
ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಸುಧೀಕ್ಷಾ ಪೈ ಅವರು “A Psychoanalytical Study of Women Protagonists in Select Novels of Preeti Shenoy” ಎಂಬ ಶೀರ್ಷಿಕೆಯ ಪ್ರಬಂಧವನ್ನು ಯಶಸ್ವಿಯಾಗಿ ನಿರ್ವಹಿಸಿ ಡಾಕ್ಟರ್ ಆಫ್ ಫಿಲಾಸಫಿ (Ph.D.) ಪದವಿಯನ್ನು ಪಡೆದಿದ್ದಾರೆ. ಈ ಸಂಶೋಧನೆ ಲೂರ್ದುಸ್ವಾಮಿ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಂಡಿದೆ.
ಸುಧೀಕ್ಷಾ ಪೈ ಅವರು ಬಾಳೆಹೊನ್ನೂರು ನಿವಾಸಿಗಳಾದ ಸುರೇಂದ್ರ ಪೈ ಮತ್ತು ಸುಧಾ ಪೈ ಅವರ ಪುತ್ರಿ. ಅವರು ಕ್ರಿಯೇಟಿವ್ ಪಿಯು ಕಾಲೇಜು, ಕಾರ್ಕಳದ ಉಪನ್ಯಾಸಕರಾದ ಮಹೇಶ್ ಶೆಣೈ ಅವರ ಪತ್ನಿ ಹಾಗೂ ಪರಪ್ಪಾಡಿ ಸರಕಾರಿ ಪ್ರಾಥಮಿಕ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯರು ಪೂರ್ಣಿಮಾ ಶೆಣೈ ಅವರ ಸೊಸೆಯಾಗಿದ್ದಾರೆ.
ಪ್ರಸ್ತುತ ಅವರು ಕ್ರಿಯೇಟಿವ್ ಪಿಯು ಕಾಲೇಜು, ಕಾರ್ಕಳದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪೂರ್ವದಲ್ಲಿ ಎನ್‌ಎಂಎಎಮ್‌ಐಟಿ (NMAMIT), ನಿಟ್ಟೆ ಸಂಸ್ಥೆಯಲ್ಲಿ ಸಹ ಸೇವೆ ಸಲ್ಲಿಸಿದ್ದಾರೆ.
ಪ್ರೀತಿ ಶೆಣೈ ಅವರ ಕಾದಂಬರಿಗಳಲ್ಲಿನ ಮಹಿಳಾ ನಾಯಕಿಯರ ಮನೋವೈಜ್ಞಾನಿಕ ಅಂಶಗಳ ವಿಶ್ಲೇಷಣೆಯು ಸುಧೀಕ್ಷಾ ಪೈ ಅವರ ಸಂಶೋಧನೆಗೆ ಶೈಕ್ಷಣಿಕ ವಲಯದಿಂದ ವಿಶಿಷ್ಟ ಮೆಚ್ಚುಗೆ ವ್ಯಕ್ತವಾಗಿದೆ.












