ಕಾರ್ಕಳ ಕಡೆಯಿಂದ ಅಜೆಕಾರು ಕಡೆಗೆ ಚಲಿಸುತ್ತಿದ್ದ ಕಾರಿಗೆ ಇನ್ನೊಂದು ಕಾರು ಹಿಂದಿನಿಂದ ಬಂದು ಡಿಕ್ಕಿಯಾದ ಘಟನೆ ಕಾರ್ಕಳದ ಕುಕ್ಕುದಕಟ್ಟೆ ಬಳಿ ನಡೆದಿದೆ.
ನಾಭಿರಾಜ್ ಜೈನ್ ಎನ್ನುವವರು ಜೋಡುರಸ್ತೆ ಕಡೆಯಿಂದ ಅಜೆಕಾರು ಕಡೆಗೆ ಕಾರು ಚಲಾಯಿಸುತ್ತಾ ಕುಕ್ಕುದಕಟ್ಟೆ ಬಳಿ ಸಮೀಪಿಸುವ ವೇಳೆ, ಹರೀಶ್ ಎಂಬವರು ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ನಾಭಿರಾಜ್ ಅವರ ಕಾರಿನ ಹಿಂಭಾಗಕ್ಕೆ ಡಿಕ್ಕಿಯಾಗಿದ್ದಾರೆ. ಡಿಕ್ಕಿಯ ಪರಿಣಾಮ ಎರಡೂ ಕಾರುಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಘಟನೆ ಬಗ್ಗೆ ನಾಭಿರಾಜ್ ಜೈನ್ ಅವರು ನೀಡಿದ ದೂರಿನ ಅನ್ವಯ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















