2023ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧ ಪಕ್ಷದವರು ಸರ್ವನುಮತದಿಂದ ಅಂಗಿಕರಿಸಿದ್ದರು ಕೂಡ, ಇಷ್ಟರವರೆಗೆ ಅದನ್ನು ಜಾರಿಮಾಡದೆ ಈಗ ಕೆಲವು ರಾಜ್ಯಗಲ್ಲಿ ಚುನಾವಣೆ ಇರುವುದರಿಂದ ಮಹಿಳಾ ಕಾಳಜಿ ತೋರಿಸಿ ಕಾಂಗ್ರೆಸ್ ಪಕ್ಷವನ್ನು ಮಹಿಳಾ ವಿರೋಧಿ ಎಂದು ಬಿಂಬಿ ಸುವ ಹಿಡನ್ ಪ್ರೊಪೋಗಾಂಡದಿಂದ ಹೊರಗೆ ಬಂದು ಆದಷ್ಟು ಬೇಗ ಈಗಿರುವ 543ಕ್ಕೆ 33% ಮಹಿಳಾ ಮೀಸಲಾತಿಯನ್ನು ಜಾರಿ ತರಬೇಕು. ಲೋಕಸಭೆಯ ಭಾಷಣದಲ್ಲಿ ಸ್ಪೀಕರ್ ಎಲ್ಲಿಯೂ ಮಹಿಳಾ ಮೀಸಲಾತಿ ಎಂದು ಎಲ್ಲಿಯೂ ಉಲ್ಲೇಖ ಮಾಡದೇ ಸಂವಿಧಾನ ತಿದ್ದುಪಡಿ ಬಿಲ್ ಎಂದು ಹೇಳಿ 3 ಬಿಲ್ಲಗಳನ್ನು ಜೊತೆ ಹಾಕಿ ಗುಂಪಿನಲ್ಲಿ ಗೋವಿಂದ ಮಾಡಿ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರುಸುವ ಹುನ್ನಾರ ಮೊದಲೇ ನಡೆದಿತ್ತಾ ??? ಹಾಗಾದರೆ ಮತದಾನ ಮಾಡುವಾಗ ಮಹಿಳಾ ಮೀಸಲಾತಿಗೆ ಬೇರೆ ಕ್ಷೇತ್ರ ಮರುವಿಂಗಡಣೆಗೆ ಬೇರೆ ಬೇರೇ ಮತದಾನ ಮಾಡಿಸದೆ ಈ ರೀತಿಯ ಸುಳ್ಳಿನ ನಾಟಕ ಮಾಡುವ ಉದ್ದೇಶ ಏನಿತ್ತು?
ಮಹಿಳೆಯರ ಮೇಲೆ ಅಷ್ಟೊಂದು ಪ್ರೀತಿ ಇದ್ದವರು ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಆದಾಗ, ನಮ್ಮ ಮಹಿಳಾ ಕ್ರೀಡಾಪಟುಗಳ ಮೇಲೆ ದೌರ್ಜನ್ಯ ಆದಾಗ ಮೋದಿಜಿ ನೇತೃತ್ವದ ಕೇಂದ್ರೀಯ ಬಿಜೆಪಿ ಸರಕಾರ ಯಾಕೆ ಬಾಯಿ ತೆರೆಯಲಿಲ್ಲ.
ಇನ್ನು ಏನ್ ಡಿ ಎ ಸರಕಾರದ ಜೊತೆ ಇದ್ದ ಕೆಲವು ಸಂಸದರಿಗೆ ಮೋದಿಜಿ ಸರಕಾರದ ಮೇಲೆ ನಂಬಿಕೆ ಇಲ್ಲಾ ಎಂಬುದು ಮಹಿಳಾ ಮೀಸಲಾತಿಗೆ ಮತದಾನ ಮಾಡಿದ ಅಂಕಿ ಅಂಶ ದಿಂದ ತಿಳಿಯುತ್ತದೆ, 2011 ಜನ ಗಣತಿಯನ್ನು ಮುಂದಿಟ್ಟು ಕ್ಷೇತ್ರ ಮರು ವಿಂಗಡಣೆ ಎಷ್ಟು ಸರಿ, ಕ್ಷೇತ್ರ ಮರುವಿಂಗಡಣೆ ಮಸೂದೆ ಸೋಲಾದ ಕೂಡಲೇ ತುರಾ ತುರಿಯಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಮಾಧ್ಯಮ ಎದುರು ಮೊಸಳೆ ಕಣ್ಣೀರು ಸುರಿಸಿ ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು, ಸತ್ಯ ವನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಲಿ.







ಸೋಲಾಗಿರುವುದು ಮಹಿಳಾ ಮೀಸಲಾತಿಗಲ್ಲ , ಮಹಿಳಾ ಮೀಸಲಾತಿ ಮುಸುಕಿನಲ್ಲಿ ಡಿಲಿಮಿಟೇಷನ್ ಮಾಡುವ ಕೇಂದ್ರ ಸರಕಾರದ ಕುತಂತ್ರಕ್ಕೆ – ಅನಿತಾ ಡಿ’ಸೋಜಾ, ಬೆಳ್ಮಣ್. ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ



ಜಾಹೀರಾತು










