ಆಟೋರಿಕ್ಷಾ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ, ರಿಕ್ಷಾ ಪ್ರಯಾಣಿಕ ಸಾವನ್ನಪ್ಪಿದ ಘಟನೆ ಜಾರಿಗೆಕಟ್ಟೆಯಲ್ಲಿ ನಡೆದಿದೆ. ಶ್ರೀಕಾಂತ್ ಮೃತ ದುರ್ದೈವಿ.
ಜಾರಿಗೆ ಕಟ್ಟೆ-ಮೂಡಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಸಚ್ಚರಿಪೇಟೆ ಕಡೆಯಿಂದ ಜಾರಿಗೆ ಕಟ್ಟೆ ಕಡೆಗೆ ಮಹಮ್ಮದ್ ಕೈಫ್ ಎನ್ನುವಾತ ರಿಕ್ಷಾದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿ, ವಾಹನ ಚಲಾಯಿಸಿಕೊಂಡು ಬಂದು ಜಾರಿಗೆಕಟ್ಟೆ ಬಳಿ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೆ ಕಾರಣನಾಗಿದ್ದಾನೆ.
ಘಟನೆಯಲ್ಲಿ ರಿಕ್ಷಾ ಚಾಲಕ ಹಾಗೂ ಪ್ರಯಾಣಿಕನಿಗೆ ಗಾಯಗಳಾಗಿದ್ದು, ಗಂಭೀರ ಗಾಯಗೊಂಡ ಪ್ರಯಾಣಿಕ ಶ್ರೀಕಾಂತ್ ನನ್ನು ಕಿನ್ನಿಗೋಳಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















