Friday, April 24, 2026
Google search engine
Homeಕಾರ್ಕಳಮಾಳ:ಸರ್ಕಾರಿ ಪ್ರೌಢಶಾಲೆ ಕೂಡಬೆಟ್ಟು-100% ಫಲಿತಾಂಶ

ಮಾಳ:ಸರ್ಕಾರಿ ಪ್ರೌಢಶಾಲೆ ಕೂಡಬೆಟ್ಟು-100% ಫಲಿತಾಂಶ

ಸರ್ಕಾರಿ ಪ್ರೌಢಶಾಲೆ, ಕೂಡಬೆಟ್ಟು–ಮಾಳ, ಕಾರ್ಕಳ ಇಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಸಾಧನೆಯಾಗಿ ಶಾಲೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದೆ.

ವಿದ್ಯಾರ್ಥಿನಿಯರಾದ ಸಿಂಚನ (92.48%) ಹಾಗೂ ಪ್ರನನ್ಯ (86.88%) ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶಾಲೆಗೆ ಹೆಮ್ಮೆ ತಂದಿದ್ದಾರೆ.

ಇದಲ್ಲದೆ, 16 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ಶಿಕ್ಷಕರ, ಎಸ್ ಡಿ ಎಂ ಸಿ ಮತ್ತು ಹಳೆ ವಿದ್ಯಾರ್ಥಿಗಳ ಪರಿಶ್ರಮ, ವಿದ್ಯಾರ್ಥಿಗಳ ಶ್ರಮ ಹಾಗೂ ಪೋಷಕರ ಬೆಂಬಲದ ಫಲವಾಗಿದೆ. ಈ ಸಾಧನೆ ಶಾಲೆಯ ಶೈಕ್ಷಣಿಕ ಗುಣಮಟ್ಟ ಮತ್ತು ಸಮರ್ಪಣೆಯ ಪ್ರತೀಕವಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments