Sunday, April 12, 2026
Google search engine
Homeಕಾರ್ಕಳಕಾರ್ಕಳ: ರೋಟರಿ ಆನ್ಸ್ ಕ್ಲಬ್- ಹೂವಿನ ಅಲಂಕಾರ ಸ್ಪರ್ಧೆ

ಕಾರ್ಕಳ: ರೋಟರಿ ಆನ್ಸ್ ಕ್ಲಬ್- ಹೂವಿನ ಅಲಂಕಾರ ಸ್ಪರ್ಧೆ

ರೋಟರಿ ಆನ್ಸ್ ಕ್ಲಬ್ ಕಾರ್ಕಳ ವತಿಯಿಂದ ಹೂವಿನ ಅಲಂಕಾರ ಸ್ಪರ್ಧೆಯು ಹೋಟೆಲ್ ಪ್ರಕಾಶ್ ನಲ್ಲಿ ನಡೆಯಿತು.ಕ್ಲಬ್ಬಿನ ಅಧ್ಯಕ್ಷೆ ಜಯಂತಿ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ರೋಟರಿ ಜಿಲ್ಲಾ ಪ್ರಥಮ ಮಹಿಳೆ ರೇಖಾ ಪಾಲಾಕ್ಷ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಸಭಾಪತಿ ವೃಂದಾ ಹರಿಪ್ರಕಾಶ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.

ಹೂವಿನ ಅಲಂಕಾರ ಮತ್ತು ರಂಗೋಲಿ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದ ಆಶಾ ಡಿಮೆಲ್ಲೊ, ಸಹನಾ ಹೆಗ್ಡೆ ಮತ್ತು ಗಾಯತ್ರಿ ವಿಜೇಂದ್ರ, ದ್ವಿತೀಯ ಸ್ಥಾನ ಪಡೆದ ಕಸ್ತೂರಿ ವಸಂತ್, ವೃಂದಾ ಹರಿಪ್ರಕಾಶ್ ಶೆಟ್ಟಿ ಇವರಿಗೆ ಅತಿಥಿಗಳು ಬಹುಮಾನದೊಂದಿಗೆ ಅಭಿನಂದಿಸಿದರು.

ವಿಜಯಶ್ರೀ ರಾವ್ ಪ್ರಾರ್ಥಿಸಿದರು.ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ ನಿರೂಪಿಸಿದರು.ಆಶಾ ಡಿಮೆಲ್ಲೊ ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments