ಬೈಲೂರಿನ ಪರಶುರಾಮ ಥೀಮ್ ಪಾರ್ಕ್ನಲ್ಲಿ ನಕಲಿ ಪರಶುರಾಮ ಪ್ರತಿಮೆ ನಿರ್ಮಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಲ್ಪಿ ಕೃಷ್ಣಾನಾಯ್ಕ್ ಅವರನ್ನು ಪುದುಚೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣನಾಯ್ಕ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನವೆಂಬರ್ 7ರ ಗುರುವಾರದಂದು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.ಇದರ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಮಾಹೆಯಲ್ಲಿ ತಲೆಮರೆಸಿಕೊಂಡಿದ್ದ ಕೃಷ್ಣಾ ನಾಯ್ಕ್ ನನ್ನು ಕಾರ್ಕಳ ಟೌನ್ ಪೊಲೀಸ್ ಠಾಣೆಯ ಪಿಎಸ್ ಐ ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ.
ಕ್ರಿಶ್ ಆರ್ಟ್ ವರ್ಲ್ಡ್ ಎಂಬ ಕಂಪನಿಯ ಮೂಲಕ ಕೃಷ್ಣಾನಾಯ್ಕ್ ಅವರು ಉಡುಪಿ ನಿರ್ಮಿತಿ ಕೇಂದ್ರದಿಂದ ಥೀಮ್ ಪಾರ್ಕ್ನಲ್ಲಿ ಪರಶುರಾಮನ ಕಂಚಿನ ಪ್ರತಿಮೆ ಸ್ಥಾಪಿಸಲು 1.25 ಕೋಟಿ ರೂ.ಗಳನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಬದಲಿಗೆ ನಕಲಿ ಪ್ರತಿಮೆ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನಲ್ಲೂರಿನ ಕೃಷ್ಣ ಶೆಟ್ಟಿ ಅವರು ಜೂನ್ನಲ್ಲಿ ದೂರು ನೀಡಿದ್ದು, ಕಾರ್ಕಳ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಮಂಗಳೂರು ಕುಂದಾಪುರದಲ್ಲಿ ಶಾಖೆಯನ್ನು ಹೊಂದಿ ಚಿತಪರಿಚಿತರಾಗಿರುವ ತನ್ನ ಅಸಾಧಾರಣ ಗ್ರಾಹಕ ಸೇವೆ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಖ್ಯಾತಿಗೆ ಹೆಸರುವಾಸಿಯಾಗಿರುವ ಬ್ರಾಂಡ್ ‘ಗಿರಿಜಾ ಸರ್ಜಿಕಲ್ಸ್’ ಮಣಿಪಾಲದಲ್ಲಿ ತನ್ನ ವಿಶೇಷ ಶೋರೂಮ್ ಅನ್ನು ತೆರೆಯುವ ಮೂಲಕ ಮತ್ತೊಂದು ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ.ನವೆಂಬರ್ 10 ರ ಭಾನುವಾರದಂದು ಮಣಿಪಾಲದ ವಾಣಿಜ್ಯ ಸಂಕೀರ್ಣದ ನೆಲ ಮಹಡಿಯಲ್ಲಿ ಕೆಎಂಸಿ ಆಸ್ಪತ್ರೆಯ ಎದುರುಗಡೆ ಹೊಸ ಶಾಖೆ ಉದ್ಘಾಟನೆಗೊಳ್ಳಲಿದೆ.
‘ಗಿರಿಜಾ ಸರ್ಜಿಕಲ್ಸ್’ ಶಸ್ತ್ರಚಿಕಿತ್ಸಾ ರಂಗದಲ್ಲಿ ತೊಡಗಿಸಿಕೊಂಡಿರುವ ಕರಾವಳಿ ಜಿಲ್ಲೆಗಳಲ್ಲಿ ಪ್ರಸಿದ್ಧ ಬ್ರಾಂಡ್ ಆಗಿದೆ. ಜನವರಿ 2020 ರಲ್ಲಿ ಸ್ಥಾಪನೆಯಾದಾಗಿನಿಂದ, ಗಿರಿಜಾ ಹೆಲ್ತ್ಕೇರ್ ಮತ್ತು ಸರ್ಜಿಕಲ್ಸ್ ಉತ್ತಮ ಗುಣಮಟ್ಟದ ಆರೋಗ್ಯ ಉತ್ಪನ್ನಗಳು ಮತ್ತು ಸೇವೆಗಳಿಗಾಗಿ ಪ್ರಸಿದ್ಧವಾಗಿದೆ.ಹೊಸ ವಿಶಾಲವಾದ ಶೋರೂಮ್ ರಾಜ್ಯದ ಪ್ರಮುಖ ಹೆಲ್ತ್ಕೇರ್ ನಗರಗಳಲ್ಲಿ ಒಂದಾದ ಮಣಿಪಾಲದಲ್ಲಿ ಶುಭಾರಂಭಗೊಳ್ಳುತ್ತಿದ್ದು,ಇದು ಅತ್ಯಂತ ಸ್ಪರ್ಧಾತ್ಮಕ ಬೆಲೆಗೆ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಟಿ ಅಶೋಕ್ ಪೈ, ಅಧ್ಯಕ್ಷ ಡಾ ಟಿಎಂಎ ಪೈ ಫೌಂಡೇಶನ್ ಮಣಿಪಾಲ ನೂತನ ಶೋರೂಂ ಉದ್ಘಾಟಿಸಲಿದ್ದಾರೆ. ಪುರುಷೋತ್ತಮ ಶೆಟ್ಟಿ, ಉಜ್ವಲ್ ಡೆವಲಪರ್ಸ್ ಗುರ್ಮೆ ಸುರೇಶ್ ಶೆಟ್ಟಿ, ಶಾಸಕ ಕಾಪು ಮುನಿಯಾಲ್ ಉದಯಕುಮಾರ್ ಶೆಟ್ಟಿ, ಅಧ್ಯಕ್ಷ ಮುನಿಯಾಲ್ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಹೆಬ್ರಿ ಪ್ರಭಾಕರ ಪೂಜಾರಿ, ಸಿಎಂಸಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ಉಡುಪಿ ಸಿಎಂಸಿ ಮಾಜಿ ಅಧ್ಯಕ್ಷ ಮಹೇಶ್ ಠಾಕೂರ್, ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಉಪಾಧ್ಯಕ್ಷೆ ಅಮ್ಮುನ್ ವಿಜಯಲಕ್ಷ್ಮಿ, ಸಿ.ಎಂ.ಸಿ. ರಮೇಶ್ ನಾಯಕ್, ಉಡುಪಿ ಜಿಲ್ಲಾ ಕೆಮಿಸ್ಟ್ಸ್ ಮತ್ತು ಡ್ರಗ್ಜಿಸ್ಟ್ ಅಸೋಸಿಯೇಶನ್ ಗೌರವ ಅತಿಥಿಗಳಾಗಿ ಭಾಗವಹಿಸುವರು.
ಈ ಹೊಸ ಶೋರೂಮ್ ಸಂಪೂರ್ಣವಾಗಿ ಅತ್ಯಾಧುನಿಕ ಆರೋಗ್ಯ ಮತ್ತು ಶಸ್ತ್ರಚಿಕಿತ್ಸಾ ಸಾಧನಗಳೊಂದಿಗೆ ಸುಸಜ್ಜಿತವಾಗಿದ್ದು, ಥರ್ಮಾಮೀಟರ್ಗಳು, ಪಲ್ಸ್ ಆಕ್ಸಿಮೀಟರ್ಗಳು, ಮೂಳೆ ಪಾದರಕ್ಷೆಗಳು, ಮೊಣಕಾಲು ಬೆಂಬಲಗಳು, ವಾಕಿಂಗ್ ಸ್ಟಿಕ್ಗಳು, ಗಾಲಿಕುರ್ಚಿಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಮತ್ತು ಅದರ ಸರ್ವಿಸ್ ಒದಗಿಸಲಿದೆ.
ಶೋರೂಮ್ ಪ್ರಸಿದ್ಧ ಹೆಲ್ತ್ಕೇರ್ ಬ್ರ್ಯಾಂಡ್ಗಳಾದ ರಾಮ್ಸನ್, ಡೈನಾಮಿಕ್, ಡಾ ಮಾರ್ಪೆನ್ ಮತ್ತು ಸೆನಿಯ ಉತ್ಪನ್ನಗಳನ್ನು ಮಾರಾಟ ಮತ್ತು ಬಾಡಿಗೆಗೆ ವ್ಯಾಪಕ ಆಯ್ಕೆಯೊಂದಿಗೆ ನೀಡುತ್ತದೆ. ಆಸ್ಪತ್ರೆಯ ಬೆಡ್, ವೀಲ್ ಚೇರ್, ಆಕ್ಸಿಜನ್ ಕಾನ್ಸೆಂಟ್ರೇಟರ್, ಸಿಪಿಎಪಿ/ಬಿಪಿಎಪಿ ಯಂತ್ರ, ಸಕ್ಷನ್ ಮೆಷಿನ್, ಏರ್ ಬೆಡ್, ರೋಗಿಯ ಟ್ರಾಲಿ, ರೋಗಿಯನ್ನು ಬದಲಾಯಿಸುವ ಕುರ್ಚಿ, ವೆಂಟಿಲೇಟರ್ಗಳು, ಮಾನಿಟರ್ಗಳು, ಆಮ್ಲಜನಕ ಸಿಲಿಂಡರ್ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳಂತಹ ಅಗತ್ಯ ವೈದ್ಯಕೀಯ ಉಪಕರಣಗಳು ದೊರೆಯಲಿದೆ.
ರವೀಂದ್ರ ಕೆ ಶೆಟ್ಟಿ, ಸುರೇಖಾ ಶೆಟ್ಟಿ, ಹರೀಶ್ ಕುಮಾರ್, ಪಾಲುದಾರರಾದ ಗಿರಿಜಾ ಗ್ರೂಪ್ಸ್ ಆಫ್ ಕನ್ಸರ್ನ್ಸ್, ಮಣಿಪಾಲದಲ್ಲಿ ಈ ಹೊಸ ವಿಶೇಷ ಶೋರೂಮ್ ಉದ್ಘಾಟನೆಗೆ ಸಾರ್ವಜನಿಕರನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
ಸಂಪರ್ಕ:
ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್
ಉಡುಪಿ:
ನೆಲಮಹಡಿ, ಶ್ರೀ ನಿತ್ಯಾನಂದ ಕಟ್ಟಡ,
ಮಿತ್ರ ಆಸ್ಪತ್ರೆ ಹತ್ತಿರ,
ಉಡುಪಿ – 576101
ದೂರವಾಣಿ: +91 72047 34039, +91 99014 24485
ಕುಂದಾಪುರ:
ನೆಲ ಮಹಡಿ, ಅಥರ್ವ ಕಾಂಪ್ಲೆಕ್ಸ್,
ಎದುರು. ಹೋಟೆಲ್ ಪಾರಿಜಾತ, ಕುಂದಾಪುರ – 576201
Ph: +91 83101 27685, +91 99720 44485
ಮಂಗಳೂರು:
ನೆಲ ಮಹಡಿ, ಸಿಟಿ ಪ್ಲಾಜಾ,
PVS ಮತ್ತು ಲಲಿತಾ ಜ್ಯುವೆಲರ್ಸ್ ಹತ್ತಿರ,
ಕೊಡೈಲ್ಬೈಲ್, ಮಂಗಳೂರು.
,7910382,791034485
ಮಂಗಳೂರು 2:
ನೆಲ ಮಹಡಿ, ಸನು ಪ್ಯಾಲೇಸ್
ಒಪಿಪಿ ಪಿವಿಎಸ್ ಕಟ್ಟಡ, ಪಿವಿಎಸ್ ಸರ್ಕಲ್
ಮಂಗಳೂರು – 575 003
PH: +91 8277730127, +91 9972044485
ಮಣಿಪಾಲ್: ಹೊಸ ಶೋ ರೂಂ
ನೆಲ ಮಹಡಿ, ಮಣಿಪಾಲ್ ವಾಣಿಜ್ಯ ಸಂಕೀರ್ಣ,
ಒಪಿಪಿ ಕೆಎಂಸಿ ಆಸ್ಪತ್ರೆ ಮಣಿಪಾಲ.
9901424485
ಜೋಡುರಸ್ತೆ:A-1 ಸೂಪರ್ ಮಾರ್ಟ್ ಬಿಗ್ ವಿನ್ ಲಕ್ಕಿ ಡ್ರಾ ಫಲಿತಾಂಶ
ಜೋಡುರಸ್ತೆಯ A-1ಸೂಪರ್ ಮಾರ್ಟ್ ನಲ್ಲಿ ದಸರಾ ಮತ್ತು ದೀಪಾವಳಿಯ ಆಫ಼ರ್ ಪ್ರಯುಕ್ತ ಗ್ರಾಹಕರಿಗೆ ನೀಡಿದ್ದ ಬಿಗ್ ವಿನ್ ಡ್ರಾ ಮಾಡಲಾಯಿತು.
ಜೋಡುರಸ್ತೆ ಸ್ವರ್ಣ ಪ್ರಕಾಶ್ ಜ್ಯೂವೆಲ್ಲರ್ಸ್ ನ ಗೌರವ್ ಆಚಾರ್ಯ,ನಂದಿನಿ ಮಿಲ್ಕ್ ಪಾರ್ಲರ್ ನ ರಾಜೇಂದ್ರ ಡ್ರಾ ನಡೆಸಿಕೊಟ್ಟರು.
ಪ್ರಥಮ ಬಹುಮಾನವನ್ನು(ವಾಷಿಂಗ್ ಮಷೀನ್)ಕೂಪನ್ ನಂಬರ್ 368 ಇಶಾನಿ ಪೂಜಾರಿ
ದ್ವಿತೀಯ ಬಹುಮಾನ (ಮಿಕ್ಸಿ)ಕೂಪನ್ ನಂಬರ್ 297 ಪ್ರಗತಿ ಹಾಗೂ ತೃತೀಯ ಬಹುಮಾನವನ್ನು (ಸ್ಪಿನ್ ಮಾಪ್) ಕೂಪನ್ ನಂಬರ್ 607ತಬಸ್ಸುಮ್ ಗೆದ್ದುಕೊಂಡಿದ್ದಾರೆ.
ವಿಜೇತರಾದವರಿಗೆ A1ಸೂಪರ್ ಮಾರ್ಟ್ ನ ಮಾಲಕರು ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ ಎಲ್ಲ ಗ್ರಾಹಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಸಿಸ್ಟರ್ ಡೋನಾಲ್ಡ ಪಾಯಸ್ ನಿಧನ
ಕಾರ್ಕಳ : ಜೀವನ್ ವೆಲ್ಫೇರ್ ಟ್ರಸ್ಟ್ ಕಾರ್ಕಳ ಇದರ ಸಂಸ್ಥಾಪಕಿ , ಕಾರ್ಕಳ ಅರುಣೋದಯ ವಿಶೇಷ ಶಾಲೆಯ ಮುಖ್ಯಸ್ಥೆ ,ಸುಮಾರು 35 ವರ್ಷಗಳಿಂದ ವಿಶೇಷ ಮಕ್ಕಳ ನಿಸ್ವಾರ್ಥ ಸೇವೆ ಸಲ್ಲಿಸಿದ ಜಿಲ್ಲಾ ರಾಜ್ಯೋತ್ಸವ ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಅರುಣೋದಯ ಸಿಸ್ಟರ್ ಎಂದೇ ಖ್ಯಾತರಾಗಿದ್ದ ಡೊನಾಲ್ದಾ ಪಾಯಸ್ (81) ಅಲ್ಪಕಾಲದ ಅಸೌಖ್ಯದಿಂದ ಮರಣ ಹೊಂದಿದರು.ಸಿಸ್ಟರ್ ಡೊನಾಲ್ಟಾ ಪಾಯಸ್ ರವರು ಬಂಟ್ವಾಳ ತಾಲೂಕು ಕರಿಂಗಾಣ ಗ್ರಾಮದ ಸೆಬಾಸ್ಟಿನ್ ಪಾಯ್ಸ್ ಮತ್ತು ಪೌಲಿನ ಫೆರ್ನಾಂಡೀಸ್ ರವರ ಪುತ್ರಿ .
ಇವರು ಕರಿಂಗಾಣದ ಸೈಂಟ್ ಆಂಟನಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು,ಕಾರ್ಮೆಲ್ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣವನ್ನು, ಸೈಂಟ್ ಆಗ್ನೆಸ್ ಮಂಗಳೂರಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ ಬಿ. ಎಡ್ ಶಿಕ್ಷಣವನ್ನು ಸೈಂಟ್ ಆನ್ಸ್ನಲ್ಲಿ ಮುಗಿಸಿದರು.
ವಿಧ್ಯಾಭ್ಯಾಸ ಮುಗಿಸಿದ ನಂತರ ಬೆಥನಿ ಸಂಸ್ಥೆಯಲ್ಲಿ ನೋವಿಶೆಡ್ ತರಬೇತಿಯನ್ನು ಪಡೆದು 1971 ರಲ್ಲಿ ಕನ್ಯಾಶ್ರೀ ಪಟ್ಟವನ್ನು ಸ್ವೀಕರಿಸಿದರು. ವರ ಹೆಸರು ಮಾರ್ಸೆಲಿನ್ ಪಾಯ್ಸ್ ನಿಂದ ಸಿಸ್ಟರ್ ಡೊನಾಲ್ಟಾ ಪಾಯ್ಸ್ ಎಂದು ಮರುನಾಮಕರಣವಾಯಿತು.ನಂತರ ಇವರು ಸಿಸ್ಟರ್ ಆಗಿ 1968 ರಲ್ಲಿ ಪ್ರೌಢಶಾಲೆ ಶಿಕ್ಷಕಿಯಾಗಿ ಸರ್ಕಾರದಿಂದ ನೇಮಕಗೊಂಡರು.ನಂತರ ರೋಸ ಮಿಸ್ತಿಕಾ ಹೈಸ್ಕೂಲ್, ಲೊಯೊಲಾ ಹೈಸ್ಕೂಲ್, ಮೈಸೂರಿನ ಕೆ. ಆರ್ ನಗರದ ಪ್ರೌಢಶಾಲೆಯಲ್ಲಿ ಸಹಶಿಕ್ಷಕಿಯಾಗಿ, ಅಜೆಕಾರು ಜ್ಯೋತಿ ಹೈಸ್ಕೂಲ್ನಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿದರು.
ಶಿಕ್ಷಕ ಸೇವೆ ಸಲ್ಲಿಸುತ್ತಿರುವಾಗ ಇವರಿಗೆ ದೇವರ ಸಂದೇಶವೊಂದು ಕೇಳಿ ಬಂತು. ಅದೇ ವಿಕಲಚೇತನ ಮಕ್ಕಳ ಸೇವೆ. ಸಮಾಜದಲ್ಲಿರುವ ವಿಕಲಚೇತನ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣವನ್ನು ನೀಡಿ ಅವರನ್ನು ಸ್ವಾವಲಂಬಿಗಳಾಗಿ ಮಾಡಬೇಕೆಂಬ ಅನುಕಂಪ ಮೂಡಿತು. ಅದರಂತೆಯೇ ಅಜೆಕಾರು ಜ್ಯೋತಿ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಕಾರ್ಕಳ ವ್ಯಾಪ್ತಿಯಲ್ಲಿ ಸರ್ವೆ ಮಾಡಿ 2000ನೇ ಸಾಲಿನಲ್ಲಿ ಜೀವನ್ ವೆಲ್ ಫೇರ್ ಟ್ರಸ್ಟ್ (ರಿ) ಎಂಬ ಎನ್.ಜಿ.ಒ ನ್ನು ಸ್ಥಾಪಿಸಿ ಕಾರ್ಕಳ ಪೇಟೆಯ ಸಪ್ತಗಿರಿ ಕಾಂಪ್ಲೆಕ್ಸ್ನ ಬಾಡಿಗೆ ಮನೆಯಲ್ಲಿ 4 ಬುದ್ದಿ ಮಾಂದ್ಯ ಮಕ್ಕಳನ್ನು ಒಟ್ಟುಗೂಡಿಸಿ ಈ ಬುದ್ದಿಮಾಂದ್ಯ ಮಕ್ಕಳ ತರಬೇತಿಗಾಗಿ ಅರುಣೋದಯ ವಿಶೇಷ ಶಾಲೆಯನ್ನು ಆರಂಭಿಸಿದರು. ದಿನೇ ದಿನೇ ಹೋದಂತೆ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಬಂತು. ನಂತರ ಅಲ್ಲಿಂದ ಮಗ್ದಾಲಿನಾದಲ್ಲಿ ವರ್ಗಾವಣೆಗೊಂಡು ಅಲ್ಲಿ 3 ವರ್ಷ ಶಾಲೆಯನ್ನು ನಡೆಸಿದರು. ಮಗ್ಗಲಿನಾದಲ್ಲಿ ಶಾಲೆ ನಡೆಸುತ್ತಿರುವಾಗಲೇ ಮಾಳದಲ್ಲಿ ಆರುಣೋದಯದ ವಿಶೇಷ ಶಾಲೆಯ ಶಾಖೆಯನ್ನು ತೆರೆದರು. ಆದರೆ ಮಗ್ಗಲಿನಾದಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಬಂದುದರಿಂದ ಮಾಳದಲ್ಲಿರುವ ಶಾಖೆಯನ್ನು ಮುಂದುವರೆಸಲು ಅಸಾಧ್ಯವಾಯಿತು. ಅದೇ ಸಾಲಿನಲ್ಲಿ ಅರುಣೋದಯ ವಿಶೇಷ ಶಾಲೆಗೆ ಸ್ವತಹ ಕಟ್ಟಡವನ್ನು ಮಾಜಿ ಶಾಸಕ ದಿ. ಗೋಪಾಲ್ ಭಂಡಾರಿಯವರ ಶಿಫಾರಸಿನ ಮೇರೆಗೆ
ಅವರ ಇಚ್ಚೆಯಂತೆ ಅಂದಿನ ತಹಶೀಲ್ದಾರರು 0.86 ಸೆನ್ಸ್ ಜಾಗವನ್ನು ಮಂಜೂರು ಮಾಡಿದರು.ನಿರಂತರ ಶ್ರಮದಿಂದ ತನ್ನ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಧರು.2000 ನೇ ಸಾಲಿನಲ್ಲಿ ತನ್ನ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದರು. ಬೆಥನಿ ಸಂಸ್ಥೆಯನ್ನು ತ್ಯಜಿಸಿ ವೈಯುಕ್ತಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡರು.
ಈ ಪಿಂಚಣಿ ಹಣದಿಂದ ಮತ್ತು ಇತರೇ ಕೆಲವು ದಾನಿಗಳ ಸಹಾಯದಿಂದ ಈ ಜಾಗದಲ್ಲಿ ಕಟ್ಟಡವನ್ನು ಕಟ್ಟಲು ಆರಂಭಿಸಿದರು. 2004 ರಲ್ಲಿ ಅರುಣೋದಯ ವಿಶೇಷ ಶಾಲೆಯ ಈ ಕಟ್ಟಡವು ಪೂರ್ಣಗೊಂಡು ಮಗ್ದಾಲಿನಾದಿಂದ ವಿಕಲಚೇತನ ಮಕ್ಕಳು ಈ ಶಾಲೆಗೆ ವರ್ಗಾವಣೆಗೊಂಡರು.ಅಂದಿನಿಂದ ಇಲ್ಲಿಯವರೆಗೆ ಈ ಶಾಲೆಯನ್ನು ಸಿಸ್ಟರ್ ಡೊನಾಲ್ಟಾ ಪಾಯ್ಸ್ ರವರು ಶ್ರಮ ಮತ್ತು ಜವಾಬ್ದಾರಿಯಿಂದ ಉಚಿತವಾಗಿ ನಡೆಸಿಕೊಂಡು ಬಂದಿದ್ದು ತನ್ನ ಜೀವನವನ್ನೇ ವಿಶೇಷ ಮಕ್ಕಳ ಸೇವೆಗಾಗಿ ಮುಡಿಪಾಗಿಟ್ಟಿದ್ದರು.
ಇವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಸಚಿವ ಶಾಸಕ ವಿ ಸುನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ, ಕ್ರೈಸ್ಟ್ ಕಿಂಗ್ ಎಜುಕೇಷನ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಅವೆಲಿನ್ ಲೂಯಿಸ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯ್ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ್ ಜೈನ್, ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್, ರೋಟರಿ ಕ್ಲಬ್ ಅಧ್ಯಕ್ಷ ಇಕ್ಬಾಲ್ ಅಹಮದ್ ,ಕಾಂಗ್ರೆಸ್ ಮುಖಂಡ ಪುರಸಭೆ ಮಾಜಿ ಸದಸ್ಯ ವಿವೇಕಾನಂದ ಶೆಣೈ ಸಮಾಜ ಸೇವಕಿ ಕಾಂತಿ ಶೆಟ್ಟಿ , ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್, ಪುರಸಭಾ ಮಾಜಿ ಅಧ್ಯಕ್ಷರಾದ ಸುಬಿತ್ ಏನ್ ಆರ್, ರೆಹಮತ್ ಏನ್ ಶೇಖ್, ಪುರಸಭಾ ಸದಸ್ಯೆ ನಳಿನೀ ಆಚಾರ್ಯ ತೀವ್ರ ಸಂತಾಪ ಸೂಚಿಸಿದ್ದಾರೆ.
ಕಾರ್ಕಳ:ಮಗು ಆದ ಕಾರಣಕ್ಕೆ ಕೆಲಸಕ್ಕೆ ಹೋಗಲಿಕ್ಕೆ ಆಗುವುದಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ
ಶಿಕ್ಷಕಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಈದು ನಿವಾಸಿ ಪ್ರಸನ್ನಾ (29) ಆತ್ಮಹತ್ಯೆ ಮಾಡಿಕೊಂಡವರು.ಅವರು ಹೊಸ್ಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಥಿತಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು.
ಪ್ರಸನ್ನರವರು 2022ರಲ್ಲಿ ವಿವಾಹವಾಗಿದ್ದು,10 ತಿಂಗಳ ಹೆಣ್ಣು ಮಗು ಇತ್ತು.ಅವರು ತನ್ನ ತಾಯಿಗೆ ಕರೆಮಾಡಿ ನನಗೆ ಗಂಡನ ಮನೆಯವರು ಒಳ್ಳೆ ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ,ನನಗೆ ಇಷ್ಟು ಬೇಗ ಮಗು ಬೇಡವಾಗಿತ್ತು ನಾನು ಕೆಲಸಕ್ಕೆ ಹೋಗಲು ಆಗುವುದಿಲ್ಲ ಎಂದು ಹೇಳುತ್ತಿದ್ದರು. ಈ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದ ಪ್ರಸನ್ನಾ ರವರು ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ತಾನು ಕಷ್ಟಪಟ್ಟು ಓದಿದ್ದರೂ ತನಗೆ ಮಗು ಆದ ಕಾರಣ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದರು. ಇದೆ ಕಾರಣಕ್ಕೆ ನ.6 ರಂದು ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ:ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ಡಾ.ಸುರೇಶ್ ರೈ
ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯನ್ನು ಶ್ರೇಷ್ಟತೆಯ ಕಡೆಗೆ ಕೊಂಡೊಯ್ಯುವ ಶ್ರೇಷ್ಟ ಶಿಕ್ಷಣ ಸಂಸ್ಥೆಯನ್ನಾಗಿಸಲು ಪಣ
ಕಾರ್ಕಳ:ಕಾರ್ಕಳ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ನೂತನ ಪ್ರಾಚಾರ್ಯರಾಗಿ ಡಾ. ಸುರೇಶ್ ರೈ ಅಧಿಕಾರ ಸ್ವೀಕರಿಸಿದ್ದಾರೆ.ಡಾ.ಚಂದ್ರಾವತಿ ಅವರು ಡಾ.ಸುರೇಶ್ ರೈ ಅವರಿಗೆ ಅಧಿಕಾರವನ್ನು ಅಧಿಕೃತವಾಗಿಹಸ್ತಾಂತರಿಸಿದರು.
ಇತಿಹಾಸ ಪ್ರಾಧ್ಯಾಪಕರಾದ ಅವರು ಮೂವತ್ತೆರಡು ವರ್ಷಗಳಿಗಿಂತಲೂ ಹೆಚ್ಚಿನ ಶಿಕ್ಷಣ ಅನುಭವವನ್ನು ಹೊಂದಿದ್ದಾರೆ. ಖ್ಯಾತ ಶಿಕ್ಷಣ ತಜ್ಞರೂ ಆಗಿರುವ ಅವರು ಈ ಹಿಂದೆ ತೇಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾಗಿ ದಕ್ಷ ಆಡಳಿತಗಾರರಾಗಿ ಕರ್ತವ್ಯ ನಿರವಹಿಸಿದ್ದಾರೆ.
ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು “ಈ ಕಾಲೇಜನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೊಂದಿಗೆ ಹತ್ತಿರವಾಗಿ ಕೆಲಸ ಮಾಡುವ ನಿರೀಕ್ಷೆಯಲ್ಲಿ ಇದ್ದೇನೆ” ಎಂದು ಹೇಳಿದರು.
ಬೈಲೂರು: ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಇದರ ನೇತೃತ್ವದ ಬಾಲಕರ ವಾಲಿಬಾಲ್ ತಂಡ ನವಂಬರ್ 4 ಮತ್ತು 5 ರಂದು ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ನಡೆದ ರಾಜ್ಯಮಟ್ಟದ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಗೆಲವು ಸಾಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ತಂಡದ ಮಣಿಕಂಠರವರಿಗೆ ಬೆಸ್ಟ್ ಅಟ್ಯಾಕರ್ ಪ್ರಶಸ್ತಿ ಲಭಿಸಿದೆ. ಸಾಧಕ ತಂಡದ ಸದಸ್ಯರಿಗೆ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ತಂಡದ ಯಶಸ್ಸಿನ ಹಿಂದೆ ಹಗಲಿರುಳು ದುಡಿದ, ದೈಹಿಕ ಶಿಕ್ಷಣ ನಿರ್ದೇಶಕ ಫೆಡ್ರಿಕ್ ರೇಬೆಲ್ಲೂ ಹಾಗೂ ಕಾಲೇಜಿನ ಕ್ರೀಡಾ ಸಂಚಾಲಕ-ಉಪನ್ಯಾಸಕ ರತ್ನಾಕರ ಪೂಜಾರಿ, ತರಬೇತುದಾರರಾದ ಮಹಮ್ಮದ್ ಶೇಕ್ ಅಯಾನ್, ಮಹಮ್ಮದ್ ಶೇಕ್ ಅಮನ್ ರವರಿಗೆ ಸಂಸ್ಥೆ ಅಭಿವಂದನೆ ಸಲ್ಲಿಸಿದೆ.
ಕಾರ್ಕಳ:ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಲೆನಿಶಾ ಮೆಂಡೋನ್ಸಾ ಹಾಗೂ ಝುಬೇಧ ಜಿಲ್ಲಾಮಟ್ಟಕ್ಕೆ ಆಯ್ಕೆ
ಕಾರ್ಕಳ: ತಾಲೂಕು ಆಡಳಿತ, ತಾಲೂಕು ಪಂಚಾಯತ್ ಕಾರ್ಕಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಜಿಲ್ಲೆ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ ಮತ್ತು ಶಿಶುಪಾಲನಾ ಯೋಜನೆ ಕಾರ್ಕಳ ಇವರ ವತಿಯಿಂದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆ ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಾದ ಲೆನಿಶಾ ಮೆಂಡೋನ್ಸಾ ಹಾಗೂ ಝುಬೇಧ ಅವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ. ಸಂಸ್ಥೆಯ ವಿಜ್ಞಾನ ಶಿಕ್ಷಕರುಗಳಾದ ಶ್ರೀಮತಿ ಜೋಸ್ನಾ ಸ್ನೇಹಲತಾ, ಶ್ರೀಮತಿ ಯಶಸ್ವಿನಿ ಹಾಗೂ ವರ್ಗೀಸ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.
ಬಂಟರ ಸಂಘ ಗ್ರಾಮ ಸಮಿತಿ, ಈದು ಬಂಟರ ಸಂಘ ಈದು ಇದರ ನೂತನ ಅಧ್ಯಕ್ಷರಾಗಿ ಹೊಸ್ಮಾರು ಸೂರ್ಯ ಸುರೇಶ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.ಗೌರವ ಅಧ್ಯಕ್ಸಹ್ರಾಗಿ ನಡವೆ ಜಗನ್ನಾಥ್ ಶೆಟ್ಟಿ,ಉಪಾಧ್ಯಕ್ಷರಾಗಿ ಸುನೀತಾ ಶೆಟ್ಟಿ, ಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಶುಭಕರ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ದಿವಾಕರ್ ಶೆಟ್ಟಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮ ಎಲ್ಲಾ ಬಂಟ ಬಾಂಧವರು ಉಪಸ್ಥಿತರಿದ್ದರು