Thursday, June 25, 2026
Google search engine
Homeಕಾರ್ಕಳಕಾರ್ಕಳ: ಎಸ್.ಐ.ಆರ್. ತರಬೇತಿ; ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಮಹತ್ವವನ್ನು ಸಭೆ

ಕಾರ್ಕಳ: ಎಸ್.ಐ.ಆರ್. ತರಬೇತಿ; ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಮಹತ್ವವನ್ನು ಸಭೆ

ದಿನಾಂಕ ಜೂ.24 ರಂದು ಕಾರ್ಕಳದ ಮಂಜುನಾಥ್ ಪೈ ಸಭಾಂಗಣದಲ್ಲಿ ತಾಲೂಕಿನ ಎಲ್ಲಾ ಬಿ ಎಲ್ ಓ ಮತ್ತು ಬಿ ಎಲ್ ಎ ಗಳ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ಮಾನ್ಯ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ., ಯವರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಮಹತ್ವವನ್ನು ಸಭೆಗೆ ತಿಳಿಸಿದರು. ಮಾನ್ಯ ಅಪರ ಜಿಲ್ಲಾಧಿಕಾರಿಗಳಾದ ಅಬೀದ್ ಗದ್ಯಾಳ ರವರು ಪರಿಷ್ಕರಣೆಯ ಅವಧಿಯಲ್ಲಿ ಬಿ. ಎಲ್. ಓ. ಮತ್ತು ಬಿ. ಎಲ್. ಎ. ಗಳ ಪಾತ್ರವನ್ನು ವಿವರಿಸಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ನೊಂದಣಅಧಿಕಾರಿ ಸುಬ್ರಮಣ್ಯ ಸೆಟ್ಟಿ, ತಹಸೀಲ್ದಾರರಾದ ಪ್ರದೀಪ್ ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಗಂಗಾಧರ, ಅರವಿಂದ ಕೆ.ಎನ್. ಪ್ರಮೋದ್ ನಾಯ್ಕ್, ರವರು ಪರಿಷ್ಕರಣೆಯ ಮೊದಲ ಹಂತದ ಜವಾಬ್ದಾರಿಗಳ ಬಗ್ಗೆ ಸವಿಸ್ತಾರವಾಗಿ ತರಬೇತಿ ನೀಡಿದರು. ಸಭಾ ಕಾರ್ಯಕ್ರಮವನ್ನು ಪ್ರಮೋದ್ ನಾಯ್ಕ್ ಸ್ವಾಗತಿಸಿ ನಿರೂಪಿಸಿದರೆ, ತಹಸೀಲ್ದಾರರಾದ ಪ್ರದೀಪ್ ಆರ್. ವಂದನಾರ್ಪಣೆಗೈದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments