ಕಾರ್ಕಳ ತಾಲೂಕಿನ ಚೌಕಿ ಎಂಬಲ್ಲಿ ತೋಟದ ಶೆಡ್ ಒಂದರಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ ಅಂತೋಣಿ (60) ಮಲಗಿದ್ದಲ್ಲಿಯೇ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರು 5 ವರ್ಷಗಳಿಂದ ಮಾಳ ಗ್ರಾಮದ ಬೈಜು ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಮೇ 20ರಂದು ಮಧ್ಯಾಹ್ನವಾದರೂ ಊಟಕ್ಕೆ ಬಾರದೆ ಇದ್ದಾಗ ತೋಟದ ಮಾಲಕರ ತಾಯಿ ಹೋಗಿ ನೋಡಿದ್ದಾರೆ. ಈ ವೇಳೆ ತೋಟದ ಶೆಡ್‌ನಲ್ಲಿ ಅಂತೋಣಿ ಅವರು ಮಲಗಿದ್ದಲ್ಲಿ ಹೃದಯಾಘಾತದಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತರ ಅಳಿಯ ವಸಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
































