ಕೆ.ಎಮ್.ಇ.ಎಸ್ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ
ವಿದ್ಯಾರ್ಥಿಗಳು ಇಷ್ಟ ಪಟ್ಟು ಓದ ಬೇಕು, ಕಷ್ಟ ಪಟ್ಟು ಅಲ್ಲ: ಬಾಲಕೃಷ್ಣ ನಾಯಕ್.
ಕೆ.ಎಮ್.ಇ.ಎಸ್ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಸರಕಾರಿ ಪ್ರೌಢ ಶಾಲೆಯ ಅಧ್ಯಾಪಕ ಬಾಲಕೃಷ್ಣ ನಾಯಕ್ ರವರು ಮಾತನಾಡುತ್ತಾ ‘ಕೇವಲ ಅಂಕಗಳನ್ನು ಪಡೆಯುವುದೇ ಶಿಕ್ಷಣವಲ್ಲ, ಮಾನವನು ಪ್ರಕೃತಿಯೊಂದಿಗೆ ಬೆರೆತು ಮೌಲ್ಯಾಧಾರಿತ ಶಿಕ್ಷಣವನ್ನು ಪಡೆಯಬೇಕು.ವಿದ್ಯಾರ್ಥಿಗಳು ತಮ್ಮಲ್ಲಿರುವ ಒಳ್ಳೆಯ ಗುಣಗಳ ಪಟ್ಟಿಯನ್ನು ಮಾಡಿ ಧನಾತ್ಮಕವಾಗಿ ಯೋಚಿಸಬೇಕು.ವಿದ್ಯಾರ್ಥಿಗಳು ಭವಿಷ್ಯದ ಒಳ್ಳೆಯ ಗುರಿಯ ಕನಸನ್ನು ಕಾಣಬೇಕು. ಯಶಸ್ಸು ಎಂಬುದು ಸತತ ಪರಿಶ್ರಮಗಳ ಪರಿಣಾಮವಾಗಿದೆ.ವಿದ್ಯಾರ್ಥಿಗಳು ಸಂತೋಷದಿಂದ, ಸಂತೋಷಕ್ಕಾಗಿ ಓದಬೇಕು. ತಾವು ಮಾಡುವ ಒಳ್ಳೆಯ ಕೆಲಸವನ್ನು ಪ್ರೀತಿಸಬೇಕು.’ ಎಂದರು.
ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿಯವರು ಮಾತನಾಡುತ್ತಾ ‘ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಗುರಿಯ ಕಡೆಗೆ ಸಾಗಬೇಕು.’ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ ರವರು ಮಾತನಾಡಿ ‘ವಿದ್ಯಾರ್ಥಿಗಳು ದಿನಚರಿಯನ್ನು ಬರೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳ ಬೇಕು, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಬರಬೇಕು’ ಎಂದರು.
ಜೀವಶಾಸ್ತ್ರ ಉಪನ್ಯಾಸಕರಾದ ಗುರು ಕುಮಾರ್ ರವರು ಸಾಯನ್ಸ್ ಪೆಸ್ಟ್ ನಲ್ಲಿ ಬಹುಮಾನ ವಿಜೇತರ ಪಟ್ಟಿಯನ್ನು ಓದಿದರು.ಮುಖ್ಯ ಅತಿಥಿ ಬಾಲಕೃಷ್ಣ ನಾಯಕ್ ರವರು ಸ್ಫರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಿದರು.
ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲೊಲಿಟಾ ಡಿ’ಸಿಲ್ವ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಟoಜಿಲ್,ಉಪಾಧ್ಯಕ್ಷೆ ಐಶ್ ಮೆಹರಿನ್ ವೇದಿಕೆಯಲ್ಲಿದ್ದರು.ವಿದ್ಯಾರ್ಥಿ ಅಮಾನ್ ಸ್ಟಾಗತಿಸಿದರು.ವಿ ದ್ಯಾರ್ಥಿನಿ ಕೃತಿಕಾ ಧನ್ಯವಾದ ಸಮರ್ಪಣೆಗೈದರು.ವಿದ್ಯಾರ್ಥಿನಿ ಅನುಷ್ಕಾ ಕಾರ್ಯಕ್ರಮ ನಿರ್ವಹಿಸಿರು.






