ಬ್ರಹ್ಮ ಕಲಶಾಭಿಷೇಕದ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಇಂದು ಗುರುವಾರ ನಾಗಶಿಲಾ ಪ್ರತಿಷ್ಠೆ, ಆಶ್ಲೇಷಾ ಬಲಿ, ಶ್ರೀ ಗಣಪತಿ ದೇವರಿಗೆ, ಶ್ರೀ ಅನ್ನಪೂರ್ಣೇಶ್ವರಿ ದೇವರಿಗೆ ಕಲಶಾಭಿಷೇಕ, ಶಾಂತಿ, ಪ್ರಾಯಶ್ಚಿತ್ತ ಹೋಮ, ಶ್ರೀ ಶಂಕರಲಿಂಗೇಶ್ವರ ದೇವರಿಗೆ ತತ್ವ ಕಲಶಾಭಿಷೇಕ ನಡೆಯಿತು.
ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವಾ ಭಟ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್,ರ್ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನಾ ಸಮಿತಿ, ವಿವಿಧ ಉಪಸಮಿತಿಯ ಪ್ರಮುಖರು, ಸದಸ್ಯರು,ಗಣ್ಯರು, ಅರ್ಚಕ ವೃಂದ ಸೇರಿದಂತೆ ಭಕ್ತಸಮೂಹ ಭಾಗಿಯಾದರು.




























