ಬ್ರಹ್ಮಕಲಶಾಭಿಷೇಕ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ಧ ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಕಾಲಾವಧಿ ರಥೋತ್ಸವ ಇಂದು(ಸೋಮವಾರ) ಸಂಜೆ ನಡೆಯಲಿದೆ.
ಮಧ್ಯಾಹ್ನ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ರಥರೋಹಣ ನಡೆಯಿತು. ಸಾವಿರಾರು ಭಕ್ತರು ಮಹಾ ಅನ್ನಸಂತರ್ಪಣೆ ಸ್ವೀಕರಿಸಿದರು. ಇಂದು ಸಂಜೆ ವೈಭವದ ರಥೋತ್ಸವ ನಡೆಯಲಿದೆ.





























