ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಶಾಸಕ ಸುನೀಲ್‌ಕುಮಾರ್‌ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ತಾಲ್ಲೂಕು ಕಚೇರಿಯಲ್ಲಿ ನಡೆಯಿತು.
ಸಾರ್ವಜನಿಕರು 94ಸಿ ಹಕ್ಕುಪತ್ರ, ಜಮೀನಿನ ಹಕ್ಕಪತ್ರ, ಪಡಿತರ ಚೀಟಿ ಸಮಸ್ಯೆ ಸೇರಿ ಹಲವು ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು. ಪ್ರಗತಿಪರ ಹೋರಾಟಗಾರ ಕೆರೆಬೆಟ್ಟು ಸಂಜೀವ ಶೆಟ್ಟಿಯವರು ಭೂನ್ಯಾಯ ಮಂಡಳಿಗೆ ಖಾಯಂ ಸಹಾಯಕ ಕಮೀಷನರ್ ನೇಮಕ ಸಹಿತ ಹಲವು ವಿಚಾರಗಳ ಬಗ್ಗೆ ಶಾಸಕರ ಗಮನ ಸೆಳೆದರು.
ಜಮೀನಿನ ಹಕ್ಕುಪತ್ರವನ್ನು ನೀಡುವಾಗ ಜನತೆಗೆ ನೆರವಾಗಿ, ಕುಮ್ಕಿ ವಿಚಾರವನ್ನು ಮುಂದಿಟ್ಟು ಹಕ್ಕುಪತ್ರ ನೀಡುವುದನ್ನು ವಿಳಂಬ ಮಾಡಬೇಡಿ ಎಂದು ಶಾಸಕ ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಜನಸ್ಪಂದನ ದಲ್ಲಿ ಬಂದ ಅರ್ಜಿಗಳನ್ನು ಆದ್ಯತೆಯಲ್ಲಿ ವಿಲೇವಾರಿ ಮಾಡಿ ಎಂದು ಸೂಚಿಸಿದರು. 94ಸಿ ಹಕ್ಕುಪತ್ರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸವಲತ್ತು ವಿತರಿಸಲಾಯಿತು. ಹೆಬ್ರಿಯ ಪ್ರಭಾರ ತಹಶೀಲ್ಧಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿದರು. ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ರಾವ್, ಸಹಾಯಕ ನಿರ್ದೇಶಕ ದಿನೇಶ್, ಅಕ್ರಮಸಕ್ರಮ ಸಮಿತಿ ಸದಸ್ಯ ನವೀನ್ ಅಡ್ಯಂತಾಯ, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.


















