ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ರೋಟರಿ ಕ್ಲಬ್ ಮಣಿಪಾಲದ ಜಂಟಿ ಆಶ್ರಯದೊಂದಿಗೆ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನೊಲೊಜಿ ಮಾಹೆಯ ಸಹಾಯಕ ಪ್ರಾಧ್ಯಾಪಕ ನೌಷ ಶೆಟ್ಟಿಯವರು ಪ್ಲಾಸ್ಟಿಕ್ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ರಾಜವರ್ಮ ಪರಿಸರ ಸಂರಕ್ಷಣೆಯ ನಮ್ಮೆಲ್ಲರ ಹಕ್ಕು ಎಂದು ಮಾರ್ಗದರ್ಶನ ನೀಡಿದರು. ರೋಟರಿ ಕ್ಲಬ್ ಮಣಿಪಾಲದ ಕಾರ್ಯದರ್ಶಿ ವಾಣಿಶ್ರೀ ಹಾಗೂ ರೊಟೆರಿಯನ್ ರಾಜವರ್ಮ ಅರಿಗ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಗಿಡ ನೆಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ್ ಶೆಟ್ಟಿ, ಜೆ.ಇ.ಇ/ನೀಟ್ ಫೌಂಡೇಷನ್ ಸ್ಟ್ಯೂಡೆಂಟ್ ಕೋರ್ಡಿನೇಟರ್ ಶ್ರೀಮತಿ ಶಮಿತ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೃಕೃತಿ ಕಾರ್ಯಕ್ರಮ ನಿರ್ವಹಿಸಿ,ಗಣಿತ ಶಿಕ್ಷಕ ಕಿಶನ್ ನಾಯಕ್ ವಂದಿಸಿದರು.


















