Thursday, May 14, 2026
Google search engine
Homeಕಾರ್ಕಳರೋಟರಿ ಕ್ಲಬ್ ಕಾರ್ಕಳ : "ಕುಟುಂಬ ಸಮ್ಮಿಲನ " ಕಾರ್ಯಕ್ರಮ; ಡಾ. ಜೀವನ್...

ರೋಟರಿ ಕ್ಲಬ್ ಕಾರ್ಕಳ : “ಕುಟುಂಬ ಸಮ್ಮಿಲನ ” ಕಾರ್ಯಕ್ರಮ; ಡಾ. ಜೀವನ್ ರಾಮ್ ಸುಳ್ಯಇವರಿಗೆ ಸನ್ಮಾನ

ರೋಟರಿ ಕ್ಲಬ್ ಕಾರ್ಕಳದ “ಕುಟುಂಬ ಸಮ್ಮಿಲನ ” ಕಾರ್ಯಕ್ರಮದಲ್ಲಿ ಆಳ್ವಾಸ್ ನ
ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಜೀವನ್ ರಾಮ್ ಸುಳ್ಯ ಇವರನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಪೂರ್ವ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಡಾ. ಜೀವನ್ ರಾಮ್ ಸುಳ್ಯ ಅವರು “ರಂಗಭೂಮಿ ಮತ್ತು ಬದುಕು” ಎಂಬ ವಿಷಯದ ಕುರಿತು ಮನಮುಟ್ಟುವಂತೆ ಹಾಗೂ ಚಿಂತನೆಗೆ ದಾರಿ ಮಾಡುವ ರೀತಿಯಲ್ಲಿ ಉಪನ್ಯಾಸ ನೀಡಿದರು. ರಂಗಭೂಮಿಯು ವ್ಯಕ್ತಿತ್ವ ವಿಕಾಸಕ್ಕೆ ನೀಡುವ ಕೊಡುಗೆ, ಕಲೆಯ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯತೆ ಮತ್ತು ಜೀವನದಲ್ಲಿ ಶಿಸ್ತು, ಸಂಸ್ಕಾರ ಹಾಗೂ ಸೃಜನಶೀಲತೆಯ ಮಹತ್ವವನ್ನು ಅವರು ವಿವರಿಸಿದರು. ಅವರ ಮಾತುಗಳು ಸಭಿಕರಲ್ಲಿ ವಿಶೇಷ ಸ್ಪಂದನೆ ಮೂಡಿಸಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ರೋ. ಕೆ. ನವೀನ್ ಚಂದ್ರ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೋ. PDG ಡಾ. ಭರತೇಶ ಆದಿರಾಜ್, ರೋ. ಉದಯಕುಮಾರ್ ಶೆಟ್ಟಿ ಮುನಿಯಾಲು, ರೋ. ಬಾಲಕೃಷ್ಣ ಶೆಟ್ಟಿ, ರೋ. ವಸಂತ್ ಎಂ. ಹಾಗೂ ಕಾರ್ಯದರ್ಶಿ ರೋ. ಚೇತನ್ ನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕ್ಲಬ್ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments