Saturday, May 23, 2026
Google search engine
Homeಕಾರ್ಕಳಸಿ.ಬಿಎಸ್.ಇ ಬೋರ್ಡಿನ ಕ್ಯಾಪಾಸಿಟಿ ಬಿಲ್ಡಿಂಗ್ ಪ್ರೋಗ್ರಾಂ: ಎಸ್‌.ಆರ್‌. ಹೆಬ್ರಿ

ಸಿ.ಬಿಎಸ್.ಇ ಬೋರ್ಡಿನ ಕ್ಯಾಪಾಸಿಟಿ ಬಿಲ್ಡಿಂಗ್ ಪ್ರೋಗ್ರಾಂ: ಎಸ್‌.ಆರ್‌. ಹೆಬ್ರಿ

ಶಿಕ್ಷಣದ ಹೊಸ ಹೊಸ ಯೋಜನೆಗಳಾದ ಎನ್ ಇ ಪಿ, ಏ ಐ ಟೆಕ್ನಾಲಜಿ ಶಿಕ್ಷಣ ವ್ಯವಸ್ಥೆಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಿಬಿಎಸ್‌ಇ ಯ ವತಿಯಿಂದ ನಡೆಯುವ ಇಂತಹ ತರಬೇತಿಗಳು ಶಿಕ್ಷಣ ಸಂಸ್ಥೆಗೆ ಅತಿ ಅಗತ್ಯ ಎಂದು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಎಚ್ ಯತಿರಾಜ್ ಶೆಟ್ಟಿಯವರು ಹೇಳಿದರು.

ಇವರು ಸಿಬಿಎಸ್ಇ ಬೋರ್ಡಿನಸೆಂಟರ್ ಆಫ್ ಎಕ್ಸಲೆನ್ಸಿ ಬೆಂಗಳೂರು ಮತ್ತು ಹೆಬ್ರಿಯ ಎಸ್.ಆರ್ ಪಬ್ಲಿಕ್ ಸ್ಕೂಲಿನ ಜಂಟಿ ಆಶ್ರಯದಲ್ಲಿ ನಡೆದ ಎರಡು ದಿನದ ತರಬೇತಿ ಕಾರ್ಯಕ್ರಮದ ಮೊದಲ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಮಾಧವ ಕೃಪಾ ಸ್ಕೂಲ್ ಮಣಿಪಾಲ ಇದರ ಪ್ರಾಂಶುಪಾಲರಾದ ಸ್ವಾತಿ ಕುಲಕರ್ಣಿ ಮತ್ತು ಪೋದಾರ್ ಇಂಟರ್ನ್ಯಾಷನಲ್ ಸ್ಕೂಲಿನ ಶಿಕ್ಷಕಿಯಾದ ನವ್ಯ ಜಿ.ಕೆ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಎಸ್ ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ ಉಪಪ್ರಾಂಶುಪಾಲರಾದ ದೀಪಕ್ ಎನ್, ಕಾರ್ಯಕ್ರಮದ ಕೋಓರ್ಡಿನೇಟರ್ ಗೋಪಾಲಾಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಎಸ್.ಆರ್. ಪಬ್ಲಿಕ್ ಸ್ಕೂಲಿನ ಹಾಗೂ ಉಡುಪಿ ಜಿಲ್ಲೆಯ ಬೇರೆ ಬೇರೆ ಸಿಬಿಎಸ್ಇ ಶಿಕ್ಷಣ ಸಂಸ್ಥೆಯ ನೋಂದಾಯಿತ 60 ಮಂದಿ ಶಿಕ್ಷಕರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಆಂಗ್ಲ ಭಾಷಾ ಶಿಕ್ಷಕಿಯರಾದ ಸುಪ್ರೀತಾ ನಿರೂಪಿಸಿ, ನಿವೇದಿತ ಸ್ವಾಗತಿಸಿ, ಶಕುಂತಲಾ ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments