Sunday, May 24, 2026
Google search engine
Homeಕಾರ್ಕಳಕಾರ್ಕಳ: ಟ್ರಾನ್ಸ್‌ಫಾರ್ಮರ್ ಗೆ ಬೆಂಕಿ; ತಪ್ಪಿದ ಅನಾಹುತ

ಕಾರ್ಕಳ: ಟ್ರಾನ್ಸ್‌ಫಾರ್ಮರ್ ಗೆ ಬೆಂಕಿ; ತಪ್ಪಿದ ಅನಾಹುತ

ಸಾಣೂರಿನ ರಾಷ್ಟ್ರೀಯ ಹೆದ್ದಾರಿ 169ರ ಸೋಫಿ ಯಾ ಆಸ್ಪತ್ರೆ ಪಕ್ಕದ ಟ್ರಾನ್ಸ್‌ಫಾರ್ಮರ್ ನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡು ಅಗ್ನಿ ಅವಘಡ ಸಂಭವಿಸಿದೆ.

ಬೆಂಕಿಯ ಜ್ವಾಲೆ ಪಕ್ಕದ ಗಿಡಗಂಟೆಗಳಿಗೂ ವ್ಯಾಪಿಸಿ ಆತಂಕ ಸೃಷ್ಟಿಸಿತ್ತು. ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರಿಂದ, ಸಿಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

ಈ ಭಾಗದಲ್ಲಿ ಗಿಡಗಂಟಿಗಳು, ಕಟ್ಟಡ ತ್ಯಾಜ್ಯ ಅಪಾರ ಪ್ರಮಾಣದಲ್ಲಿದ್ದರಿಂದ ಬೆಂಕಿ ಅಧಿಕವಾಗಿ ವ್ಯಾಪಿಸಿ ದಟ್ಟ ಹೊಗೆ ಪರಿಸರದಲ್ಲಿ ಆವರಿಸಿ ಕೊಂಡಿತ್ತು. ಪರಿಸರದ ಸ್ಥಳೀಯರು ಆತಂಕಗೊಂಡಿದ್ದರು. ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆ ಯಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಅಪಾಯ ತಪ್ಪಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments