Home Blog Page 29

ನಿಟ್ಟೆ: ಡಾ.ಎನ್.ಎಸ್.ಎ.ಎಮ್ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’ ಅಭಿಯಾನ

0

 

ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾದಕ ದ್ರವ್ಯ ವ್ಯಸನ ವಿರೋಧಿ ಸಮಿತಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೇಂಜರ್ಸ್ & ರೋವರ್ಸ್ ಘಟಕ ಹಾಗೂ ಯೂತ್ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ಕಾರ್ಕಳ ಪೋಲಿಸ್ ಠಾಣೆಯ ಸಹಕಾರದೊಂದಿಗೆ ‘ನಶಾ ಮುಕ್ತ ಭಾರತ’ ಅಭಿಯಾನವನ್ನು ಆ. 23 ರಂದು ಹಮ್ಮಿಕೊಳ್ಳಲಾಯಿತು. ಈ ಪ್ರಯುಕ್ತ ಬೀದಿ ನಾಟಕ ಮತ್ತು ಜಾಥಾ ಆಯೋಜನೆಯ ಮೂಲಕ ಸಾರ್ವಜನಿಕ ಜಾಗೃತಿಯನ್ನು ಮೂಡಿಸಲಾಯಿತು.

ನಶಾ ಮುಕ್ತ ಭಾರತ ಅಭಿಯಾನದ ಕುರಿತು ಜಾಗೃತಿ ಮೂಡಿಸಲು ಈ ಕಾರ್ಯಕ್ರಮಕ್ಕೆ ಕಾರ್ಕಳ ಪೋಲೀಸ್ ಠಾಣಾ ಅಧಿಕಾರಿ ಪ್ರಸನ್ನ ಎಂ.ಎಸ್. ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ನೆರೆದ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಸನ್ನ ಎಂ.ಎಸ್ ನಶಾ ಮುಕ್ತ ಭಾರತವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಜವಬ್ಧಾರಿ ಹೆಚ್ಚಿದೆ, ಭಾರತದಲ್ಲಿ ದಾಖಲಾಗುವ ಮಾದಕ ವ್ಯಸನ ದೂರುಗಳಲ್ಲಿ ವಿದ್ಯಾರ್ಥಿಗಳ ಸಮೂಹ ದೊಡ್ಡದು. ಹಾಗಾಗಿ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದೇ ನಶಾ ಮುಕ್ತ ಭಾರತ ನಿರ್ಮಾಣದ ಮೊದಲ ಮೆಟ್ಟಿಲು ಎಂದು ತಿಳಿಸದರು.

ವಿದ್ಯಾರ್ಥಿ ಶಕ್ತಿ ದೇಶದ ಶಕ್ತಿಆಗಬೇಕೆ ಹೊರತು ಅದು ದೇಶದ ದೌರ್ಬಲ್ಯವಾಗಬಾರದು. ಹಾಗಾಗಿ ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೆ ಉತ್ತಮ ಸಮಾಜದ ಪಾಲುದಾರರಾಗಬೇಕು ಎಂದು ತಿಳಿಸಿದರು. ಇದರ ಜೊತೆಗೆ ಮಾದಕ ದ್ರವ್ಯ ವ್ಯಸನ ಅಪರಾಧಕ್ಕೆ ಇರುವ ಕಾನೂನು ಮತ್ತು ಶಿಕ್ಷೆಗಳ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸುಮನ ಎಂ ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ವಿದ್ಯಾರ್ಥಿಗಳಿಗೆ ನಶಾ ಮುಕ್ತ ಭಾರತ ಅಭಿಯಾನದ ಪ್ರತಿಜ್ಞೆಯನ್ನು ಬೋಧಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕಿರು ನಾಟಕಗಳ ಮೂಲಕ ಜಾಗೃತಿ ಮೂಡಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಕಾರ್ಕಳ ಪೋಲಿಸ್ ಠಾಣಾ ಅಧಿಕಾರಿ ಪ್ರಸನ್ನ ಎಂ.ಎಸ್ ಅವರೊಂದಿಗೆ ಸಾರ್ವಜನಿಕ ಜಾಗೃತಿಗಾಗಿ ಕಾಲೇಜಿನಿಂದ ನಿಟ್ಟೆ ಬಸ್ ನಿಲ್ದಾಣದವರೆಗೆ ಕಾಲ್ನಡಿಗೆ ಜಾಥವನ್ನು ನಡೆಸಿದರು.

ಸಭಾ ಕಾರ್ಯಕ್ರಮದಲ್ಲಿ ಕಾರ್ಕಳ ಪೋಲಿಸ್ ಠಾಣೆಯ ರುದ್ರೇಶ್, ರೇಂಜರ್ಸ್ & ರೋವರ್ಸ್ ಘಟಕದ ಸಂಯೋಜಕರಾದ ಪ್ರಕಾಶ್, ಯೂತ್ ರೆಡ್ ಕ್ರಾಸ್ ಸೊಸೈಟಿ ಸಂಯೋಜಕಿ ರಶ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನ ಅಧಿಕಾರಿ ನಮಿರಾಜ್ ಸ್ವಾಗತಿಸಿದರು. ವಿದ್ಯಾರ್ಥಿನಿ ಕುಮಾರಿ ಮಧುರಾ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಕಳ: ಬೆಳ್ಳಂಬೆಳಿಗ್ಗೆ ಕುಂಟಲ್ಪಾಡಿಯಲ್ಲಿ ವ್ಯಕ್ತಿಯೋರ್ವನ ಭೀಕರ ಹತ್ಯೆ

0

 

ಕುಂಟಲ್ಪಾಡಿಯ ಆನಂದ್ ಟ್ರೇಡರ್ಸ್ ಮುಂಭಾಗ ರಸ್ತೆ ಬದಿಯಲ್ಲಿ ವ್ಯಕ್ತಿಯೋರ್ವನ ಕೊಲೆ ನಡೆದ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ನವೀನ್ ಕುಮಾರ್ ಎಂದು ಗುರ್ತಿಸಲಾಗಿದೆ.

ಬೆಳಗಿನ ಜಾವ 3 ಗಂಟೆ ಆಸುಪಾಸಿಗೆ ಘಟನೆ ನಡೆದಿದ್ದು, ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

ಕೊಲೆಯಾದ ವ್ಯಕ್ತಿ ಮೂಲತಃ ಮಂಗಳೂರಿನ ಪಡೀಲ್ ನಿವಾಸಿಯಾಗಿದ್ದು, ಕಾರ್ಕಳದ ಎಸ್.ಜೆ.ಆರ್ಕೆಡ್ ನಲ್ಲಿ ವಾಸವಿದ್ದರು. ಇವರು ಬಡ್ಡಿ ವ್ಯವಹಾರ ಮಾಡುತ್ತಿದ್ದರೆಂದು ತಿಳಿದುಬಂದಿದೆ.

ಕ್ರೈಸ್ಟ್ ಕಿಂಗ್ : ಟೇಬಲ್ ಟೆನ್ನಿಸ್‌ನಲ್ಲಿ ಐಶ್ವರ್ಯ ರಾಜ್ಯಮಟ್ಟಕ್ಕೆ ಆಯ್ಕೆ

0

 

ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ಸುಂದರ ಪುರಾಣಿಕ್ ಸ್ಮಾರಕ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ 14/17 ರ ವಯೋಮಿತಿಯ ಬಾಲಕಿಯರ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಐಶ್ವರ್ಯ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಉಳಿದಂತೆ ಆರನೇ ತರಗತಿಯ ಡೆಲ್ಸಿಯಾ ಡಿ’ಸೋಜ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.

ಮೂಡುಬಿದಿರೆ: ಡಿವೈಡರ್‌ ಗೆ ಕಾರು ಡಿಕ್ಕಿ; ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

0

ರಾಷ್ಟ್ರೀಯ ಹೆದ್ದಾರಿ 169 ರ ಮೂಡಬಿದ್ರೆಯ ಬೆಳುವಾಯಿ ಪೇಟೆಯಲ್ಲಿ ಆ. 16 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತ ಯುವಕ ಸಂದೀಪ್‌ ಸಿದ್ದಕಟ್ಟೆ (25) ಎಂದು ತಿಳಿದು ಬಂದಿದೆ. ಕಾರು ಡಿವೈಡರ್‌ ಗೆ ಬಡಿದು ಸಂಭವಿಸಿದ್ದ ಅಪಘಾತದಲ್ಲಿ ಮಂಗಳೂರಿನ ಹೊಟೇಲೊಂದರ ಕಾರ್ಮಿಕ ವೇಣೂರು ನಿವಾಸಿ ಸುಮಿತ್‌ ಮೃತಪಟ್ಟಿದ್ದರು. ಜೊತೆಗಿದ್ದ ಸಂದೀಪ್‌ ಸಹಿತ ನಾಲ್ವರು ಗಾಯಗೊಂಡಿದ್ದರು. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂದೀಪ್‌ ಭಾನುವಾರ ಮದ್ಯಾಹ್ನದ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಬೈಕ್​ ಸವಾರನಿಗೆ ಡಿಕ್ಕಿ ಹೊಡೆದ ಬಿಜೆಪಿ MLA ಬೆಂಬಲಿಗನ ಕಾರು; ಅಮಾಯಕ ಬಲಿ

0

 

ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕರ ಯಾತ್ರೆ ವೇಳೆ ಕಾರು ಅಪಘಾತ ಸಂಭವಿಸಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಜೀವ ಬಿಟ್ಟಿದ್ದಾನೆ.

ಕುಣಿಗಲ್ ಬಳಿಯ ಬೆಳ್ಳೂರು ಕ್ರಾಸ್ ಬಳಿ ಈ ಅಪಘಾತ ನಡೆದಿದ್ದು, KA -05-NJ-2449 ನಂಬರಿನ ಕಾರು ಬೈಕ್​ ಸವಾರನಿಗೆ ಡಿಕ್ಕಿ ಹೊಡೆದಿದೆ. ಅಪಘಾತವಾದ ಕಾರಿನಲ್ಲಿ ಶಾಸಕ ರಾಮಮೂರ್ತಿ ಸಹೋದರ ಮುರಳಿ ಇದ್ದರು ಎಂದು ಹೇಳಲಾಗುತ್ತಿದೆ.

ಇನ್ನು, ಈ ಘಟನೆ ಸಂಬಂಧ ಸಿ.ಕೆ ರಾಮಮೂರ್ತಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿಗೆ ಅಪಘಾತವಾಗಿದೆ. ಆ ವ್ಯಕ್ತಿ ಸ್ಥಳದಲ್ಲೇ ಜೀವಬಿಟ್ಟಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆದಿದ್ದೇನೆ. ಕಾನೂನು ಪ್ರಕಾರ ಏನಿದೆ ಅದೇ ರೀತಿಯಲ್ಲಿ ಕ್ರಮ ಕೈಗೊಳ್ಳಲು ಹೇಳಿದ್ದೇನೆ. ಈಗಾಗಲೇ ನಮ್ಮ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಮ್ಮ ಸಹೋದರ ಇರುವ ಕಾರು ಅಪಘಾತ ಆಗಿಲ್ಲ. ನಮ್ದು ಮುರುಳಿದು ಒಂದೇ ನಂಬರಿನ ಕಾರು ಆಗಿದೆ. ವೇಣುಗೋಪಾಲ ಎನ್ನುವ ವ್ಯಕ್ತಿಯ ಕಾರು ಆ್ಯಕ್ಸಿಡೆಂಟ್ ಮಾಡಿದ್ದಾನೆ. ನಮ್ಮ ಕಾರುಗಳು ಹೋಗುವ ವೇಳೆಯಲ್ಲಿ ಬೈಕ್​ನಲ್ಲಿ ಅಡ್ಡ ಬಂದಿದ್ದಾನೆ. ಸುಮಾರು 75 ವರ್ಷದ ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನಿಟ್ಟೆ: ದೇವ್ ರೆವ್ ಜಿಆರ್.ಎಐ.ಸಿಇ ಮಹಿಳಾ ಹ್ಯಾಕಥಾನ್ ನಲ್ಲಿ ನಿಟ್ಟೆ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

0

 

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಿಟ್ಟೆ ಕ್ಯಾಂಪಸ್ನಲ್ಲಿ ನಡೆದ ದೇವ್ ರೆವ್ ಕಂಪೆನಿಯ ನೇತೃತ್ವದ ಜಿಆರ್.ಎಐ.ಸಿಇ ಮಹಿಳಾ ಹ್ಯಾಕಥಾನ್ನಲ್ಲಿ ಉನ್ನತ ಗೌರವಗಳನ್ನು ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈ ಕಾರ್ಯಕ್ರಮದಲ್ಲಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಭವ್ಯಾ ನಾಯಕ್, ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಚೈತ್ರಾ ಎಸ್. ನಾಯಕ್ ಮತ್ತು ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್ ವಿಭಾಗದ ರಶ್ಮಿ ಎನ್. ರವರ ತಂಡ ಪ್ರಥಮ ಸ್ಥಾನ ಪಡೆದರೆ, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಅಮೂಲ್ಯ ಜಿ.ಆರ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ದೀತ್ಯ ಎಸ್ ಸಾಲಿಯಾನ್, ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಶ್ರಾವ್ಯ ಎ ಪ್ರಭುರವರ ತಂಡ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.

ವಿಜೇತರಿಗೆ ರೂ.60,000/-, ಪ್ರಥಮ ರನ್ನರ್ ಅಪ್ ಗೆ ರೂ.30,000/-, ಮತ್ತು ಎರಡನೇ ರನ್ನರ್ ಅಪ್ ಗೆ ರೂ.15,000/- ನಗದು ಬಹುಮಾನ ಮತ್ತು ಟ್ರೋಫಿಗಳನ್ನು ನೀಡಲಾಯಿತು.

ನಿಟ್ಟೆ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಬೋಧಕರು ಮತ್ತು ವಿದ್ಯಾರ್ಥಿಗಳು ವಿಜೇತರನ್ನು ಅವರ ಗಮನಾರ್ಹ ಸಾಧನೆಗಾಗಿ ಅಭಿನಂದಿಸಿದರು.

ಕಾರ್ಕಳ: ಬಿಜೆಪಿಯಿಂದ ಕೃಷ್ಣರಾಜ್ ಹೆಗ್ಡೆಗೆ ಶೃದ್ಧಾಂಜಲಿ

0

 

ಸಮಾಜಸೇವಕರಾದ ಶ್ರೀ ಕೃಷ್ಣರಾಜ ಹೆಗ್ಡೆ (ತಮ್ಮಣ್ಣ) ಅವರ ಅಗಲಿಕೆ ಬಿಜೆಪಿ, ಹಿಂದೂ ಸಂಘಟನೆ ಹಾಗೂ ಸಮಗ್ರ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.

ಅವರ ಸ್ಮರಣಾರ್ಥ ಇಂದು ಶಾಸಕರ ನಿವಾಸದಲ್ಲಿ ಶೋಕ ಸಭೆ ಆಯೋಜಿಸಲಾಗಿದ್ದು, ವಿವಿಧ ನಾಯಕರು ಹಾಗೂ ಸಂಘಟನಾ ಪ್ರತಿನಿಧಿಗಳು ಭಾಗವಹಿಸಿ, ಅವರ ಸೇವೆಯನ್ನು ಸ್ಮರಿಸಿದರು.

ಶ್ರೀ ತಮ್ಮಣ್ಣ ಅವರು ಸದಾ ಸಮಾಜದ ಹಿತವನ್ನು ಕಾಳಜಿಯಿಂದ ನೋಡಿಕೊಂಡು, ನಿಸ್ವಾರ್ಥ ಸೇವಾ ಮನೋಭಾವದ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದರು. ಅವರ ಬದ್ಧತೆ, ತ್ಯಾಗ ಮತ್ತು ಜನಪರ ಚಿಂತನೆಗಳು ನಮ್ಮೆಲ್ಲರಿಗೂ ದಾರಿದೀಪವಾಗಿವೆ.

ಅವರ ನೆನಪು ಸದಾಕಾಲ ನಮ್ಮೊಂದಿಗೇ ಇರುತ್ತದೆ. ನಾವು ಅವರನ್ನು ಎಂದೆಂದಿಗೂ ಸ್ಮರಿಸುತ್ತೇವೆ. ಎಂದು ಕಾರ್ಕಳ ಬಿಜೆಪಿ ತಮ್ಮ ಸಂತಾಪ ಸೂಚಿಸಿದೆ.

ಕ್ರೈಸ್ಟ್ ಕಿಂಗ್ : ಶಗುನ್ ಎಸ್. ವರ್ಮ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ರಾಷ್ಟ್ರೀಯ ವಾಲಿಬಾಲ್ ತಂಡದ ಅರ್ಹತಾ ಶಿಬಿರಕ್ಕೆ ಆಯ್ಕೆ

0

 

ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಶಗುನ್ ಎಸ್. ವರ್ಮ ಹೆಗ್ಡೆ ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಶನ್‌ನವರು ನಡೆಸುವ 15ರ ವಯೋಮಿತಿಯ ಬಾಲಕಿಯರ ವಿಭಾಗದ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾಳೆ.

ಕರ್ನಾಟಕದ ಎಲ್ಲಾ ಜಿಲ್ಲೆಗಳ ಆಟಗಾರರು ಭಾಗವಹಿಸಿದ್ದು, ಅದರಲ್ಲಿ ಎಂಟು ಆಟಗಾರರು ಆಯ್ಕೆಯಾಗಿದ್ದರು. ಇದರಲ್ಲಿ ಉಡುಪಿ ಜಿಲ್ಲೆಯಿಂದ ಏಕೈಕ ಆಟಗಾರಳಾಗಿ ಶಗುನ್ ಆಯ್ಕೆಯಾಗಿದ್ದಾಳೆ. ಭಾರತವನ್ನು ಪ್ರತಿನಿಧಿಸುವ ರಾಷ್ಟೀಯ ತಂಡದ ಆಯ್ಕೆ ಪ್ರಕ್ರಿಯೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿದ್ದು ಇಲ್ಲಿ ಆಯ್ಕೆಯಾದ ತಂಡವು ಮುಂದಿನ ಅಂತರಾಷ್ಟ್ರೀಯ ಪಂದ್ಯವನ್ನು ಚೀನಾದ ಶಾಂಗ್ಲೋದಲ್ಲಿ ಆಡಲಿದೆ. ಈಕೆ ಕಲ್ಲೊಟ್ಟೆ ನಿವಾಸಿ ಸಂದೇಶ್ ವರ್ಮಾ ಹಾಗೂ ಶ್ರೀಮತಿ ಶ್ರುತಿರಾಜ್ ದಂಪತಿಗಳ ಪುತ್ರಿಯಾಗಿದ್ದಾಳೆ.

 

ಚಿತ್ರನಟ ದಿನೇಶ್ ಮಂಗಳೂರು ನಿಧನ

0

ರಂಗಭೂಮಿ ಕಲಾವಿದ, ಚಿತ್ರ ನಟ, ಕಲಾ ನಿರ್ದೆಶಕರಾಗಿದ್ದ ದಿನೇಶ್ ಮಂಗಳೂರು ನಿಧನರಾಗಿದ್ದಾರೆ.

ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ನಟರಾಗಿದ್ದ ದಿನೇಶ್ ಮಂಗಳೂರು ಇಂದು ಬೆಳಗಿನ ಜಾವ ಕುಂದಾಪುರದಲ್ಲಿ ಮೃತಪಟ್ಟಿದ್ದಾರೆ.

ಒಂದು ವರ್ಷದಿಂದ ಅನಾರೋಗ್ಯದಿಂದ ಇವರು ಬಳಲುತ್ತಿದ್ದರು. ಇಂದು ಸಂಜೆ ಪಾರ್ಥಿವ ಶರೀರ ಬೆಂಗಳೂರಿಗೆ ಹೋಗಲಿದ್ದು, ನಾಳೆ ಸುಮನಹಳ್ಳಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ರಿಕ್ಕಿ, ಉಳಿದವರು ಕಂಡಂತೆ, ಕೆಜಿಎಫ್ ಚಾಪ್ಟರ್‌ 1, ಕೆಜಿಎಫ್‌ ಚಾಪ್ಟರ್‌ 2, 777 ಚಾರ್ಲಿ ಸೇರಿದಂತೆ ಹಲವು ಚಿತ್ರಗಳಲ್ಲಿ ದಿನೇಶ್ ಮಂಗಳೂರು ಅಭಿನಯಿಸಿದ್ದರು.

ಕಾರ್ಕಳ: ಲಯನ್ಸ್ ಜಿಲ್ಲಾ ಪ್ರಾಂತೀಯ 3 ರ ತರಬೇತಿ ಕಾರ್ಯಗಾರ

0

 

ಲಯನ್ಸ್ ಜಿಲ್ಲಾ ಪ್ರಾಂತೀಯ 3 ರ ತರಬೇತಿ ಕಾರ್ಯಗಾರವನ್ನು ಲಯನ್ಸ್ ಭವನ ಮೂಡುಬೆಳ್ಳೆ ಇಲ್ಲಿ ಜರಗಿದ್ದು, ಈ ಕಾರ್ಯಾಗಾರವನ್ನು ಲಯನ್ಸ್ ಜಿಲ್ಲೆ 317 ಸಿ ಇದರ ಜಿಲ್ಲಾ ಗವರ್ನರ್ ಲಯನ್ ಸ್ವಪ್ನ ಸುರೇಶ್ ಅವರು ಉದ್ಘಾಟಿಸಿದರು.

ಲಯನ್ಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುವ ಹೊಸ ಹೊಸ ಬದಲಾವಣೆಗಳನ್ನು ಇಂತಹ ಪುನಶ್ಚೇತನ ಶಿಬಿರದ ಮೂಲಕ ಮನದಟ್ಟು ಮಾಡಿಕೊಂಡು ಲಯನ್ ಸಂಸ್ಥೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಲು ಸುವರ್ಣ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ತನ್ನ ಉದ್ಘಾಟನಾ ಮಾತುಗಳನ್ನಾಡಿದರು.

ಪ್ರಥಮ ಜಿಲ್ಲಾ ಉಪಗವರ್ನರ್ ಲಯನ್ ರಾಜೀವ್ ಕೋಟ್ಯಾನ್, ಜಿಲ್ಲಾ ಸಂಯೋಜಕ ಲಯನ್ ರಂಜನ್ ಕಲ್ಕೂರ ತನ್ನ ಅನುಭವದ ಮಾತುಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂತಿಯ ಅಧ್ಯಕ್ಷ ಲಯನ್ ಗಿರೀಶ್ ರಾವ್ ವಹಿಸಿದ್ದರು. ಮುಖ್ಯ ತರಬೇತುದರಾಗಿ ಲಯನ್ ಸುರೇಶ್ ಪ್ರಭು ಹಾಗೂ ಜೆಸಿ ಶ್ರೀಧರ್ ಭಾಗವಹಿಸಿದರು.

ವಲಯ ಅಧ್ಯಕ್ಷರಾದ ಲಯನ್ ಗೀತಾ ರಾವ್, ಲಯನ್ ರೋಷನ್ ಡಿಸಿಲ್ವಾ, ಲಯನ್ ವೇಲೇರಿಯನ್ ಲೋಬೊ ಉಪಸ್ಥಿತರಿದ್ದರು. ಪ್ರಾಂತ್ಯ ಕಾರ್ಯದರ್ಶಿ ವಿಜಯ ಧೀರಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.