Saturday, April 25, 2026
Google search engine
Homeಕಾರ್ಕಳಹೆಬ್ರಿ: ಶಿವಪುರದಲ್ಲಿ ಹರಿಕಥಾ ಸತ್ಸಂಗ ಗೋಷ್ಠಿ

ಹೆಬ್ರಿ: ಶಿವಪುರದಲ್ಲಿ ಹರಿಕಥಾ ಸತ್ಸಂಗ ಗೋಷ್ಠಿ

ಹೆಬ್ರಿಯ ಶಿವಪುರದಲ್ಲಿ ಶ್ರೀ ಶಂಕರ ಜಯಂತಿ ಪ್ರಯುಕ್ತ ಶಿವಗಿರಿಯಲ್ಲಿ ಮಂಗಳೂರಿನ ಹರಿದಾಸ ಡಾ.ಶಿವಪುರ ಪದ್ಮನಾಭ ಗುರುದಾಸ್‌ ಅವರು “ಭಕ್ತ ಕನಕದಾಸ” ಎಂಬ ಹರಿಕಥೆಯನ್ನು ಸಾದರ ಪಡಿಸಿದರು. ಹಿರಿಯ ಹರಿದಾಸ ಬಿ.ಸಿ.ರಾವ್ ಶಿವಪುರ ಶ್ರೀ ಶಂಕರರ ತತ್ವಗಳ ಉಪನ್ಯಾಸ ನೀಡಿದರು. ಶಿವಪುರ ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಂದಿರಾ ಕುಲಾಲ್ ಮತ್ತು ಶಿವಪುರ ಪಂಚಾಯತಿ ಮಾಜಿ ಸದಸ್ಯ ಜಗನ್ನಾಥ ಕುಲಾಲ ನೇತ್ರತ್ವದಲ್ಲಿ ಕಾರ್ಯಕ್ರಮ ನಡೆಯಿತು.

ರವಿರಾಜ ಒಡಿಯೂರು ಹಾರ್ಮೋನಿಯಂನಲ್ಲಿ ಮತ್ತು ಕಿರಣ ಕುಮಾರ್ ಬಂಟ್ವಾಳ ತಬಲಾದಲ್ಲಿ ಹಾಗೂ ಸಂಜಯ ಕುಮಾರ ಮಂಗಳೂರು.ತಾಳ ವಾದ್ಯದಲ್ಲಿ ಸಾಥ್‌ ನೀಡಿದರು. ಶಿವಪುರ ಶ್ರೀ ಶಂಕರ ದೇವ ದೇವಾಲಯದ ಮಾಜಿ ಆಡಳಿತ ಮೋಕ್ತೇಸರ ಮುರ್ಸಾಲು ಮೋಹನದಾಸ ನಾಯಕ್ ಹರಿದಾಸ ಡಾ.ಶಿವಪುರ ಪದ್ಮನಾಭ ಗುರುದಾಸ್‌ ಅವರನ್ನು ಸನ್ಮಾನಿಸಿದರು.

ಮಂಗಳೂರು ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಉದಯ ಕೋಟ್ಯಾನ್, ಸುಧಾಕರ ಶೆಟ್ಟಿ, ಶಿವಪುರ ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಹಲವು ಗಣ್ಯರು ಉಪಸ್ಥಿತರಿದ್ದರು

ಶಿವಪುರ ಜಗನ್ನಾಥ ಕುಲಾಲ್‌ ಸ್ವಾಗತಿಸಿದರು. ಇಂದಿರಾ.ಜೆ.ಕುಲಾಲ್‌ ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments