Tuesday, April 14, 2026
Google search engine
Homeಕಾರ್ಕಳಕಾರ್ಕಳ: ಬಾವಿಯ ಪೈಪ್ ಮೇಲೆತ್ತಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದು ಬಾಲಕ ಸಾವು

ಕಾರ್ಕಳ: ಬಾವಿಯ ಪೈಪ್ ಮೇಲೆತ್ತಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದು ಬಾಲಕ ಸಾವು

ಬಾವಿಗೆ ಅಳವಡಿಸಿದ್ದ ಪೈಪ್ ಮೇಲೆತ್ತಲು ಹೋದ ಸಂದರ್ಭ ಕಾಲು ಜಾರಿ ಬಾವಿಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಬೋಳ ಗ್ರಾಮದ ಪುರ್ಲಡ್ಕ ಎಂಬಲ್ಲಿ ಸಂಭವಿಸಿದೆ.

ಇರ್ವತ್ತೂರು ಗ್ರಾಮದ ನಿವಾಸಿ ರಾಜೇಶ್ ಶೆಟ್ಟಿ ಅವರ ಕಿರಿಯ ಪುತ್ರ ರಿತಿಕ್ ಆ‌ರ್. ಶೆಟ್ಟಿ (11) ಮೃತಪಟ್ಟ ಬಾಲಕ.

ಕಳೆದ ನಾಲ್ಕು ವರ್ಷಗಳಿಂದ ರಾಜೇಶ್ ಶೆಟ್ಟಿ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೋಳ ಗ್ರಾಮದ ಪುರ್ಲಡ್ಕ ಪರಾರಿ ಎಂಬಲ್ಲಿ ವಾಸವಾಗಿದ್ದರು.
ಎ.12 ರಂದು ಮಧ್ಯಾಹ್ನ ರಾಜೇಶ್ ಶೆಟ್ಟಿ ಅವರು ತಮ್ಮ ಅಡಿಕೆ ತೋಟಕ್ಕೆ ನೀರು ಬಿಡಲು ಪಂಪ್ ಸ್ವಿಚ್ ಹಾಕಿದ್ದರು. ಆದರೆ ನೀರು ಬಾರದಿದ್ದಾಗ, ಕಿರಿಯ ಮಗ ರಿತಿಕ್ ತನ್ನ ಅಣ್ಣ ರಿತೇಶ್ ಜತೆ ಬಾವಿಯ ಬಳಿಗೆ ಹೋಗಿದ್ದನು.

ಪೈಪ್‌ನಲ್ಲಿ ಏನೋ ಸಮಸ್ಯೆ ಇರಬೇಕೆಂದು ಭಾವಿಸಿ ರಿತಿಕ್ ಅದನ್ನು ಮೇಲೆತ್ತಲು ಪ್ರಯತ್ನಿಸಿದಾಗ ಕಾಲು ಜಾರಿ ಬಾವಿಗೆ ಬಿದ್ದಿದ್ದಾನೆ ಎನ್ನಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments