Thursday, April 9, 2026
Google search engine
Homeಕಾರ್ಕಳಕಾರ್ಕಳ: ಕೆ.ಎಂ.ಇ.ಎಸ್ ಪದವಿ ಪೂರ್ವ ಕಾಲೇಜಿಗೆ ಶೇಖಡಾ 98% ಫಲಿತಾಂಶ

ಕಾರ್ಕಳ: ಕೆ.ಎಂ.ಇ.ಎಸ್ ಪದವಿ ಪೂರ್ವ ಕಾಲೇಜಿಗೆ ಶೇಖಡಾ 98% ಫಲಿತಾಂಶ

ವಿಜ್ಞಾನ ವಿಬಾಗದಲ್ಲಿ ಶೇಖಡಾ 100% ಮತ್ತು ವಾಣಿಜ್ಯ ವಿಭಾಗದಲ್ಲಿ ಶೇಖಡಾ 98%

ಕೆ.ಎಂ.ಇ.ಎಸ್ ಪದವಿ ಪೂರ್ವ ಕಾಲೇಜಿಗೆ 2025-26ನೇ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿಭಾಗಕ್ಕೆ ಉತ್ತಮ ಫಲಿತಾಂಶ ಲಭಿಸಿದ್ದು, ವಿಜ್ಞಾನ ವಿಭಾಗದಲ್ಲಿ 44 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಸಂಸ್ಥೆಗೆ 100% ಫಲಿತಾಂಶ ಲಭಿಸಿರುತ್ತದೆ. ವಾಣಿಜ್ಯ ವಿಭಾಗದಲ್ಲಿ 53 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 98% ಫಲಿತಾಂಶ ತಂದಿದ್ದಾರೆ.

ವಿಜ್ಞಾನ ವಿಭಾಗದ 44 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, ವಾಣಿಜ್ಯ ವಿಭಾಗದ 53 ವಿದ್ಯಾರ್ಥಿಗಳಲ್ಲಿ 23ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಒಟ್ಟು 97 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲಿ, 52 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಯೂ, ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.. ಗಣಿತದಲ್ಲಿ 4 ವಿದ್ಯಾರ್ಥಿಗಳು 100ಅಂಕಗಳನ್ನು ಪಡೆದಿದ್ದರೆ, ವ್ಯವಹಾರ ಅಧ್ಯಾಯನದಲ್ಲಿ 3 ವಿದ್ಯಾರ್ಥಿಗಳು 100ಅಂಕಗಳನ್ನು ಪಡೆದಿದ್ದು, ಗಣಕ ವಿಜ್ಞಾನದಲ್ಲಿ 2, ಕನ್ನಡದಲ್ಲಿ 1, ಲೆಕ್ಕ ಶಾಸ್ತ್ರದಲ್ಲಿ 1 ಹಾಗೂ ಹಿಂದಿಯಲ್ಲಿ 1 ವಿದ್ಯಾರ್ಥಿ ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳು 100 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 588 ಅಂಕಗಳನ್ನು ಪಡೆದ ದೀಕ್ಷಾ ಆಚಾರ್ಯ ಸಂಸ್ಥೆಗೆ ಪ್ರಥಮ ಸ್ಥಾನಿಯಾದರೆ, 581 ಅಂಕ ಪಡೆದ ಹರ್ಷಿತ ಹೆಚ್ ಕಿಣಿ ಸಂಸ್ಥೆಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ನವೀನ್ ಬಿ ನಾಯಕ್ 586 ಅಂಕಗಳನ್ನು ಪಡೆದು ಸಂಸ್ಥೆಗೆ ಪ್ರಥಮ ಸ್ಥಾನದಲ್ಲಿದ್ದರೆ, 585 ಅಂಕಗಳನ್ನು ಪಡೆದ ಸಮೀಕ್ಷ ಮೊಯಿಲಿ ಮತ್ತು ಐಫಾ ನಿಧಾ ದ್ವಿತೀಯ ಸ್ಥಾನಿಯಾಗಿದ್ದಾರೆ.

ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರನ್ನು ಸಂಸ್ಥೆಯ ಅಧ್ಯಕ್ಷರಾದ ಕೆ,ಎಸ್.ಇಮ್ತಿಯಾಜ್ ಅಹಮ್ಮದ್ ರವರು ಅಭಿನಂದಿಸಿದ್ದಾರೆ. ಸಂಸ್ಥೆಯ ಪ್ರಾಂಶುಪಾಲರಾದ ಕೆ. ಬಾಲಕೃಷ್ಣರಾವ್ ರವರು ಉತ್ತಮ ಫಲಿತಾಂಶ ತಂದುಕೊಟ್ಟಿರುವ ವಿದ್ಯಾರ್ಥಿಗಳನ್ನು ಮತ್ತು ಪಲಿತಾಂಶವನ್ನು ಉತ್ತಮಗೊಳಿಸುವಲ್ಲಿ ಯಶಸ್ವಿಯಾಗಿರುವ ಉಪನ್ಯಾಸಕ ವೃಂದವನ್ನು ಅಭಿನಂದಿಸಿದ್ದಾರೆ.

AIFA NIDHA

SAMEEKSHA MOILY

DEEKSHA ACHARYA

NAVEEN B NAYAK

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments