ತಮಿಳುನಾಡಿನ ಹಾಲಿ ಡಿಸಿಎಂ ಉದಯನಿಧಿ ಸ್ಟಾಲಿನ್ ತಮ್ಮ ಚೆಪಾಕ್-ತಿರುವಲ್ಲಿಕೇನಿ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಜಯ ಸಾಧಿಸಿದ್ದಾರೆ.
ಉದಯನಿಧಿ 7140 ಮತಗಳ ಅಂತರದಿಂದ ಟಿವಿಕೆ ಅಭ್ಯರ್ಥಿ ಡಿ. ಸೆಲ್ವಂ ಅವರನ್ನು ಸೋಲಿಸಿದ್ದಾರೆ. ಉಧಯನಿಧಿ ಒಟ್ಟು 62992 ಮತಗಳನ್ನು ಪಡೆದುಕೊಂಡಿದ್ದಾರೆ. ಹಾಲಿ ಸಿಎಂ ಸ್ಟಾಲಿನ್ ‘ ಅವರ ಸೋಲಿನ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಡಿಎಂಕೆ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಈಗ ಉದಯನಿಧಿ ಸ್ಟಾಲಿನ್ ಅವರ ಹೆಗಲಿಗೆ ಬೀಳುವ ಸಾಧ್ಯತೆಯಿದೆ. ಗೆದ್ದ ಬಳಿಕ ಮಾತನಾಡಿದ ಅವರು, ಜನರ ತೀರ್ಪಿಗೆ ನಾವು ತಲೆಬಾಗುತ್ತೇವೆ ಎಂದಿದ್ದಾರೆ.





























