ಕಾರ್ಕಳ ಪುರಸಭೆ ವತಿಯಿಂದ ಸುಮಾರು 15 ವರ್ಷಗಳ ಹಿಂದೆ ಅಡ್ಡರಸ್ತೆಗಳಿಗೆ ಅಳವಡಿಸಲಾದ ನಾಮಫಲಕಗಳು ಬಿದ್ದು, ಅಕ್ಷರಗಳು ಕಾಣದಂತಹ ಪರಿಸ್ಥಿತಿಯನ್ನು ಮನಗಂಡು ಪುರಸಭೆ ಮಾಜಿ ಸದಸ್ಯ, ಸಮಾಜ ಸೇವಕರಾದ ಪ್ರಕಾಶ್ ರಾವ್ ಅವರು ಕಾಳಿಕಾಂಬಾ ಪರಿಸರದ ನಾಮಫಲಕಗಳಿಗೆ ಪುನರ್ ಜೀವ ನೀಡುವ ಕಾರ್ಯ ಕೈಗೊಂಡಿದ್ದಾರೆ .
ವಿಶೇಷತೆಯೇನೆಂದರೆ ಬಿದ್ದು ಹೋದ ನಾಮ ಫಲಕಗಳನ್ನು ಸರಿಪಡಿಸಿ ಅಡ್ಡರಸ್ತೆಗಳ ಹೆಸರನ್ನು ಬರೆಸಿ, ನಾಮಫಲಕಕ್ಕೆ ಮಳೆನೀರು ಬೀಳದಂತೆ ಮೇಲ್ಚಾವಣಿಯನ್ನು ನಿರ್ಮಿಸಿದ್ದಾರೆ.
ಇಂತಹ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದ ಒಬ್ಬ ಮಾಜಿ ಪುರಸಭಾ ಸದಸ್ಯನ ಕಾರ್ಯವೈಖರಿಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.





















