Saturday, May 30, 2026
Google search engine
Homeಕಾರ್ಕಳಉಡುಪಿ ಜ್ಞಾನಸುಧಾಪ.ಪೂ.ಕಾಲೇಜಿನ ಪ್ರಾರಂಭೋತ್ಸವ : ಅರ್ಹ ವಿದ್ಯಾರ್ಥಿಗಳಿಗೆ 19.23 ಲಕ್ಷರೂ. ವಿದ್ಯಾರ್ಥಿ ವೇತನ

ಉಡುಪಿ ಜ್ಞಾನಸುಧಾಪ.ಪೂ.ಕಾಲೇಜಿನ ಪ್ರಾರಂಭೋತ್ಸವ : ಅರ್ಹ ವಿದ್ಯಾರ್ಥಿಗಳಿಗೆ 19.23 ಲಕ್ಷರೂ. ವಿದ್ಯಾರ್ಥಿ ವೇತನ

ನಮ್ಮಲ್ಲಿರುವ ವಿಶೇಷತೆಯನ್ನುಅರಿತು, ಜ್ಞಾನದ ಜೊತೆಗೆ ಸಾಗಬೇಕು. ಶಿಕ್ಷಣ ಒಂದು ತಪಸ್ಸು ಇದ್ದಂತೆ. ಅದನ್ನು ಸಾಧಿಸುವ ಮನೋಬಲ ನಮ್ಮಲ್ಲಿರಬೇಕು. ವೈಯಕ್ತಿಕ ಹಿತಾಸಕ್ತಿಗಿಂತ ಹೆತ್ತವರ ಆಸೆ ಆಕಾಂಕ್ಷೆಗಳಿಗೆ ಬೆಲೆಕೊಟ್ಟವರು ಎಂದೂ ಸೋಲುವುದಿಲ್ಲ. ಜ್ಞಾನಸುಧಾದಲ್ಲಿರುವ ವಿವಿಧ ರೀತಿಯ ವಿದ್ಯಾರ್ಥಿ ವೇತನದ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ಇವರು ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನಲ್ಲಿ ಆಯೋಜಿಸಿದ ಪ್ರಾರಂಭೊತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಕಳ ಜ್ಞಾನಸುಧಾ ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾಗಿರುವ ದಿನೇಶ್ ಎಂ ಕೊಡವೂರು ಮಾತನಾಡಿ ನಮ್ಮಅಧ್ಯಕ್ಷ ಡಾ.ಸುಧಾಕರ ಶೆಟ್ಟಿಯವರ ಜೀವನವೇ ನಮಗೆ ಆದರ್ಶ, ಅವರ ಮಾರ್ಗದರ್ಶನದಂತೆ ನಾಲ್ಕು ಸಂಸ್ಥೆಗಳು ಒಟ್ಟಾಗಿ ದುಡಿಯಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್‌ ಅಕಾಡೆಮಿಕ್ಸ್ ಆಗಿರುವ ಡಾ. ಮಿಥುನ್‌ ಯು. ಮಾತನಾಡಿ ಎರಡು ವರ್ಷಗಳ ಶೈಕ್ಷಣಿಕ ಚಟುವಟಿಕೆಗಳು ಸಾಗುವ ಬಗೆಯನ್ನು ವಿವರಿಸಿದರು.

ಈ ಸಂದರ್ಭದಲ್ಲಿಅಜೆಕಾರು ಪದ್ಮಗೋಪಾಲ್‌ಎಜ್ಯುಕೇಶನ್‌ ಟ್ರಸ್ಟ್ನ ವತಿಯಿಂದ ಉಡುಪಿ ಜ್ಞಾನಸುಧಾ ಕಾಲೇಜಿಗೆ ದಾಖಲಾತಿ ಹೊಂದಿದ 47 ಅರ್ಹ ವಿದ್ಯಾರ್ಥಿಗಳಿಗೆ 19.23 ಲಕ್ಷರೂ. ವಿದ್ಯಾರ್ಥಿವೇತನ ನೀಡಲಾಯಿತು.

ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿಧಿ ಭಾಗವತ್‌ರವರು ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ಮಣಿಪಾಲ ಜ್ಞಾನಸುಧಾದ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಅಜೆಕಾರು ಜ್ಞಾನಸುಧಾದ ಪ್ರಾಂಶುಪಾಲರಾದ ಸಂತೋಷ್, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಕೊ-ಆರ್ಡಿನೇಟರ್‌ ಆಗಿರುವ ಸಂದೀಪ್‌ ಉಪಸ್ಥಿತರಿದ್ದರು. ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆ ಕೀರ್ತಿ ಹರೀಶ್‌ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments