ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜು, ಮಿಯ್ಯಾರು 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರಲ್ಲಿ ಶೇಕಡ ನೂರರಷ್ಟು ಫಲಿತಾಂಶ ದಾಖಲಿಸುವುದರ ಮೂಲಕ ಸತತ 7ನೇ ಬಾರಿಗೆ 100% ಪಡೆದ ದಾಖಲೆ ಬರೆದಿದೆ.
ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 73 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 49 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಹಾಗೂ 24 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ನಲ್ಲಿ ಉತ್ತಿರ್ಣರಾಗಿರುತ್ತಾರೆ.
ಕುಮಾರಿ. ಶ್ರೇಯಾ ಮತ್ತು ಕು. ಪ್ರಜ್ವಲ್ ಕುಮಾರ್ ಎಚ್ ಆರ್ 582ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ಕು. ರಾಹುಲ್ ಎಲ್ 581 ಅಂಕದೊಂದಿಗೆ ದ್ವಿತೀಯ ಸ್ಥಾನ, ಮತ್ತು ಕುಮಾರಿ ಶೋಭಾ ಆರ್- 578 ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ.
ಗಣಿತದಲ್ಲಿ 7 ವಿದ್ಯಾರ್ಥಿಗಳು, ಗಣಕ ವಿಜ್ಞಾನದಲ್ಲಿ ೫ ವಿದ್ಯಾರ್ಥಿಗಳು, ಕನ್ನಡದಲ್ಲಿ 2 ಮತ್ತು ಜೀವ ಶಾಸ್ತ್ರದಲ್ಲಿ 01 ವಿದ್ಯಾರ್ಥಿಗಳು 100 ಕ್ಕೆ 100 ಅಂಕವನ್ನು ಪಡೆದಿರುತ್ತಾರೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಪಡೆಯಲು ಮಾರ್ಗದರ್ಶನ ನೀಡಿ, ಕಾರಣಿ ಕರ್ತರಾದ ಕ್ರೖಸ್ ಇಲಾಖೆಯ ಮಾನ್ಯ ಇಡಿ ಸರ್ ರವರಿಗೆ ಹಾಗೂ ಎಲ್ಲಾ ಅಧಿಕಾರಿಗಳಿಗೆ, ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ರವರಿಗೆ, ನಮ್ಮ ವಸತಿ ಕಾಲೇಜಿನ ಎಲ್ಲಾ ಉಪನ್ಯಾಸಕರಿಗೆ, ಬೋಧಕೇತರ ಸಿಬ್ಬಂದಿಗಳಿಗೆ, ಅಡುಗೆ ಸಿಬ್ಬಂದಿಯವರಿಗೆ ಹಾಗೂ ಎಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಮತ್ತು ಸಹಕರಿಸಿದ ಎಲ್ಲಾ ಪೋಷಕರಿಗೆ ತುಂಬು ಹೃದಯದ ಧನ್ಯವಾದಗಳು.
-ಪ್ರಾಂಶುಪಾಲರು, ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು, ಮಿಯ್ಯಾರು, ಕಾರ್ಕಳ, ಉಡುಪಿ.


























