗತ್ಯ. ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಜ್ಞಾನವನ್ನು ಸಂಪಾದಿಸಿದಾಗ ವಿದ್ಯಾರ್ಥಿಯ ಬದುಕು ಪರಿಪೂರ್ಣವಾಗಲು ಸಾಧ್ಯವಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಿರಿ. ಬೇರೆ ಬೇರೆ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಕರಾವಳಿಯ ಗಂಡುಕಲೆಯಾದ ಯಕ್ಷಗಾನವನ್ನು ಅಭ್ಯಾಸ ಮಾಡಿ ಅದರಲ್ಲಿ ವಿಶೇಷ ಸಾಧನೆಯನ್ನು ಮಾಡಬೇಕು. ತನ್ಮೂಲಕ ಕರಾವಳಿಯ ಸಂಸ್ಕೃತಿಯನ್ನು ಅರಿತುಕೊಂಡು ನಿಮ್ಮ ನಿಮ್ಮ ಊರುಗಳಲ್ಲಿ ಅದನ್ನು ಪಸರಿಸುವ ಕೆಲಸ ಮಾಡಬೇಕು. ಎಂದು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ ಶೆಟ್ಟಿ ಅವರು ಹೇಳಿದರು.
ಇವರು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ, ಕರಾಟೆ, ಭರತನಾಟ್ಯ, ಸಂಗೀತ, ಯೋಗ, ಯಕ್ಷಗಾನ ತರಬೇತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ, ಕರಾಟೆ ತರಬೇತುದಾರರು ಕರ್ನಾಟಕ ಬುಡಕನ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಸ್ಟೈಲ್ ಚೀಫ್ ಇನ್ಸ್ಟ್ರಕ್ಟರ್ ಆಗಿರುವ ಕ್ಯೋಶಿ ವಾಮನ್ ಪಾಲನ್, ಭರತನಾಟ್ಯ ಗುರುಗಳು ನೃತ್ಯ ಸೌರಭ ಕಲಾ ಕೇಂದ್ರ ವಿದ್ವಾನ್ ನಾಗರಾಜ್ ಎಸ್ ಎನ್ ರಾವ್, ಯಕ್ಷಗಾನ ಗುರುಗಳಾದ ಮಂದಾರ್ತಿ ಮೇಳದ ಭಾಗವತರು ಮಹೇಶ್ ಕುಮಾರ್ ಮಂದಾರ್ತಿ, ಹೆಬ್ರಿಯ ಉದಯವಾಣಿ ದಿನಪತ್ರಿಕೆಯ ವರದಿಗಾರರಾಗಿರುವ ಉದಯ್ ಕುಮಾರ್ ಶೆಟ್ಟಿ, ಎಸ್.ಆರ್. ಪಬ್ಲಿಕ್ ಸ್ಕೂಲಿನ ಉಪ ಪ್ರಾಂಶುಪಾಲರಾದ ದೀಪಕ್ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ನಿಲಯಪಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೀಪಕ್ ಎನ್ ನಿರೂಪಿಸಿ, ಶಿಕ್ಷಕರಾದ ಮಂಜುನಾಥ್, ಜಯಲಕ್ಷ್ಮಿ, ನಿರ್ವಹಿಸಿದರು.


















