Friday, May 22, 2026
Google search engine
Homeಕಾರ್ಕಳಕಾರ್ಕಳ: ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡುವ ಕೇರಳ ಮೂಲದ ಕಾರ್ಮಿಕ ಅನಾರೋಗ್ಯದಿಂದ ಸಾವು

ಕಾರ್ಕಳ: ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡುವ ಕೇರಳ ಮೂಲದ ಕಾರ್ಮಿಕ ಅನಾರೋಗ್ಯದಿಂದ ಸಾವು

ಹೊಸ್ಮಾರಿನ ರಬ್ಬರ್ ತೋಟವೊಂದರಲ್ಲಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿ ವಿಪರೀತ ಕುಡಿತದ ಚಟದಿಂದ ಅನಾರೋಗ್ಯಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತರನ್ನು ಮಹಮ್ಮದ್ ಕುಂಜು ಎಂದು ಗುರ್ತಿಸಲಾಗಿದ್ದು, ಇವರು ತೀವ್ರ ಮದುಮೇಹ ಹಾಗೂ ಮದ್ಯಪಾನ ವ್ಯಸನಿಯಾಗಿದ್ದರು ಎನ್ನಲಾಗಿದೆ. ಕಳೆದ 3 ವರ್ಷಗಳಿಂದ ಹೊಸ್ಮಾರಿನಲ್ಲಿ ಮಧುಕರ ಶೆಟ್ಟಿ ಮತ್ತು ವಿನು ಕರುಣಾಕರ ಎಂಬವರ ಜಂಟಿ ಮಾಲಕತ್ವದ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇವರು, ಶೆಡ್ ನಲ್ಲಿ ಮಂಗಳವಾರದಂದು ಮಲಗಿದ್ದ ಸಮಯದಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದು, ಬಳಿಕ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆಮೃತರ ಪುತ್ರಿ ನೀಡಿದ ದೂರಿನ ಅನ್ವಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments