Thursday, April 30, 2026
Google search engine
Homeಕಾರ್ಕಳದ್ವಿತೀಯ ಪಿಯುಸಿ ಮರು ಮೌಲ್ಯಮಾಪನ: ಜ್ಞಾನಸುಧಾದ 59 ವಿದ್ಯಾರ್ಥಿ ಗಳಿಗೆ ರಾಜ್ಯಕ್ಕೆ ಅಗ್ರ ಹತ್ತ ರೊಳಗಿನ...

ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ: ಜ್ಞಾನಸುಧಾದ 59 ವಿದ್ಯಾರ್ಥಿ ಗಳಿಗೆ ರಾಜ್ಯಕ್ಕೆ ಅಗ್ರ ಹತ್ತ ರೊಳಗಿನ ರ‍್ಯಾಂಕ್; ಮಣಿಪಾಲ ಜ್ಞಾನಸುಧಾದ ಅಶ್ವಿನ್‌ಗೆ ರಾಜ್ಯಕ್ಕೆ ಮೂರನೇ ರ‍್ಯಾಂಕ್

ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಶ್ವಿನ್ ವಿ ಶೆಟ್ಟಿ 597 ದೊಂದಿಗೆ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಈಗಾಗಲೇ ಪ್ರಕಟಗೊಂಡ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾದ ವೈಷ್ಣವಿ ಕುಲಕರ್ಣಿ, ಚೈತ್ರಿಕ ಚೌದರಿ ಹಾಗೂ ಉಡುಪಿ ಜ್ಞಾನಸುಧಾದ ಆರ್ನವಿ ವಿಜ್ಞಾನ ವಿಭಾಗದಲ್ಲಿ 597 ಅಂಕಗಳನ್ನು ಪಡೆದಿದ್ದು ಒಟ್ಟು ಜ್ಞಾನಸುಧಾದ ನಾಲ್ಕು ವಿದ್ಯಾರ್ಥಿಗಳು ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಂತಾಗಿದೆ.

ಮರು ಮೌಲ್ಯಮಾಪನದ ಬಳಿಕ ಒಟ್ಟು ಜ್ಞಾನಸುಧಾ 59 ವಿದ್ಯಾರ್ಥಿಗಳು ರಾಜ್ಯಕ್ಕೆ ಅಗ್ರ ಹತ್ತರ ಒಳಗಿನ ರ‍್ಯಾಂಕ್ ಪಡೆದಿದ್ದಾರೆ. ಕಾರ್ಕಳ ಜ್ಞಾನಸುಧಾ, ಉಡುಪಿ ಜ್ಞಾನಸುಧಾ ಹಾಗೂ ಮಣಿಪಾಲ ಜ್ಞಾನಸುಧಾವು ಶೇ.100 ಫಲಿತಾಂಶವನ್ನು ಪಡೆದಿದ್ದು, ಒಟ್ಟು 966 ವಿದ್ಯಾರ್ಥಿಗಳಲ್ಲಿ 889(92%) ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಫಲಿತಾಂಶವನ್ನು ದಾಖಲಿಸಿಕೊಂಡಿದ್ದಾರೆ. ಅಜೆಕಾರ್ ಪದ್ಮಗೋಪಲ್ ಎಜುಕೇಶನ್ ಟ್ರಸ್ಟ್ನ ಮೂರನೇ ಅಂಗ ಸಂಸ್ಥೆಯಾದ ಮಣಿಪಾಲ ಜ್ಞಾನಸುಧಾ ದಲ್ಲಿಯೂ ರ‍್ಯಾಂಕ್ ಪಡೆದಿರುವುದು ಸಂತಸವಾಗಿದೆ ಎಂದು ಅಜೆಕಾರ್ ಪದ್ಮಗೋಪಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments