Wednesday, April 1, 2026
Google search engine
Homeಕಾರ್ಕಳಕಾರ್ಕಳ: ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್; ಮಕ್ಕಳಿಗಾಗಿ 'ಚಿಲಿಪಿಲಿ-2026' ಶಿಬಿರ

ಕಾರ್ಕಳ: ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್; ಮಕ್ಕಳಿಗಾಗಿ ‘ಚಿಲಿಪಿಲಿ-2026’ ಶಿಬಿರ

ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‌ನಲ್ಲಿ ಎ. 2 ರಿಂದ 4 ರವರೆಗೆ ವಿಶೇಷ ಮಕ್ಕಳ ಶಿಬಿರ ‘ಚಿಲಿಪಿಲಿ-2026’ ಆಯೋಜಿಸಲಾಗಿದೆ.

ಮಕ್ಕಳು ರಜಾ ದಿನ ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಧೈಯದೊಂದಿಗೆ ಈ ಶಿಬಿರ ನಡೆಯಲಿದೆ. ವಿಶೇಷವಾಗಿ 90ರ ದಶಕದ ಜೀವನ ಕೌಶಲ ಚಟುವಟಿಕೆಗಳನ್ನು ಇಲ್ಲಿ ಪರಿಚಯಿಸಲಾಗುವುದು. ಅಂಕಗಳ ಭಯವಿಲ್ಲದೆ ಮಕ್ಕಳು ಸೃಜನಶೀಲತೆ ಬೆಳೆಸಿಕೊಳ್ಳಲು. ಹೊಸ ಆಸಕ್ತಿಗಳನ್ನು ಕಂಡುಕೊಳ್ಳಲು ಮತ್ತು ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಈ ಶಿಬಿರ ಪೂರಕವಾಗಲಿದೆ. ಇದು ಮುಗ್ಧ ಮನಸುಗಳ ಸೃಜನಶೀಲತೆಯನ್ನು ಬೆಳೆಸುವ ಸುಂದರ ತೋಟ ಎಂದು ಸಂಸ್ಥೆ ತಿಳಿಸಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುವ ಈ ಶಿಬಿರಕ್ಕೆ ಪೋಷಕರು ತಮ್ಮ ಮಕ್ಕಳ ಹೆಸರನ್ನು ಕೂಡಲೇ ನೋಂದಾಯಿಸಲು ಕೋರಲಾಗಿದೆ. ಮಾಹಿತಿಗಾಗಿ ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments