ಮರ್ಣೆ ಗ್ರಾಮದ ಕಾಡುಹೊಳೆ ಕೋಟೆ ಮಜಲು ಬ್ರಿಡ್ಜ್ ಬಳಿ ಕಾರಿಗೆ ಮಿನಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ಏ. 29ರಂದು ವರದಿಯಾಗಿದೆ.
ದಾವಣಗೆರೆ ಹೊನ್ನಾಳಿ ಗ್ರಾಮದ ಬಸವರಾಜ್ ಕೆ (43), ಇವರು ಬ್ರೀಜಾ ಕಾರಿನಲ್ಲಿ ಶೈಲೇಶ್, ವೀಣಾರವರೊಂದಿಗೆ ಹೊನ್ನಾಳಿಯಿಂದ ಮೂಡಿಬಿದ್ರೆ ಕಡೆಗೆ ಬರುತ್ತಿರುವಾಗ, ಅಜೆಕಾರು ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಮಿನಿ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಪರಿಣಾಮ ವೀಣಾ, ಶೈಲೀಶ್ ಮತ್ತು ಬಸವರಾಜ್ ಕೆ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























