ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರಿಗೆ ರಾಷ್ಟ್ರಮಟ್ಟದಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೆವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಎನ್.ಡಿ.ಎ. ಲಿಖಿತ ಪರೀಕ್ಷೆಯಲ್ಲಿ ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಅಭಿಷೇಕ್ ಡಿ ಜಿ
, ಕೆ. ಎಸ್ ಗಣೇಶ
, ಕಾನಿಷ್ಕ್ ಎಸ್. ಅಮೀನ್
, ಮೋದಕ್ ಪಿ. ಆರ್
, ಎನ್ ಎಸ್ ವಿವೇಕ್
, ನಿಧೀಶ್ ಸುದೀಪ್ ಕುಮಾರ್
, ರೋಚಕ್ ಪ್ರಮೋದ್ ಬಡಿಗೇರ್
, ಸಾಯಿರಾಘವೇಂದ್ರ ಬಿ.ಎಸ್
, ಶ್ರೀನಿವಾಸ ರೆಡ್ಡಿ ಮೇಟಿ
, ವೀರೇಶ್ ಜಗದೀಶ್ ತೇಲಿ
ಹಾಗೂ ವಿಶಾಲ್
ತೇರ್ಗಡೆಗೊಂಡಿದ್ದಾರೆ.
ಇತ್ತೀಚೆಗೆ ನಡೆದ ರಾಷ್ಟç ಮಟ್ಟದ ಜೆಇಇ ಮೈನ್ ಪರೀಕ್ಷೆಯಲ್ಲಿ 10 ವಿದ್ಯಾರ್ಥಿಗಳು ಬಿ.ಟೆಕ್‌ನಲ್ಲಿ, 6 ವಿದ್ಯಾರ್ಥಿಗಳು ಬಿ.ಆರ್ಕ್ನಲ್ಲಿ, 11 ವಿದ್ಯಾರ್ಥಿಗಳು ಬಿ.ಪ್ಲಾನಿಂಗ್‌ನಲ್ಲಿ 99 ಪರ್ಸೆಂಟೇಜ್ ಗಿಂತ ಅಧಿಕ ಅಂಕ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.
ಸಾಧಕರನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ ಹಾಗೂ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.






























