Thursday, April 9, 2026
Google search engine
Homeಕಾರ್ಕಳಕುಕ್ಕುಂದೂರು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ

ಕುಕ್ಕುಂದೂರು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ

ರಾಜ್ಯ ಸರಕಾರ ನೀಡುವ 2024-25ನೇ ಸಾಲಿನ ಪ್ರತಿಷ್ಠಿತ ‘ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತ್ ತಾಲೂಕು ಮಟ್ಟದಲ್ಲಿ ಆಯ್ಕೆಯಾಗಿದೆ.

ಗ್ರಾ. ಪಂ. ಸುಸಜ್ಜಿತ ಆಡಳಿತ, ವಿವಿಧ ಅಭಿವೃದ್ಧಿಕಾರ್ಯಗಳಪರಿಣಾಮಕಾರಿ ಅನುಷ್ಠಾನ ಮತ್ತು ಗ್ರಾಮ ನೈರ್ಮಲ್ಯಕ್ಕೆ ನೀಡಿದ ಆದ್ಯತೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಜನರಿಗೆ ಸರಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವುದು, ನಿಯಮಿತವಾಗಿ ಸಭೆಗಳನ್ನು ಆಯೋ ಜಿಸಿ ಪಾರದರ್ಶಕತೆ ಕಾಯ್ದುಕೊಳ್ಳು ವುದು, ಸುಸಜ್ಜಿತ ಡಿಜಿಟಲ್ ಗ್ರಂಥಾ ಲಯ, ಶಿಶುಪಾಲನೆ ಕೇಂದ್ರ, ಶುದ್ಧ ಕುಡಿಯುವ ನೀರು ಸರಬರಾಜು, ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ, ನರೇಗಾ ಯೋಜನೆಯ ಯಶಸ್ವಿ ಅನುಷ್ಠಾನ ಹಾಗೂ ಗುಣಮಟ್ಟದ ಆರೋಗ್ಯ ಸೇವೆಗಳಂತಹ ಹಲವು ಮಾನದಂಡಗಳನ್ನು ಆಧರಿಸಿ ಈ ಆಯ್ಕೆ ನಡೆದಿದೆ.

ಪಂ.ನ ಹಿಂದಿನ ಆಡಳಿತ ಮಂಡಳಿ, ಕಾವ್ಯದರ್ಶಿಗಳು, ಲೆಕ್ಕ ಸಹಾಯಕರು, ಸಿಬಂದಿ ವರ್ಗ, ಮೇಲಧಿಕಾರಿಗಳು ಹಾಗೂಸಂಪೂರ್ಣ ಸಹಕಾರ ನೀಡಿದ ಗ್ರಾಮಸ್ಥರಿಂದ ಈ ಸಾಧನೆ ಸಾಧ್ಯವಾಗಿದೆ.

ಈ ಪ್ರಶಸ್ತಿಯು ಗ್ರಾಮದ ಅಭಿವೃದ್ಧಿಯ ವಿಷಯದಲ್ಲಿ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ರಿಗೆ ಮತ್ತಷ್ಟು ಉತ್ತಮ ಸೇವೆಗಳನ್ನು ನೀಡಲು ಮತ್ತು ಮಾದರಿ ಗ್ರಾಮವಾಗಿ ಮುನ್ನಡೆಯಲು ಈ ಪುರಸ್ಕಾರವು ದೊಡ್ಡ ಪ್ರೇರಣೆಯಾಗಿದೆ ಎಂದು ಪಿಡಿಒ ಅಧಿಕಾರಿ ಪ್ರದೀಪ್ ತಿಳಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments