Thursday, April 23, 2026
Google search engine
Homeಕಾರ್ಕಳಕಾರ್ಕಳ: ಕ್ರೈಸ್ಟ್ ಕಿಂಗ್  ಹತ್ತನೇ ತರಗತಿಯಲ್ಲಿ ಅಮೋಘ ಫಲಿತಾಂಶ; ಸತತ 17ನೇ ಬಾರಿಗೆ ನೂರು ಶೇಖಡಾ...

ಕಾರ್ಕಳ: ಕ್ರೈಸ್ಟ್ ಕಿಂಗ್  ಹತ್ತನೇ ತರಗತಿಯಲ್ಲಿ ಅಮೋಘ ಫಲಿತಾಂಶ; ಸತತ 17ನೇ ಬಾರಿಗೆ ನೂರು ಶೇಖಡಾ ಫಲಿತಾಂಶ

617 ಅಂಕಗಳನ್ನು ಪಡೆದ ಕೆ.ಶ್ರೀಶಾ ಪ್ರಭು ರಾಜ್ಯಕ್ಕೆ ಒಂಬತ್ತನೇ ರ‍್ಯಾಂಕ್
18 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕದ ಜೊತೆಗೆ 95 ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿ

ಈ ಬಾರಿಯ ಹತ್ತನೇ ತರಗತಿ ಫಲಿತಾಂಶದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತೊಮ್ಮೆ 100% ಶೇಖಡಾ ಫಲಿತಾಂಶದೊAದಿಗೆ ಸತತ 17ನೇ ಬಾರಿಗೆ ನೂರು ಶೇಖಡಾ ಫಲಿತಾಂಶ ದಾಖಲಿಸುವ ಮೂಲಕ ಅಮೋಘ ಫಲಿತಾಂಶವನ್ನು ಪಡೆದುಕೊಂಡಿದೆ. ಸಂಸ್ಥೆಯ ವಿದ್ಯಾರ್ಥಿ ಕೆ. ಶ್ರೀಶಾ ಪ್ರಭು 625 ಕ್ಕೆ 617 ಅಂಕಗಳನ್ನು ಪಡೆದು ರಾಜ್ಯಕ್ಕೆ ಒಂಬತ್ತನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ. 18 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು 159 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ95 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ ಉಳಿದಂತೆ 62 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಎರಡು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಪರೀಕ್ಷೆ ಬರೆದ ಸಂಸ್ಥೆಯ 98.74 % ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದಂತಾಗಿದೆ. ಒಟ್ಟು 58 ವಿದ್ಯಾರ್ಥಿಗಳು ಎ+ ಅಂದರೆ 90 ಶೇಕಡಾಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. 600ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ ಈ ಕೆಳಕಂಡಂತಿದೆ.

ಕೆ.ಶ್ರೀಶಾ ಪ್ರಭು 617

, ಅನುಶ್ರೀ ಪ್ರಭು 611, ಆಯಿಷಾ ರೂಬಾ 608, ಧನ್ವಿ ಗಣೇಶ್ ಶೆಟ್ಟಿ 608, ಟಿಸ್ಸಾ ಅಲ್ಫೋನ್ಸಾ ಆಗಸ್ಟೀನ್ 607, ಆದ್ಯಾ ಸುಧೀರ್ ಜೈನ್ 605

Untitled design – 1

, ಗೌತಮಿ ಪ್ರಭಾಕರ್ ಶೆಟ್ಟಿ 605. ಲೆನಿಶಾ ಡಿಸೋಜ 604, ನೋರ್ವಿನ್ ಮೆಂಡೋನ್ಸಾ 604, ಸಾನ್ವಿ ಸತೀಶ್ ಶೆಟ್ಟಿ 604, ಸ್ಲಾನಿಯಾ ನಿಸೆಲ್ ನೊರೋನ್ಹಾ 604, ಆರುಷ್ ಎಸ್ ಶೆಟ್ಟಿ 603, ಫಾತಿಮಾ ಶಿಫಾನಾ 603, ಕವನ ಕೆ ಮೂಲ್ಯ 603, ಸಾನ್ವಿ ಮಾರ್ಟಿಸ್ 602, ಅನಿಷಾ ಡಿಸೋಜ 601, ಲೆನಿಶಾ ಲಿಯಾನ್ನಾ ಮೆಂಡೋನ್ಸಾ 601 ಹಾಗೂ ಶಹನುಮ್ ಫಾತಿಮಾ 601 ಅಂಕಗಳನ್ನು ಪಡೆದಿದ್ದಾರೆ. ಕನ್ನಡದಲ್ಲಿ 25, ಹಿಂದಿಯಲ್ಲಿ 21, ಗಣಿತದಲ್ಲಿ 1 ಹಾಗೂ ಸಮಾಜ ವಿಜ್ಞಾನದಲ್ಲಿ7 ಹೀಗೆ ಒಟ್ಟು 54 ವಿಷಯವಾರು ನೂರಕ್ಕೆ ನೂರು ಅಂಕಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments