Thursday, June 4, 2026
Google search engine
Homeಕಾರ್ಕಳಅಜೆಕಾರು: ಶಾಲೆಯಲ್ಲಿ ಕಸ ಸುಡುವ ವೇಳೆ ವಿದ್ಯಾರ್ಥಿಗಳಿಗೆ ಸುಟ್ಟ ಗಾಯ; ಶಿಕ್ಷಕರ ಮೇಲೆ ನಿರ್ಲಕ್ಷತನದ ಆರೋಪ

ಅಜೆಕಾರು: ಶಾಲೆಯಲ್ಲಿ ಕಸ ಸುಡುವ ವೇಳೆ ವಿದ್ಯಾರ್ಥಿಗಳಿಗೆ ಸುಟ್ಟ ಗಾಯ; ಶಿಕ್ಷಕರ ಮೇಲೆ ನಿರ್ಲಕ್ಷತನದ ಆರೋಪ

ಕಸವನ್ನು ಸುಡುತ್ತಿದ್ದ ವೇಳೆ ಡಬ್ಬದಂತಹ ವಸ್ತು ಸ್ಪೋಟಗೊಂಡು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಕುಕ್ಕುಜೆ ಶಾಲೆಯಲ್ಲಿ ಜೂ. 3 ರಂದು ನಡೆದಿದೆ. ಸಂಸ್ಕೃತ್ (12), ಗಗನ್ (12), ಹೃತ್ವಿಕ್(12), ಶಿಕ್ಷಕಿ ಅರುಣಾಕ್ಷಿ ಅವರ ಸಂಬಂದಿ ಅದ್ವಿನ್(11) ಗಾಯಗೊಂಡವರು.

ದೈಹಿಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕೊಠಡಿಯನ್ನು ಸ್ವಚ್ಛಗೊಳಿಸಲು ತಿಳಿಸಿದ್ದು, ನಂತರ ಅಲ್ಲಿನ ಕಸವನ್ನು ಒಂದು ಕಡೆ ಸುರಿದು, ಬೆಂಕಿ ಹಾಕಿ ಸುಡಲು ಸೂಚಿಸಿದ್ದಾರೆ ಎನ್ನಲಾಗಿದೆ. ಶಿಕ್ಷಕರ ಸೂಚನೆಯಂತೆ ನಾಲ್ವರು ಮಕ್ಕಳು ಕಸ ಸುಡುತ್ತಿದ್ದ ವೇಳೆ ಏಕಾಏಕಿ ಡಬ್ಬದಂಥ ವಸ್ತು ಸ್ಪೋಟಗೊಂಡು ನಾಲ್ವರು ಮಕ್ಕಳಿಗೂ ಗಾಯಗಳಾಗಿದೆ.

ನಿರ್ಲಕ್ಷತನದಿಂದ ಶಾಲೆಯ ಮಕ್ಕಳಿಗೆ ಕಸಕ್ಕೆ ಬೆಂಕಿ ಹಾಕಲು ಹೇಳಿ ಸೂಕ್ತ ಮುಂಜಾಗ್ರತೆ ವಹಿಸದೇ ಇರುವುದು ಘಟನೆಗೆ ಕಾರಣವಾಗಿದೆ ಎಂದು ಪೋಷಕರೋರ್ವರು ನೀಡಿದ ದೂರಿನ ಅನ್ವಯ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments