ನಂದಳಿಕೆಯಲ್ಲಿ ವೃದ್ಧರೊಬ್ಬರು ತಮ್ಮ ಮನೆಯೊಳಗೆ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸಂಭವಿಸಿದೆ.
ವಾಸುದೇವ ಆಚಾರ್ಯ (70) ಮೃತ ವ್ಯಕ್ತಿ. ಅವರು ನಂದಳಿಕೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು. ಕಳೆದ ಕೆಲವು ದಿನಗಳಿಂದ ಅವರ ಮನೆಯ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಎ. 12ರಂದು ಸ್ಥಳೀಯ ನಿವಾಸಿಗಳು ಗಮನಿಸಿದಾಗ ಮನೆಯ ಒಳಗಿನಿಂದ ದುರ್ವಾಸನೆ ಬರುತ್ತಿತ್ತು. ಅವರು ಸಂಬಂಧಿಕರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಮೃತರ ಅಳಿಯ ಉದಯ ಆಚಾರ್ಯ ಮತ್ತು ಇತರರು ಮನೆಯ ಬಾಗಿಲನ್ನು ಒಡೆದು ಒಳಗೆ ಹೋದಾಗ, ಅಡುಗೆ ಕೋಣೆಯಲ್ಲಿ ವಾಸುದೇವ ಆಚಾರ್ಯ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















