Thursday, April 2, 2026
Google search engine
Homeಕಾರ್ಕಳಇನ್ಸ್ಪಾಯರ್ ಅವಾರ್ಡ್ ಹೆಬ್ರಿ ಎಸ್ ಆರ್ ವಿದ್ಯಾರ್ಥಿಗಳು ಆಯ್ಕೆ.

ಇನ್ಸ್ಪಾಯರ್ ಅವಾರ್ಡ್ ಹೆಬ್ರಿ ಎಸ್ ಆರ್ ವಿದ್ಯಾರ್ಥಿಗಳು ಆಯ್ಕೆ.

ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಆಯೋಜಕತ್ವದ INSPIRE AWARD MANAK-2025 ಸ್ಪರ್ಧೆಯಲ್ಲಿ ಹೆಬ್ರಿಯ ಎಸ್.ಆರ್ ಪಬ್ಲಿಕ್ ಸ್ಕೂಲಿನ, ಇಶಾನಿ ಶೆಟ್ಟಿ, 10ನೇ ತರಗತಿ, “Smart Spoon that Supports Diabetics with Portion Control and Tracking” ಮತ್ತು ಎಸ್.ಆರ್ ಆಂಗ್ಲ ಮಾಧ್ಯಮ ಶಾಲೆಯ ಅಶ್ರಯ ಎಂ ನಾಯ್ಕ್ ,7ನೇ ತರಗತಿ, “CocoSense: Automated Tender Coconut Detection and Harvesting System” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ತಲಾ 10,000 ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದುಕೊಂಡಿದೆ.

ಈ ಹಿಂದೆಯೂ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿಜ್ಞಾನ ಮಾದರಿ, ವಿಜ್ಞಾನ ಸಂಬಂಧಿ ಚಟುವಟಿಕೆಗಳೊಂದಿಗೆ ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್.ನಾಗರಾಜ ಶೆಟ್ಟಿ ಹಾಗೂ ಕಾರ್ಯದರ್ಶಿಯವರಾದ ಸಪ್ನಾ.ಎನ್ ಶೆಟ್ಟಿ ಅವರು ಅಭಿನಂದಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments