Saturday, June 13, 2026
Google search engine
Homeಕಾರ್ಕಳ41 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ; 10 ಆರೋಪಿಗಳ ಬಂಧನ

41 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ; 10 ಆರೋಪಿಗಳ ಬಂಧನ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 41 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಜೂನ್ 3 ರ ರಾತ್ರಿ ಈ ಘಟನೆ ನಡೆದಿದ್ದು, ಮಂಗಳವಾರ ಎಫ್‌ಐಆರ್ ದಾಖಲಿಸಲಾಗಿದೆ.

ಸಾಮೂಹಿಕ ಅತ್ಯಾಚಾರ, ಫೋಟೋಗಳು/ವಿಡಿಯೋಗಳನ್ನು ಪ್ರಸಾರ ಮಾಡುವುದು ಮತ್ತು ಅವರಾಧಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಸವಪಟ್ಟಣ ಪೊಲೀಸರು ಒಬ್ಬ ಅಪ್ರಾಪ್ತ ವಯಸ್ಕ ಸೇರಿದಂತೆ 10 ಆರೋಪಿಗಳನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಚನ್ನಗಿರಿ ತಾಲ್ಲೂಕಿನ ಹಳ್ಳಿಯ ನಿವಾಸಿಗಳಾದ ಚಟಕಿ ನಾಗರಾಜ್, ಇಸ್ತ್ರೀ ನಾಗರಾಜ್, ಮಧು, ಅರ್ಜುನ, ಬಸವಂತ್, ಕುಂದೂರ ಮಾರುತಿ, ಮನು, ಜೋಗಿ ಸುನೀಲ ಮತ್ತು ಪ್ರದೀಪ್ ಅವರನ್ನು ಅಪರಾಧಕ್ಕಾಗಿ ಬಂಧಿಸಲಾಗಿದೆ. ಆರೋಪಿಗಳ ಬೈಕ್ ಮತ್ತು ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಒಬ್ಬನನ್ನು ಹೊರತುಪಡಿಸಿ ಉಳಿದ ಎಲ್ಲಾ ಆರೋಪಿಗಳು 19 ರಿಂದ 30 ವರ್ಷ ವಯಸ್ಸಿನವರು.

ದಿನಗೂಲಿ ಕೆಲಸ ಮಾಡುತ್ತಿದ್ದ ಮಹಿಳೆ, ತನ್ನ ಮದ್ಯವ್ಯಸನಿ ಪತಿಯೊಂದಿಗೆ ಜಗಳವಾಡಿದ ನಂತರ ಜೂನ್ 3 ರಂದು ರಾತ್ರಿ ಒಂಟಿಯಾಗಿ ತನ್ನ ಊರಿಗೆ ನಡೆದುಕೊಂಡು ಹೋಗುತ್ತಿದ್ದರು.ಆರೋಪಿಗಳು ಮನೆಗೆ ಬಿಡುವುದಾಗಿ ಭರವಸೆ ನೀಡಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಆಕೆಗೆ ತಿಳಿಯದಂತೆ ಅವರು ತಂಪು ಪಾನೀಯದಲ್ಲಿ ನಿದ್ರಾಜನಕ ಬೆರೆಸಿ ನೀಡಿ ಕೃಷಿ ಭೂಮಿಗೆ ಕರೆದೊಯ್ದರು. ಅಲ್ಲಿ ಪುರುಷರ ಗುಂಪೊಂದು ಆಕೆಯ ಮೇಲೆ ಅತ್ಯಾಚಾರ ಎಸಗಿತು. ಮರುದಿನ ಬೆಳಿಗೆ ಆಕೆ ಎಚ್ಚರಗೊಂಡು ತನ್ನ ಊರಿಗೆ ಮರಳಿದಳು.

ಮೊಬೈಲ್ ಫೋನ್‌ಗಳಲ್ಲಿ ಮಹಿಳೆಯ ಆಕ್ಷೇಪಾರ್ಹ ಫೋಟೊಗಳು ಮತ್ತು ವೀಡಿಯೊಗಳು ಹರಿದಾಡುತ್ತಿವೆ ಎಂದು ತಿಳಿದ ನಂತರ ಸೋಮವಾರ ರಾತ್ರಿ ಸಂತ್ರಸ್ತೆಯ ಕುಟುಂಬ ದೂರು ದಾಖಲಿಸಿದೆ.

ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆ, 1989 ಮತ್ತು ಸಾಮೂಹಿಕ ಅತ್ಯಾಚಾರ ಕಾಯ್ಕೆಯಡಿ ಪ್ರಕರಣ ದಾಖಲಿಸಲಾಗಿದೆ.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments