ಕಾರ್ಕಳ ತಾಲೂಕಿನ ಕಾಬೆಟ್ಟುವಿನಲ್ಲಿ ಮುಖ್ಯಮಂತ್ರಿಯಿಂದ ಉದ್ಘಾಟನೆಗೊಂಡ ನೂತನ ಡಾ. ಬಿ.ಆರ್. ಅಂಬೇಡ್ಕರ್ ಭವನದ ನಿರ್ವಹಣಾ ಸಮಿತಿಗೆ ಪದಾಧಿಕಾರಿಗಳನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ತಾಲೂಕು ತಹಶೀಲ್ದಾರ್ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಪುರಸಭಾ ಮಾಜಿ ಅಧ್ಯಕ್ಷೆ ಶ್ರೀಮತಿ ಪ್ರತಿಮಾ ರಾಣೆ, ದಲಿತ ಮುಖಂಡರುಗಳಾದ ಅಣ್ಣಪ್ಪ ನಕ್ರೆ ಹಾಗೂ ಸುರೇಶ್ ಚೇತನಹಳ್ಳಿ ಇವರುಗಳನ್ನು ಸದಸ್ಯರನ್ನಾಗಿ ಸರ್ಕಾರ ನಾಮ ನಿರ್ದೇಶಗೊಳಿಸಿ ಆದೇಶ ಹೊರಡಿಸಿದೆ.



















