ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು “ನಮ್ಮೂರು ನಮ್ಮ ಕೆರೆ ” ವಿಶೇಷ ಯೋಜನೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ೧.೧೫ ಎಕರೆ ವಿಸ್ತೀರ್ಣದ ಮುದ್ರಾಡಿ ಮೇಲ್ಬೆಟ್ಟು ಮದಗದ ಅಭಿವೃದ್ಧಿ ಕಾರ್ಯವು ನಡೆಯುತ್ತಿದ್ದು ಭಾನುವಾರ ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮೇಲ್ಬೆಟ್ಟು ಕೆರೆ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ, ಯೋಜನೆಯ ಕೃಷಿ ಅಧಿಕಾರಿ ಉಮೇಶ್ ಬಿ.ಕೆ, ಮುದ್ರಾಡಿ ಮೇಲ್ಬೆಟ್ಟು ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ, ಯುವ ಉದ್ಯಮಿ ಮುದ್ರಾಡಿಯ ಆದರ್ಶ ಎಂ. ಪೂಜಾರಿ, ಕಿರಣ್ ಹೆಗ್ಡೆ ಕಾರ್ಕಳ ಮತ್ತಿತರರು ಹಾಜರಿದ್ದರು.
















