‘ಕಾರ್ಕಳ ಟೈಗರ್ಸ್’ ಅಬ್ಬರಕ್ಕೆ ವೇದಿಕೆ ಸಜ್ಜಾದ ವೇದಿಕೆ
ಇಂದು ಊದು ಪೂಜೆ ನಾಳೆ ಪಿಲಿ ರಂಗ್ ದೈಸಿರ
ಪಶ್ಚಿಮ ಘಟ್ಟದ ತಪ್ಪಲಲ್ಲಿ ಹುಲಿ ಹೆಜ್ಜೆ…
ಅಕ್ಟೋಬರ್ ೪ ಹಾಗೂ ೫ ರಂದು ಪಿಲಿ ರಂಗ್ ದೈಸಿರ
ಕಾರ್ಕಳದಲ್ಲಿ ಈ ವರ್ಷದಲ್ಲಿ ಕಾರ್ಕಳ ಟೈಗರ್ಸ್ ಬಹಳ ಸದ್ದು ಮಾಡತೊಡಗಿದೆ. ಈ ಕಾರ್ಕಳ ಟೈಗರ್‍ಸ್‌ನ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗವು ಇಂದು (ಅಕ್ಟೋಬರ್ 4) ಹಾಗೂ ನಾಳೆ (ಅಕ್ಟೋಬರ್ 5) ಕಾರ್ಕಳದಲ್ಲಿ ಪಿಲಿ ರಂಗ್ ದೈಸಿರ ಎಂಬ ವಿಶೇಷ ಕಾರ್ಯ ಕ್ರಮವನ್ನು ಹಮ್ಮಿ ಕೊಂಡಿದೆ.
ಕಾರ್ಕಳ ಟೈಗರ್ಸ್ ನ ಚಿಂತನೆಗಳೇ ವಿಶೇಷವಾದುದು. ಕಾರ್ಕಳದಲ್ಲಿನ ಜನರನ್ನು ರಾಜಕೀಯ ಮಾತ್ರವಲ್ಲ ಸಮಾಜ ಸೇವೆಯ ಮೂಲಕವೂ ತಲುಪಲು ಸಾಧ್ಯವಿದೆ ಎಂಬುದನ್ನು ಈ ಸಂಘಟನೆ ಜನರಿಗೆ ಮನದಟ್ಟು ಮಾಡ ಹೊರಟಿರುವುದೇ ಕಾರ್ಕಳದ ವಿಶೇಷವಾಗಿದೆ.
2023ನೇ ಸಾಲಿನ ಡಿಸೆಂಬರ್ ತಿಂಗಳ 10ನೇ ತಾರೀಕಿನಂದು ಮಕ್ಕಳಿಗೆ ಹುಲಿವೇಷ ಕಲಿಸಬೇಕೆಂಬ ನಿಟ್ಟಿನಲ್ಲಿ ಆರಂಭಗೊಂಡಿತು ಈ ಟೈಗರ್ಸ್ ಸಂಘಟನೆ.ಕಾರ್ಕಳದಲ್ಲಿ ಬಹಳಷ್ಟು ಪ್ರಖ್ಯಾತಿ ಪಡೆದಿರುವ ಗೇರುಬೀಜ ಉದ್ಯಮಿ ಬೋಳ ಪ್ರಶಾಂತ್ ಕಾಮತ್‌ರ ಮಿತ್ರರು ಅವರ ಅಭಿಮಾನಿ ಬಳಗವನ್ನು ಮಾಡಿ ಕೊಂಡು ಈ ವಿಶೇಷ ಸಂಘಟನೆ ಕಟ್ಟಲು ಮುನ್ನಡಿ ಇಟ್ಟಿರುವುದೇ ಈ ಸಂಘಟನೆ ಇಂದು ಕಾರ್ಕಳದಲ್ಲಿ ಪ್ರಬಲಗೊಳ್ಳಲು ಕಾರಣವಾಗಿದೆ.
ಆರಂಭಗೊಂಡ ಕೇವಲ ಹತ್ತೇ ತಿಂಗಳಲ್ಲಿ ಸುಮಾರು 75 ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿದ ಹೆಗ್ಗಳಿಕೆ ಈ ಸಂಘಟನೆಯದ್ದು. ವಿದ್ಯಾರ್ಥಿಗಳಿಗೆ ಸಹಕಾರ, ಅನಾರೋಗ್ಯ ಪೀಡಿತರಿಗೆ ಸಹಕಾರ, ಸಂಸ್ಕ್ರತಿ ಉಳಿಸುವ ನಿಟ್ಟಿನಲ್ಲಿ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ ಹಾಗೂ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಈ ಸಂಘಟನೆ ಸಮಾಜಕ್ಕೆ ಮಾದರಿಯಾಗಿದೆ.
ಸಂಸ್ಕೃತಿ, ಸಂಸ್ಕಾರ ಉಳಿಸುವ ಕಾರ್ಯಕ್ರಮಗಳಿಗೆ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ಮಾಡುವ ಮೂಲಕ ಈ ಸಂಘಟನೆ ಜನಾನುರಾಗಿಯಾಗಿದೆ. ಒಂದರ್ಥದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಸೇವೆ ಮಾಡುವುದಲ್ಲ, ಸಾಮಾಜಿಕ ಸೇವೆಯ ಮೂಲಕವೂ ಜನರನ್ನು ತಲುಪಲು ಸಾಧ್ಯ ವಾಗುತ್ತದೆ ಎಂಬುದನ್ನು ಈ ಸಂಘಟನೆ ತೋರಿಸಿ ಕೊಟ್ಟಿರುವುದು ನಿಜಕ್ಕೂ ಎಲ್ಲರೂ ಹೆಮ್ಮೆ ಪಡ ಬೇಕಾದ ವಿಚಾರ.
ಕಾರ್ಯಕ್ರಮಗಳು:ಎರಡು ದಿನಗಳಲ್ಲಿ ಕಾರ್ಕಳದಲ್ಲಿ ಪಿಲಿ ರಂಗ್ ದೈಸಿರ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 4 ರಂದು ಶುಕ್ರವಾರ ಸಂಜೆ ಕಾರ್ಕಳ ಸಾಲ್ಮರದ ಇಂದ್ರ ಪ್ರಸ್ಥ (ಗುರುದೀಪ್ ಗಾರ್ಡನ್)ನಲ್ಲಿ ಸಂಜೆ ಗಂಟೆ 6 ರಿಂದ ಊದು ಪೂಜೆ ಆರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಹುಲಿ ವೇಷಧಾರಿಗಳಿಗೆ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳ ಬೇಕಿದೆ.ಅಕ್ಟೋಬರ್ 5 ರಂದು ಕಾರ್ಕಳದ ಅನಂತ ಶಯನದಿಂದ ಬಂಡಿ ಮಠದವರೆಗೆ ಶೋಭಾ ಯಾತ್ರೆ ನಡೆಯಲಿದೆ ಈ ಶೋಭ ಯಾತ್ರೆಯು ಕಾರ್ಕಳದಲ್ಲಿ ಬಹಳಷ್ಟು ಮಂದಿ ಜನರನ್ನು ಆಕರ್ಷಿಸಲಿದೆ.
ಈ ಮೆರವಣಿಗೆಯಲ್ಲಿ 100 ಹುಲಿ ವೇಷಧಾರಿಗಳು ೨2 ಟ್ರೈಲರ್ ವಾಹನದಲ್ಲಿ ಅಬ್ಬರಿಸಲಿದ್ದಾರೆ.5 ವಾಹನಗಳಲ್ಲಿ ಸಂಸ್ಕೃತಿಯುಕ್ತ ನವ ದುರ್ಗೆ, ಶಾರದಾ, ಭಾರತ ಮಾತೆ, ಶಿವಾಜಿ, ಸಾವರ್ಕರ್ ಹೀಗೆ ಹಲವಾರು ಸ್ಥಬ್ಧ ಚಿತ್ರಗಳು ಪ್ರದರ್ಶನಗೊಳ್ಳಲಿದೆ.ಮೆರವಣಿಗೆ ಬಂಡಿ ಮಠದಲ್ಲಿ ಸಮಾಪನ ಗೊಳ್ಳಲಿದ್ದು ಅಲ್ಲಿ ಹುಲಿ ನೃತ್ಯ ಪ್ರದರ್ಶನಗೊಳ್ಳಲಿದೆ.
ಬೋಳ ಪ್ರಶಾಂತ್ ಕಾಮತ್
ತೆರೆ ಮರೆಯಲ್ಲಿ ಸಮಾಜ ಸೇವೆ ಮಾಡುತ್ತಿದ್ದ ಬೋಳ ಪ್ರಶಾಂತ್ ಕಾಮತ್ ಎಂಬ ಯುವಕನನ್ನು ಸಮಾಜ ಸೇವೆಗೆ ತರಲೇ ಬೇಕೆಂಬ ಪಣ ತೊಟ್ಟ ಅವರ ಹಿತೈಷಿಗಳ ಪ್ರಯತ್ನವೇ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ಕಾರ್ಕಳ ಟೈಗರ್‍ಸ್‌ನ ಆರಂಭಕ್ಕೆ ಕಾರಣವಾಗಿದೆ.
ಕಾರ್ಕಳದಲ್ಲಿ ಜನ ಸಂಘ ಹಾಗೂ ಬಿಜೆಪಿಯನ್ನು ಪ್ರಬಲವಾಗಿ ಕಟ್ಟಲು ನಿರಂತರ ಹೋರಾಟ ಮಾಡಿದವರು ಕಾರ್ಕಳದ ಬೋಳ ಪ್ರಭಾಕರ ಕಾಮತ್‌ರು. ಬೋಳ ಪ್ರಭಾಕರ ಕಾಮತ್ ಎಂದರೆ ಕಾರ್ಕಳ ತಾಲೂಕು ಮಾತ್ರವಲ್ಲದೆ ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ಪ್ರಭಾವೀ ಹೆಸರು. ಕಾರ್ಕಳದಲ್ಲಿ ಬಿಜೆಪಿ ಪಕ್ಷವು ಪರಿಣಾಮಕಾರಿಯಾಗಿ ಇಂದಿನ ಮಟ್ಟದಲ್ಲಿ ಸಾಗ ಬೇಕಾದರೆ ಅವರು ಅಂದಿನ ದಿನಗಳಿಂದಲೂ ಮಾಡಿದ ಹೋರಾಟಕ್ಕೆ ಯಾರು ಕೂಡಾ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ.
ಅವರ ಪಕ್ಷ ಸಿದ್ದಾಂತ, ಆದರ್ಶಗಳು ಪ್ರಸ್ತುತ ಸಮಾಜಕ್ಕೆ ಬಹಳ ಅಗತ್ಯವಾದುದಾಗಿದೆ. ಅವರ 4ಮಂದಿ ಮಕ್ಕಳಲ್ಲಿ ಬೋಳ ಶ್ರೀನಿವಾಸ ಕಾಮತ್ ಹಾಗೂ ಬೋಳ ಪ್ರಶಾಂತ್ ಕಾಮತ್‌ರು ಸಾಮಾಜಿಕ ಕ್ಷೇತ್ರದಲ್ಲಿ ಬಹಳ ಪ್ರಮುಖವಾದವರು. ಅವರಲ್ಲಿ ಬೋಳ ಪ್ರಶಾಂತ್ ಕಾಮತ್‌ರ ಮಿತ್ರರು ಒಗ್ಗೂಡಿ ಬೋಳ ಪ್ರಶಾಂತ್ ಕಾಮತ್‌ರು ತೆರೆ ಮರೆಯಲ್ಲಿ ಮಾಡುತ್ತಿದ್ದ ಸಮಾಜ ಸೇವೆಯನ್ನು ಸಮಾಜದ ಮುಂದಿಡುವ ಪ್ರಯತ್ನವೇ ಈ ಸಂಘಟನೆಯ ಉಗಮಕ್ಕೆ ಕಾರಣವಾಗಿದೆ.