Home Blog Page 11

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಯುವ ಉದ್ಯಮಿ ಬೆಳ್ಮಣ್ಣು ಸುರೇಶ್ ದೇವಾಡಿಗ ಅವರಿಗೆ ಸನ್ಮಾನ

0

 

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ 26ನೇ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಅಬ್ಬನಡ್ಕ ಅವರ ಅಧ್ಯಕ್ಷತೆಯಲ್ಲಿ ಯುವ ಉದ್ಯಮಿ ಬೆಳ್ಮಣ್ಣು ಸುರೇಶ್ ದೇವಾಡಿಗ ಅವರಿಗೆ ಸಂಘದ ವತಿಯಿಂದ ಸನ್ಮಾನ ನಡೆಸಲಾಯಿತು.

ಸಮಾರಂಭದ ವೇದಿಕೆಯಲ್ಲಿ ಕೆದಿಂಜೆ ಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ತುಕಾರಾಮ ಶೆಟ್ಟಿ, ಹೆಬ್ರಿ ಅಮೃತ ಭಾರತಿ ವಿದ್ಯಾ ಸಂಸ್ಥೆಯ ಉಪನ್ಯಾಸಕರಾದ ವೀಣೇಶ್ ಅಮೀನ್ ಸಾಂತೂರು, ಸಂಜೀವ ಕೆದಿಂಜೆ, ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ಷರಾದ ವಿಠಲ ಮೂಲ್ಯ, ನಿಕಟ ಪೂರ್ವಾಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸುರೇಶ್ ಕಾಸರಬೈಲು, ಪ್ರಶಾಂತ್ ಪೂಜಾರಿ, ಉಪಾಧ್ಯಕ್ಷರಾಗಿ ರಘುವೀರ್ ಶೆಟ್ಟಿ, ಕಾರ್ಯದರ್ಶಿಯಾಗಿ ಸತೀಶ್ ಅಬ್ಬನಡ್ಕ ಉಪಸ್ಥಿತಿತರಿದ್ದರು. ಸಂಘದ ಸದಸ್ಯರಾದ ಪದ್ಮಶ್ರೀ ಪೂಜಾರಿ ಸನ್ಮಾನಿತರ ಪರಿಚಯ ವಾಚಿಸಿದರು.

ನಿಟ್ಟೆ: ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

0

 

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಸ್ಪಿಕ್-ಮೆಕೆ ಮಂಗಳೂರು ಚಾಪ್ಟರ್ ನ ಸಹಯೋಗದೊಂದಿಗೆ ಅ. ೧೩ ರಂದು ಮನಮೋಹಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿಲಾಯಿತು.

ಸಂಗೀತ ಕಾರ್ಯಕ್ರಮವನ್ನು ಪ್ರಸಿದ್ಧ ಗಾಯಕಿ ವಿದುಷಿ ಅಮೃತಾ ಮುರಳಿ ಅವರು ನಡೆಸಿಕೊಟ್ಟರು. ಅವರಿಗೆ ಮೃದಂಗದಲ್ಲಿ ವಿದ್ವಾನ್ ಬಿ. ಎಸ್. ಪ್ರಶಾಂತ್ ಮತ್ತು ವಯೊಲಿನ್ ನಲ್ಲಿ ವಿದುಷಿ ಅದಿತಿ ಕೃಷ್ಣಪ್ರಕಾಶ್ ಸಹಕರಿಸಿದರು.

ಸೊಸೈಟಿ ಫಾರ್ ದಿ ಪ್ರಮೋಷನ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಅಂಡ್ ಕಲ್ಚರ್ ಅಮಾಂಗ್ ಯೂತ್ (ಸ್ಪಿಕ್ ಮೆಕೆ) ಆಶ್ರಯದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಪ್ರಾಂಶುಪಾಲರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಸಂಗೀತಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿಟ್ಟೆ ತಾಂತ್ರಿಕ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಕೃಷ್ಣರಾಜ ಜೋಯಿಸ ಕಾರ್ಯಕ್ರಮ ಸಂಯೋಜಿಸಿದರು. ಅಂತಿಮ ವರ್ಷದ ರೊಬೊಟಿಕ್ಸ್ ಮತ್ತು ಎಐ ವಿದ್ಯಾರ್ಥಿನಿ ಫರೀಜಾ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಕಳ: ಸುಧೀಕ್ಷಾ ಪೈ ಅವರಿಗೆ ಪಿಎಚ್.ಡಿ. ಪದವಿ

0

 

ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಸುಧೀಕ್ಷಾ ಪೈ ಅವರು “A Psychoanalytical Study of Women Protagonists in Select Novels of Preeti Shenoy” ಎಂಬ ಶೀರ್ಷಿಕೆಯ ಪ್ರಬಂಧವನ್ನು ಯಶಸ್ವಿಯಾಗಿ ನಿರ್ವಹಿಸಿ ಡಾಕ್ಟರ್ ಆಫ್ ಫಿಲಾಸಫಿ (Ph.D.) ಪದವಿಯನ್ನು ಪಡೆದಿದ್ದಾರೆ. ಈ ಸಂಶೋಧನೆ ಲೂರ್ದುಸ್ವಾಮಿ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಂಡಿದೆ.

ಸುಧೀಕ್ಷಾ ಪೈ ಅವರು ಬಾಳೆಹೊನ್ನೂರು ನಿವಾಸಿಗಳಾದ ಸುರೇಂದ್ರ ಪೈ ಮತ್ತು ಸುಧಾ ಪೈ ಅವರ ಪುತ್ರಿ. ಅವರು ಕ್ರಿಯೇಟಿವ್ ಪಿಯು ಕಾಲೇಜು, ಕಾರ್ಕಳದ ಉಪನ್ಯಾಸಕರಾದ ಮಹೇಶ್ ಶೆಣೈ ಅವರ ಪತ್ನಿ ಹಾಗೂ ಪರಪ್ಪಾಡಿ ಸರಕಾರಿ ಪ್ರಾಥಮಿಕ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯರು ಪೂರ್ಣಿಮಾ ಶೆಣೈ ಅವರ ಸೊಸೆಯಾಗಿದ್ದಾರೆ.

ಪ್ರಸ್ತುತ ಅವರು ಕ್ರಿಯೇಟಿವ್ ಪಿಯು ಕಾಲೇಜು, ಕಾರ್ಕಳದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪೂರ್ವದಲ್ಲಿ ಎನ್‌ಎಂಎಎಮ್‌ಐಟಿ (NMAMIT), ನಿಟ್ಟೆ ಸಂಸ್ಥೆಯಲ್ಲಿ ಸಹ ಸೇವೆ ಸಲ್ಲಿಸಿದ್ದಾರೆ.

ಪ್ರೀತಿ ಶೆಣೈ ಅವರ ಕಾದಂಬರಿಗಳಲ್ಲಿನ ಮಹಿಳಾ ನಾಯಕಿಯರ ಮನೋವೈಜ್ಞಾನಿಕ ಅಂಶಗಳ ವಿಶ್ಲೇಷಣೆಯು ಸುಧೀಕ್ಷಾ ಪೈ ಅವರ ಸಂಶೋಧನೆಗೆ ಶೈಕ್ಷಣಿಕ ವಲಯದಿಂದ ವಿಶಿಷ್ಟ ಮೆಚ್ಚುಗೆ ವ್ಯಕ್ತವಾಗಿದೆ.

ನಿಟ್ಟೆಯಲ್ಲಿ ವಿದ್ಯಾರ್ಥಿಗಳಿಂದ ಸತತ ನಾಲ್ಕನೇ ವರ್ಷದ ಕೇಶದಾನ

0

 

 

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಡಿಪಾರ್ಟ್ಮೆಂಟ್ ಆಫ್ ಕೌನ್ಸೆಲಿಂಗ್, ಸ್ಟೂಡೆಂಟ್ ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗದ ಆಶ್ರಯದಲ್ಲಿರುವ ಔರಾ ಕ್ಲಬ್ ನ ವಿದ್ಯಾರ್ಥಿಗಳು ಮರ್ಸಿ ಬ್ಯೂಟಿ ಅಕಾಡೆಮಿ, ಮಂಗಳೂರು ಮತ್ತು ಫ್ಲೈಹೈ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ, ಸತತ ನಾಲ್ಕನೇ ವರ್ಷದ ಕೂದಲು ದಾನ ಅಭಿಯಾನವನ್ನು ಅ. 13 ರಂದು ಆಯೋಜಿಸಿದರು.

ದಾನ ಮಾಡಲಾದ ಕೂದಲನ್ನು ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರಿಗೆ ಉಚಿತ ವಿಗ್ ತಯಾರಿಸಲು ಉಪಯೋಗಿಸಲಾಗುವುದು. ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ರಜತ ವರ್ಷದ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರಿಗೆ ಸನ್ಮಾನ

0

 

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ 26ನೇ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಅಬ್ಬನಡ್ಕ ಅವರ ಅಧ್ಯಕ್ಷತೆಯಲ್ಲಿ ರಜತ ವರ್ಷದ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರಿಗೆ ಸಂಘದ ವತಿಯಿಂದ ಸನ್ಮಾನ ನಡೆಸಲಾಯಿತು.

ವೇದಿಕೆಯಲ್ಲಿ ಕಂಬಳ ಕ್ಷೇತ್ರದ ಸಾಧಕ ಬೋಳದಗುತ್ತು ಸಂತೋಷ್ ಶೆಟ್ಟಿ, ಉದ್ಯಮಿ ಮರಿಮಾರಗುತ್ತು ಅವಿನಾಶ್ ಮಲ್ಲಿ, ಉದ್ಯಮಿ ಹರೀಶ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ಷ ವಿಠಲ ಮೂಲ್ಯ, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸುರೇಶ್ ಕಾಸರಬೈಲು, ಉಪಾಧ್ಯಕ್ಷರಾಗಿ ರಘುವೀರ್ ಶೆಟ್ಟಿ, ಕಾರ್ಯದರ್ಶಿಯಾಗಿ ಸತೀಶ್ ಅಬ್ಬನಡ್ಕ, ಜೊತೆ ಕಾರ್ಯದರ್ಶಿ ಮಂಜುನಾಥ ಆಚಾರ್ಯ, ಕೋಶಾಧಿಕಾರಿಯಾಗಿ ಪ್ರದೀಪ್ ಸುವರ್ಣ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಸುಲೋಚನಾ ಕೋಟ್ಯಾನ್, ಅಬ್ಬನಡ್ಕ ಭಜನಾ ಮಂಡಳಿಯ ಅಧ್ಯಕ್ಷ ಕೀರ್ತನ್ ಪೂಜಾರಿ ಬೋಳ ಉಪಸ್ಥಿತರಿದ್ದರು.

ಸಿ.ಎ.ನಿತ್ಯಾನಂದ ಪ್ರಭುವರವರಿಗೆ ಮಾತೃವಿಯೋಗ

0

ಸಿ.ಎ.ನಿತ್ಯಾನಂದ ಪ್ರಭುವರವರಿಗೆ ಮಾತೃವಿಯೋಗ

ಕಾರ್ಕಳ ಜ್ಞಾನಸುಧಾದಲ್ಲಿ ಶ್ರದ್ಧಾಂಜಲಿ ಸಭೆ

ಕಾರ್ಕಳದ ಪ್ರಸಿದ್ಧ ಲೆಕ್ಕಪರಿಶೋಧಕ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿಯಾಗಿರುವ ಸಿ.ಎ ನಿತ್ಯಾನಂದ ಪ್ರಭುರವರ ತಾಯಿ ಸುಮಿತ್ರಾ ಪ್ರಭು (87) ಅವರು ಆದಿತ್ಯವಾರದಂದು ದೈವಾಧೀನರಾದರು. ಕೆರ್ವಾಶೆಯಲ್ಲಿ ಜನಿಸಿದ ಇವರು ಅಜೆಕಾರ್ ಗುಂಡುರಾಯ ಪ್ರಭುರವನ್ನು ವರಿಸಿ ಅಂಗಡಿ ವ್ಯಾಪಾರದಲ್ಲಿ 40ವರ್ಷಗಳಿಂದ ತೊಡಗಿಸಿಕೊಂಡ ಇವರಿಗೆ ಓರ್ವ ಪುತ್ರನನ್ನು ಹಾಗೂ ಮೂವರು ಪುತ್ರಿಯರನ್ನು, 9 ಮೊಮ್ಮಕ್ಕಳನ್ನು ಹಾಗೂ ಒಂದು ಮರಿಮೊಮ್ಮಗುವನ್ನು ಅಗಲಿದ್ದಾರೆ. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಕಾರ್ಕಳ ಜ್ಞಾನಸುಧಾದ ಮುಖ್ಯ ಸಭಾಂಗಣದಲ್ಲಿ ಅಗಲಿದ ದಿವ್ಯಚೇತನ ಸುಮಿತ್ರಾ ಪ್ರಭುರವರಿಗೆ ಸೋಮವಾರದಂದು ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಇದೇ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ ಸಾಹಿತ್ಯ, ಉಷಾ ರಾವ್ ಯು, ಉದ್ಯಮಿ ತ್ರಿವಿಕ್ರಮ ಕಿಣಿ, ಸುಮಿತ್ರಾ ಅವರ ಮೊಮ್ಮಗ, ಸಂಸ್ಥೆಯ ಇಂಟರ್ನಲ್ ಅಡಿಟರ್ ಸಿ.ಎ ವಿಘ್ನೇಶ್ ಕಾಮತ್ ಅವರು ಪುಷ್ಪನಮನವನ್ನು ಸಲ್ಲಿಸಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ನುಡಿನಮನ ಸಲ್ಲಿಸಿದರು.

ಇದೀಗ ಹೋಟೆಲ್ ಅನಘ ಗ್ರಾಂಡ್ ಸಂಪೂರ್ಣ ಹವಾ ನಿಯಂತ್ರಿತ ರೆಸ್ಟೋರೆಂಟ್

0

 

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ‘ಹೋಟೆಲ್ ಅನಘ ಗ್ರಾಂಡ್ ರೆಸ್ಟೋರೆಂಟ್’ ಇದೀಗ ಬೇಸಿಗೆಯ ಬೇಗೆಯನ್ನು ತಣಿಸಲು ಹವಾ ನಿಯಂತ್ರಿತವಾಗಿ ಗ್ರಾಹಕರ ಸೇವೆಗೆ ಲಭ್ಯವಾಗಿದೆ.

ಸೇವೆ ಹಾಗೂ ಸ್ವಚ್ಛತೆಯ ಮೂಲಕ ಗ್ರಾಹಕರಿಗೆ ಅಚ್ಚುಮೆಚ್ಚಿನ ಖಾದ್ಯಗಳನ್ನು ನೀಡುವುದರ ಮೂಲಕ ಗ್ರಾಹಕರ ಸಂಪೂರ್ಣ ಸಹಕಾರದಿಂದ ಕಾರ್ಕಳದ ಪುಲ್ಕೇರಿ ಬೈಪಾಸ್ ಜಂಕ್ಷನ್ ನಲ್ಲಿರುವ ಹೋಟೆಲ್ ಅನಘ ಗ್ರಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಯಶಸ್ವಿ ಉದ್ಯಮವನ್ನು ನಡೆಸುತ್ತಿದೆ.

ವಿಶಾಲವಾದ ಸ್ಥಳಾವಕಾಶ ಹೊಂದಿರುವ ಕ್ಯಾಬಿನ್, ಹವಾನಿಯಂತ್ರಿತ ಕ್ಯಾಬಿನ್, ಫ್ಯಾಮಿಲಿ ಕ್ಯಾಬಿನ್ ಪ್ರತ್ಯೇಕ ವ್ಯವಸ್ಥೆ ಹೊಂದಿದೆ.

ಸಭೆ ಸಮಾರಂಭ ಹಾಗೂ ಪಾರ್ಟಿಯ ವ್ಯವಸ್ಥೆಗೆ ಪಾರ್ಟಿ ಹಾಲ್ ಹಾಗೂ ಗಾರ್ಡನ್ ಸೌಲಭ್ಯವಿದ್ದು, ಲಿಫ್ಟ್ ಹಾಗೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 26ನೇ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

 

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ 26ನೇ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಘಟಕ ಮಟ್ಟದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವು ಕುಂಟಲಗುಂಡಿಯಲ್ಲಿರುವ ಸಂಘದ ರಜತ ಮಹೋತ್ಸವ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.

26ನೇ ವರ್ಷದ ನೂತನ ಅಧ್ಯಕ್ಷರಾಗಿ ಸುರೇಶ್ ಅಬ್ಬನಡ್ಕ ಅವರು ಪದಪ್ರದಾನ ಸ್ವೀಕರಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವರು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಬಾಗವಹಿಸಿ ಮಾತನಾಡಿ, ತಾಲೂಕಿನಲ್ಲಿ ನೂರಾರು ಸಂಘ ಸಂಸ್ಥೆಗಳಿವೆ ಅದರೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನಿರಂತರ ವರ್ಷಪೂರ್ತಿ ಜನಪರ ಕಾರ್ಯಕ್ರಮಗಳೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಹಾಗೂ ಇತರೆ ಸಂಘ ಸಂಸ್ಥೆಗಳಿಗೆ ಮಾದರಿ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದರು.

ವೇದಿಕೆಯಲ್ಲಿ ಕಂಬಳ ಕ್ಷೇತ್ರದ ಸಾಧಕರಾದ ಬೋಳದಗುತ್ತು ಸಂತೋಷ್ ಶೆಟ್ಟಿ, ಉದ್ಯಮಿ ಮರಿಮಾರಗುತ್ತು ಅವಿನಾಶ್ ಮಲ್ಲಿ, ಉದ್ಯಮಿ ಹರೀಶ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯುವ ಉದ್ಯಮಿ ಸುರೇಶ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

ಪದಗ್ರಹಣ ಸಮಾರಂಭದಲ್ಲಿ ಉಪಾಧ್ಯಕ್ಷರಾಗಿ ರಘುವೀರ್ ಶೆಟ್ಟಿ, ಕಾರ್ಯದರ್ಶಿಯಾಗಿ ಸತೀಶ್ ಅಬ್ಬನಡ್ಕ, ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ ಆಚಾರ್ಯ, ಕೋಶಾಧಿಕಾರಿಯಾಗಿ ಪ್ರದೀಪ್ ಸುವರ್ಣ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಸುಲೋಚನಾ ಕೋಟ್ಯಾನ್ ಅವರು ಪ್ರಮಾಣ ವಚನ ಸ್ವೀಕರಿಸಿದರು.

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಸ್ವಾಗತಿಸಿದರು, ವೀಣಾ ಆಚಾರ್ಯ, ಕಿರಣ್ ಶೆಟ್ಟಿ, ಅನ್ನಪೂರ್ಣ ಕಾಮತ್ ಅವರು ನೂತನ ಸದಸ್ಯರ ಪರಿಚಯ ವಾಚಿಸಿರು, ಪದ್ಮಶ್ರೀ ಪೂಜಾರಿ ಸನ್ಮಾನಿತರ ಪರಿಚಯ ವಾಚಿಸಿದರು, ನೂತನ ಕಾರ್ಯದರ್ಶಿ ಸತೀಶ್ ಅಬ್ಬನಡ್ಕ ವಂದಿಸಿದರು.

ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ಸಮಿತಿಗೆ ಪ್ರದಾನ ಕಾರ್ಯದರ್ಶಿಯಾಗಿ ರವಿಶಂಕರ ಶೇರಿಗಾರ್ ಆಯ್ಕೆ

0

 

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅನುಮೋದನೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿಯಾಗಿ ರವಿಶಂಕರ್ ಶೇರಿಗಾರ್ ರವರನ್ನು ಹಿಂದುಳಿದ ವರ್ಗಗಳ ಅಧ್ಯಕ್ಷ ಎಸ್. ಮಧುಬಂಗಾರಪ್ಪ ನೇಮಕ ಮಾಡಿದ್ದಾರೆ.

ರವಿಶಂಕರ್ ಶೇರಿಗಾರ್ ರವರು ಕಳೆದ 25 ವರ್ಷಗಳಿಂದ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಕಾರ್ಕಳ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಪ್ರದಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

2013ರಿಂದ 2018ರವರೆಗೆ ಭಾರತೀಯ ನೈರುತ್ಯ ರೈಲ್ವೆಯ ಸಲಹಾ ಸಮಿತಿ ಸದಸ್ಯರಾಗಿ 2017ರ ಗೋವಾ ರಾಜ್ಯದ ಪೋಂಡ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿಯಾಗಿ, ಎಐಸಿಸಿಯಿಂದ ನೇಮಕಗೊಂಡು ಪಕ್ಷದ ಅಭ್ಯರ್ಥಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಕೆಪಿಸಿಸಿ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು.

ತನ್ನನ್ನು ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ಸಮಿತಿಗೆ ಪ್ರದಾನ ಕಾರ್ಯದರ್ಶಿ ಸ್ಥಾನಕ್ಕೆ ಶಿಫಾರಸ್ಸು ಮಾಡಿದ ಡಾ.ಎಂ.ವೀರಪ್ಪ ಮೊಯ್ಲಿ ಅವರಿಗೆ, ಸಹಕರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್, ಉದಯ್ ಕುಮಾರ್ ಮುನಿಯಾಲು ,ಮಂಜುನಾಥ್ ಪೂಜಾರಿ ಮುದ್ರಾಡಿ ಅವರಿಗೆ ರವಿಶಂಕರ ಶೇರಿಗಾರ್ ಅವರು ಕೃತಜ್ಞತೆ ತಿಳಿಸಿದ್ದಾರೆ.

ದಿ. ಗೋಪಾಲ ಭಂಡಾರಿ ಪುತ್ರ ಸುದೀಪ್ ಭಂಡಾರಿ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಸಂತಾಪ

0

 

ಕಾರ್ಕಳದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಸುದೀಪ್ ಭಂಡಾರಿಯವರ ಅಗಲುವಿಕೆಯಿಂದ ಅಘಾತವಾಗಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ದೊರಕಲಿ ಎಂದು ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಅವರು ಸಂತಾಪ ಸೂಚಿಸಿದ್ದಾರೆ.