ರಾಜ್ಯದಲ್ಲಿ ಉತ್ತಮ ಕಾರ್ಯಸಾಧನೆ ಮಾಡಿದ ಗ್ರಾಮ ಪಂಚಾಯತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನೀಡುತ್ತಿರುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಹೆಬ್ರಿ ತಾಲ್ಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯತಿ ಮೈಸೂರು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿ ಆಯ್ಕೆಯಾಗಿದೆ. ಗ್ರಾಮ ಪಂಚಾಯತಿ ಆಡಳಿತ, ಆಭಿವೃದ್ದಿ ಕಾರ್ಯಗಳ ಅನುಷ್ಠಾನ, ಹಣಕಾಸಿನ ಸದ್ದಳಕೆ, ಗ್ರಾಮ ನೈರ್ಮಲ್ಯ, ಕರ ವಸೂಲಾತಿ, ಜನರಿಗೆ ಯೋಜನೆಗಳನ್ನು ತಲುಪಿಸುವುದು, ನಿಯಮಿತವಾಗಿ ಸಭೆಗಳ ಆಯೋಜನೆ, ಡಿಜಿಟಲ್ ಗ್ರಂಥಾಲಯ, ಕುಡಿಯುವ ನೀರು ಸರಬರಾಜು, ಘನತ್ಯಾಜ್ಯ ವಿಲೇವಾರಿ, ನರೇಗಾ ಯೋಜನೆ, ಆರೋಗ್ಯ ಸೇವೆಗಳು, ಲಿಂಗಾನುಪಾತ, ಬಾಲ್ಯವಿವಾಹ ತಡೆ, ಸೇರಿದಂತೆ ಹಲವು ಮಾನದಂಡಗಳನ್ನು ಪರಿಣಿಗಣಿಸಿ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಲಾಗುತ್ತಿದೆ.
ಕರ್ನಾಟಕದ ಪ್ರತಿಷ್ಠಿತ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯ ಜೊತೆಗೆ ಪ್ರೋತ್ಸಾಹಧನವಾಗಿ ರೂ 15 ಲಕ್ಷ ರೂಪಾಯಿ ನಗದು, ಫಲಕ ಹಾಗೂ ಪ್ರಮಾಣಪತ್ರ ಮಡಾಮಕ್ಕಿ ಗ್ರಾಮ ಪಂಚಾಯತಿಗೆ ಲಭಿಸಲಿದೆ.
ಮೈಸೂರು ವಿಭಾಗಮಟ್ಟದ ಪ್ರಶಸ್ತಿ ಲಭಿಸಿರುವುದು ನಮ್ಮ ಗ್ರಾಮ ಪಂಚಾಯತಿ ಕಾರ್ಯಕ್ಷಮತೆಯ ಫಲ. ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಆಡಳಿತ ನಿರ್ವಹಣೆಯಲ್ಲಿ ಪಾರದರ್ಶಕತೆಯು ನಮ್ಮ ಮೂಲ ಆದ್ಯತೆಯಾಗಿದೆ. ಪ್ರಶಸ್ತಿಯು ನಮಗೆ ಲಭಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ನಮ್ಮ ಈ ಹಿಂದಿನ ಆಡಳಿತ ಮಂಡಳಿ , ಕಾರ್ಯದರ್ಶಿ, ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಮಟ್ಟದ ವಿವಿಧ ಇಲಾಖೆಗಳು, ಮೇಲಾಧಿಕಾರಿಗಳು ಹಾಗೂ ಸಂಪೂರ್ಣ ಸಹಕಾರ ನೀಡಿದ ಗ್ರಾಮಸ್ಥರಿಗೆ ಕೃತಜ್ಷರಾಗಿದ್ದೇವೆ. ಪ್ರಶಸ್ತಿಯು ಸಂತಸದ ಜೊತೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಶಸ್ತಿ ಪ್ರೇರಣೆ ನೀಡಿದೆ.
– ರಿತೇಶ್ .ಎನ್. ಪುತ್ರನ್
ಪಂಚಾಯತಿ ಅಭಿವೃದ್ದಿ ಅಧಿಕಾರಿ
ನಮ್ಮ ಪಂಚಾಯಿತಿಗೆ ಪ್ರಶಸ್ತಿ ಲಭಿಸಿರುವುದು ನಮಗೆ ಅತ್ಯಂತ ಸಂತಸ ತಂದಿದೆ. ಇದಕ್ಕೆ ಶ್ರಮಿಸಿದ ಆಡಳಿತ ಮಂಡಳಿ , ಸಿಬ್ಬಂಧಿ ವರ್ಗದವರಿಗೂ ಹಾಗೂ ಎಲ್ಲಾ ಸಂಘ ಸಂಸ್ಥೆಗಳಿಗೂ ಸಮಸ್ತ ಗ್ರಾಮಸ್ಥರಿಗೂ ವಂದನೆಗಳು.
– ಕೆ ದಯಾನಂದ ಪೂಜಾರಿ
ನಿಕಟ ಪೂರ್ವ ಅಧ್ಯಕ್ಷರು.
















